'ಚಿತ್ರ ಲೋಕ' ಗೆ ಯು ಟ್ಯೂಬ್ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ
ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎನಿಸಿರುವ ಚಿತ್ರಲೋಕ ಡಾಟ್ ಕಾಮ್ ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಯು ಟ್ಯೂಬ್ ನಲ್ಲಿ ಚಿತ್ರ ಲೋಕ ಚಾನೆಲ್ ಗೆ ಒಂದು ಲಕ್ಷ ಸಬ್ ಸ್ಕ್ರೈಬರ್ಸ್ ಆಗಿದ್ದಾರೆ.
Published: 02nd December 2020 12:25 AM | Last Updated: 02nd December 2020 12:13 PM | A+A A-

ವಿರೇಶ್
ಬೆಂಗಳೂರು: ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎನಿಸಿರುವ ಚಿತ್ರಲೋಕ ಡಾಟ್ ಕಾಮ್ ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಯು ಟ್ಯೂಬ್ ನಲ್ಲಿ ಚಿತ್ರ ಲೋಕ ಚಾನೆಲ್ ಗೆ ಒಂದು ಲಕ್ಷ ಸಬ್ ಸ್ಕ್ರೈಬರ್ಸ್ ಆಗಿದ್ದಾರೆ. ಈ ಸಾಧನೆಯನ್ನು ಗುರುತಿಸಿರುವ ಯು ಟ್ಯೂಬ್ ಸಂಸ್ಥೆಯು, ಯು ಟ್ಯೂಬ್ ಸಿಲ್ವರ್ ಕ್ರಿಯೇಟರ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಯು ಟ್ಯೂಬ್ ನಲ್ಲಿ ಯಾವುದೇ ಚಾನೆಲ್ ಗೆ ಒಂದು ಲಕ್ಷ ಚಂದಾದಾರಾದ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಯನ್ನು ಪಡೆದಿರುವ ಕನ್ನಡ ಕೆಲವು ಬೆರಳಣಿಕೆಯಷ್ಟು ಚಾನೆಲ್ ಗಳಲ್ಲಿ ಚಿತ್ರ ಲೋಕ ಸಹ ಒಂದಾಗಿರುವುದು ವಿಶೇಷವಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಯೂ ಟ್ಯೂಬ್ ನ ಚಿತ್ರ ಲೋಕ ಚಾನೆಲ್ ನಲ್ಲಿ ಹಲವು ವಿಭಿನ್ನ ಮತ್ತು ವಿನೂತನ ಹೆಜ್ಜೆಗಳನ್ನು ಇಟ್ಟಿದೆ. ಡಾ. ರಾಜ್ ಕುಮಾರ್ ಅವರ ಕಿಡ್ನಾಪ್ ಕುರಿತು ಯಾರಿಗೂ ಗೊತ್ತಿಲ್ಲದ ಮತ್ತು ಇದುವರೆಗೂ ಯಾರೂ ಕೇಳರಿಯದ ಹಲವು ವಿಷಯಗಳನ್ನು ತನ್ನ ಯುಟ್ಯೂಬ್ ಚಾನೆಲ್ ನ ಮೂಲಕ ಚಿತ್ರ ಲೋಕ ಹಂಚಿಕೊಂಡಿದೆ.
ಡಾ. ರಾಜ್ ಕುಮಾರ್ ಅವರ ಹತ್ತಿರದವರಿಂದ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ, ಕೆಲವರನ್ನು ನೇರವಾಗಿ ಸಂದರ್ಶನ ಮಾಡಿ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ ಎಂದು ಚಿತ್ರಲೋಕ ಡಾಟ್ ಕಾಮ್ ನ ವಿರೇಶ್ ಮಾಹಿತಿ ನೀಡಿದ್ದಾರೆ.