'ದುಬಾರಿ' ಧ್ರುವ ಸರ್ಜಾ ಗೆ ಶ್ರೀಲೀಲಾ ಹೀರೋಯಿನ್!

ಈಗಾಗಲೇ ಸೆಟ್ಟೇರಿರುವ ನಟ ಧ್ರುವ ಸರ್ಜಾ ಅವರ 5ನೇ ಸಿನಿಮಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. 
ಶ್ರೀಲೀಲಾ
ಶ್ರೀಲೀಲಾ

ಈಗಾಗಲೇ ಸೆಟ್ಟೇರಿರುವ ನಟ ಧ್ರುವ ಸರ್ಜಾ ಅವರ 5ನೇ ಸಿನಿಮಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. 

ಕಿಸ್ ಹಾಗೂ ಭರಾಟೆ ಖ್ಯಾತಿಯ ನಟಿ ಶ್ರೀಲೀಲಾ ಅವರು ಧ್ರುವ ಸರ್ಜಾ ಜೊತೆಗೆ ದುಬಾರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ದುಬಾರಿ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಭರದಿಂದ ಸಾಗಿದ್ದು, ಇದೇ ತಿಂಗಳ ಕೊನೆಗೆ ಚಿತ್ರದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. 

“ಕಿಸ್‌’ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್‌ ವುಡ್‌ಗೆ ಪರಿಚಯವಾಗಿದ್ದ ಶ್ರೀಲೀಲಾ ಆನಂತರ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಎರಡು-ಮೂರು ಬಿಗ್‌ ಬಜೆಟ್‌, ಬಿಗ್‌ ಸ್ಟಾರ್ ಚಿತ್ರಗಳಲ್ಲಿ ನಾಯಕಿಯ ಪಟ್ಟಕ್ಕೆ ಶ್ರೀಲೀಲಾ ಹೆಸರು ಕೇಳಿ ಬಂದಿತ್ತಾದರೂ, ಯಾವುದೇ ಚಿತ್ರಗಳು ಅಧಿಕೃತವಾಗಿ ಶ್ರೀಲೀಲಾ ಹೆಸರನ್ನು ಅನೌನ್ಸ್‌ ಮಾಡಿರಲಿಲ್ಲ. 

ಇದೀಗ “ದುಬಾರಿ’ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರವಾಗಿದ್ದು, ಚಿತ್ರತಂಡ ಅಧಿಕೃತವಾಗಿ ನಾಯಕಿಯ ಹೆಸರನ್ನು ಅನೌನ್ಸ್‌ ಮಾಡಿದೆ. 

ಉದಯ್‌ ಮೆಹ್ತಾ ಬ್ಯಾನರ್‌ನಡಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ “ದುಬಾರಿ’ ಚಿತ್ರಕ್ಕೆ ನಂದ ಕಿಶೋರ್‌ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಸದ್ಯ ಹೀರೋಯಿನ್‌ ಹೆಸರು ಅನೌನ್ಸ್‌ ಮಾಡಿರುವ ಚಿತ್ರತಂಡ, ಇದೇ ತಿಂಗಳಕೊನೆಗೆ ಚಿತ್ರದ ಇತರಕಲಾವಿದರು ಮತ್ತು ತಂತ್ರಜ್ಞರ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com