'ಮತ್ತೆ ಉದ್ಭವ' ನನ್ನ ಸಿನಿಮಾ ವೃತ್ತಿ ಜೀವನದಲ್ಲಿಯೇ ಅತ್ಯಂತ ತೃಪ್ತಿ ನೀಡಿದ ಚಿತ್ರ: ಕೊಡ್ಲು ರಾಮಕೃಷ್ಣ

ಉದ್ಭವ ಸಿನಿಮಾ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. 91ರ ದಶದಲ್ಲಿಯೇ ಹೊಸ ಕಲ್ಪನೆಯೊಂದಿಗೆ ಬಂದ ಉದ್ಭವ ಎಲ್ಲರ ಮನಸ್ಸಿನೊಳಗೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅದ್ಭುತ...
'ಮತ್ತೆ ಉದ್ಭವ' ನನ್ನ ಸಿನಿಮಾ ವೃತ್ತಿ ಜೀವನದಲ್ಲಿಯೇ ಅತ್ಯಂತ ತೃಪ್ತಿ ನೀಡಿದ ಚಿತ್ರವಾಗಿದೆ: ಕೊಡ್ಲು ರಾಮಕೃಷ್ಣ
'ಮತ್ತೆ ಉದ್ಭವ' ನನ್ನ ಸಿನಿಮಾ ವೃತ್ತಿ ಜೀವನದಲ್ಲಿಯೇ ಅತ್ಯಂತ ತೃಪ್ತಿ ನೀಡಿದ ಚಿತ್ರವಾಗಿದೆ: ಕೊಡ್ಲು ರಾಮಕೃಷ್ಣ

ಉದ್ಭವ ಸಿನಿಮಾ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. 91ರ ದಶದಲ್ಲಿಯೇ ಹೊಸ ಕಲ್ಪನೆಯೊಂದಿಗೆ ಬಂದ ಉದ್ಭವ ಎಲ್ಲರ ಮನಸ್ಸಿನೊಳಗೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅದ್ಭುತ ಕಥೆಯೊಂದಿಗೆ ಕೊಡ್ಲು ರಾಮಕೃಷ್ಣ ಹಾಗೂ ಅನಂತ್ ನಾಗ್ ಜೋಡಿ ಗೆದ್ದಿತ್ತು. ಉದ್ಭವ ಚಿತ್ರದಿಂದ ಪ್ರೇರಣೆ ಪಡೆದು ಇದೀಗ ಆಧುನಿಕ ಯುಗಕ್ಕೆ ತಕ್ಕಂತೆ ಕೊಡ್ಲು ರಾಮಕೃಷ್ಣ ಅವರು ಮತ್ತೆ ಉದ್ಭವ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಕೊಡ್ಲು ರಾಮಕೃಷ್ಣ ಅವರು ಚಂದನವನದ ಹಿರಿಯ ನಿರ್ದೇಶಕರಾಗಿದ್ದು, ಹಲವು ಸದಾಭಿರುಚಿಯ ಸಿನಿಮಾಗಳನ್ನು ನೀಡಿದವರಾಗಿದ್ದಾರೆ. ಅವರ ಬಹುತೇಕ ಚಿತ್ರಗಳು ಕಾದಂಬರಿಯಾಧಾರಿತ ಸಾಮಾಜಿಕ, ರಾಜಕೀಯ ಅವ್ಯವಸ್ಥೆಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸುವ ಅವರ ಶೈಲಿ ಎಲ್ಲರಿಗೂ ಅಚ್ಚುಮಚ್ಚು. ಈಗಾಗಲೇ ಉದ್ಭವ ಚಿತ್ರದಲ್ಲಿ ಜನರ ಮನಗೆದ್ದಿರವ ರಾಮಕೃಷ್ಣ ಅವರು ಇದೀಗ ಮತ್ತೆ ಉದ್ಭವ ಚಿತ್ರದಲ್ಲೂ ಜನರ ಮನಗೆಲ್ಲಲು ಪ್ರಯತ್ನ ನಡೆಸಿದ್ದಾರೆ. 

ಚಿತ್ರವನ್ನು ರಾಜಕೀಯ ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದ್ದು, ಚಿತ್ರದಲ್ಲಿ ಪ್ರಮೋದ್, ಮಿಲನಾ ನಾಗರಾಜ್, ರಂಗಾಯಣ ರಘು, ಅವಿನಾಶ್ ಮತ್ತು ಮೋಹನ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು. ಚಿತ್ರ ಫೆ.7ರಂದು ಬಿಡುಗಡೆಯಾಗಲಿದೆ. 

ಒಬ್ಬ ಸಾಹಿತಿ ಹಾಗೂ ನಿರ್ದೇಶಕನಾಗಿ ಮತ್ತೆ ಉದ್ಭವ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದೆ. ಉದ್ಭವ ಚಿತ್ರವನ್ನು ಪ್ರೇಕ್ಷಕರು ಸಾಕಷ್ಟು ಇಷ್ಟ ಪಟ್ಟಿದ್ದರು. ಇದೀಗ ಮತ್ತೆ ಉದ್ಭವ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು ಚಿತ್ರವು ಮಾಸ್ ಎಂಟರ್ಟೈನರ್ ಆಗಿರಲಿದೆ. ಇತ್ತೀಚಿನ ಆಧುನಿಕ ಯುಗಕ್ಕೆ ತಕ್ಕಂತೆ ಚಿತ್ರವನ್ನು ಸಿದ್ಧಪಡಿಸಲಾಗಿದೆ. ಪ್ರೀತಿ, ಭಾವನೆ ಹಾಗೂ ಸಾಹಸಮಯ ಎಲ್ಲವನ್ನೂ ಸೇರಿಸಿ ಚಿತ್ರವನ್ನು ತಯಾರಿಸಲಾಗಿದೆ ಎಂದು ಕೋಡ್ಲು ರಾಮಕೃಷ್ಣ ಅವರು ಹೇಳಿದ್ದಾರೆ. 

ಮತ್ತೆ ಉದ್ವ ಚಿತ್ರ ಕಥೆಯನ್ನು 5 ವರ್ಷಗಳಿಂದ ಸಿದ್ಧಪಡಿಸಲಾಗಿತ್ತು. ಆಧುನಿಕ ಯುಗಕ್ಕೆ ಕನ್ನಡಿ ಹಿಡಿದ ರೀತಿಯಲ್ಲಿ ಚಿತ್ರವನ್ನು ತಯಾರಿಸಲಾಗಿದೆ. ಕಳೆದ 5 ವರ್ಷಗಳಾದ ಕೆಲ ಬೆಳವಣಿಗೆಗಳನ್ನು ತೆಗೆದುಕೊಳ್ಳಲಾಗಿದೆ. ಮತ್ತೆ ಉದ್ಧವ ನನ್ನ ಸಿನಿಮಾ ವೃತ್ತಿಜೀವನದಲ್ಲಿಯೇ ಅತ್ಯಂತ ಹೆಚ್ಚು ತೃಪ್ತಿ ನೀಡಿದ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com