ದರ್ಶನ್ ನಟನೆಯ ರಾಬರ್ಟ್ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ರಿಲೀಸ್

ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದ ದರ್ಶನ್ ಅಭಿನಯದ  ರಾಬರ್ಟ್ ಸಿನಿಮಾ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.

Published: 22nd February 2020 11:26 AM  |   Last Updated: 22nd February 2020 11:26 AM   |  A+A-


A Still from Robert

ರಾಬರ್ಟ್ ಸಿನಿಮಾ ಪೋಸ್ಟರ್

Posted By : Shilpa D
Source : The New Indian Express

ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದ ದರ್ಶನ್ ಅಭಿನಯದ  ರಾಬರ್ಟ್ ಸಿನಿಮಾ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.

ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ಜೋಡಿಯಲ್ಲಿ ಬರುತ್ತಿರುವ ರಾಬರ್ಟ್ ಮಾಸ್ ಸಿನಿಮಾವಾಗಿದೆ.  ಇದೇ ಸಮಯದಲ್ಲಿ ತೆಲುಗು ಪ್ರೇಕ್ಷಕರಿಗೋಸ್ಕರವೂ ಕೆಲಸ ನಡೆಯುತ್ತಿದೆ. ಈ ಸಂಬಂಧ ಟಾಲಿವುಡ್ ನಿರ್ಮಾಪಕರ ಜೊತೆ ಚರ್ಚೆ ನಡೆಸಲಾಗಿದೆ.

ದರ್ಶನ್ ಹಿಂದಿನ ಸಿನಿಮಾ ಕುರುಕ್ಷೇತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗಿತ್ತು.  ಹೀಗಾಗಿ ರಾಬರ್ಟ್ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಲ್ಲಿ ಅಂದರೆ ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಮಾಡಲು  ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಮೋಷನಲ್ ಥ್ರಿಲ್ಲರ್ ಕಥೆಯಾಗಿರುವ ರಾಬರ್ಟ್ ಸಿನಿಮಾದಲ್ಲಿಆಶಾ ಭಟ್ ನಾಯಕಿಯಾಗಿದ್ದಾರೆ. ಜಗಪತಿ ಬಾಬು, ರವಿ ಶಂಕರ್, ವಿನೋದ್ ಪ್ರಭಾಕರ್ ಮತ್ತು ಸೋನಾಲ್ ಮಾಂಟೆರಿಯೋ, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp