ವೈರಲ್ ಆಗುತ್ತಿದೆ ನಿಖಿಲ್ ಕುಮಾರಸ್ವಾಮಿ ವಿವಾಹ ನಕಲಿ ಆಮಂತ್ರಣ ಪತ್ರಿಕೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಹಾಗೂ ರೇವತಿ ಮದುವ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. 

Published: 25th February 2020 08:35 AM  |   Last Updated: 25th February 2020 08:50 AM   |  A+A-


nikhil fake marriage invitation goes viral on social media

ವೈರಲ್ ಆಗುತ್ತಿದೆ ನಿಖಿಲ್ ಕುಮಾರಸ್ವಾಮಿ ವಿವಾಹ ನಕಲಿ ಆಮಂತ್ರಣ ಪತ್ರಿಕೆ

Posted By : Manjula VN
Source : Online Desk

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಹಾಗೂ ರೇವತಿ ಮದುವ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. 

4 ಪುಟಗಳಿರುವ ಆಮಂತ್ರಣ ಪತ್ರಿಕೆಯಲ್ಲಿ ಕುಮಾರಸ್ವಾಮಿ ಕೈಬರಹದ ಮಾದರಿ ಪತ್ರವೊಂದು ಗಮನ ಸೆಳೆದಿದೆ. ಆದರೆ, ಈ ಆಹ್ವಾನ ಪತ್ರಿಕೆ ಮತ್ತು ಕೈ ಬರಹ ನಕಲಿಯಾಗಿದ್ದು, ಕುಮಾರಸ್ವಾಮಿ ಅವರ ಸಹಿಯೂ ನಕಲಿ ಎಂದು ಹೇಳಲಾಗುತ್ತಿದೆ. 

ತಾವಿನ್ನೂ ಆಮಂತ್ರಣ ಪತ್ರಿಕೆ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಕುಮಾರಸ್ವಾಮಿಯವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ. 

ಶ್ರೀಮತಿ ಚನ್ನಮ್ಮ ಮತ್ತು ಶ್ರೀ ಹೆಚ್.ಡಿ.ದೇವೇಗೌಡರ ಹೆಸರಿನ ಮೂಲಕವೇ ಪ್ರಾರಂಭಗೊಂಡಿರುವ ನಕಲಿ ಆಹ್ವಾನ ಪತ್ರಿಕೆಯಲ್ಲಿ ಏ.17ರ ಶುಕ್ರವಾರ ಬೆಳಿಗ್ಗೆ 9.15ರಿಂದ 9.40ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ರಾಮನಗರದ ಜಾನಪತ ಲೋಕ ಸಮೀಪದ ಸಪ್ತಪದಿ ಮಂಟಪದಲ್ಲಿ ನಿಖಿಲ್ ಹಾಗೂ ರೇವತಿಯವರ ವಿವಾಹ ನೆರವೇರಲಿದೆ ಎಂದು ಮುದ್ರಿಸಲಾಗಿದೆ. 

ಮತದಾರರ ಭಿನ್ನಹದಲ್ಲಿ ಹೆಚ್ ಡಿ. ಕುಮಾರಸ್ವಾಮಿ ತಮ್ಮ ರಾಜಕೀಯ ಜೀವನ ವಿವರಿಸಿದ್ದು, ಕೊನೆ ನಾಲ್ಕು ಸಾಲುಗಳಲ್ಲಿ ಮತದಾರರನ್ನು ಮದುವೆಗೆ ಆಹ್ವಾನಿಸಿದ್ದರೆ. ಪತ್ರದ ಕೊನೆಯಲ್ಲಿ ಅವರ ಸಹಿಯನ್ನೂ ಹಾಕಿರುವುದು ಕಂಡು ಬಂದಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp