'ಭಜರಂಗಿ 2' ತಂಡದಿಂದ ಶಿವರಾಜ್ ಕುಮಾರ್ ಗೆ ಕಾದಿದೆ ಅಚ್ಚರಿ!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಂತೋಷದ ಹಾಗೂ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 12 ರಂದು ಹ್ಯಾಟ್ರಿಕ್ ಹಿರೋ ಹುಟ್ಟುಹಬ್ಬದ ಪ್ರಯುಕ್ತ ಭಜರಂಗಿ 2 ಚಿತ್ರದ ದೃಶ್ಯ ವಿಡಿಯೋವೊಂದನ್ನು ಬಿಡುಗಡೆ ಮಾಡಲು ನಿರ್ದೇಶಕ ಎ. ಹರ್ಷ ಎದುರು ನೋಡುತ್ತಿದ್ದಾರೆ.

Published: 18th June 2020 11:32 AM  |   Last Updated: 18th June 2020 12:10 PM   |  A+A-


A_Still_from_Bajarangi_21

ಭಜರಂಗಿ -2 ಚಿತ್ರದ ಸ್ಟಿಲ್

Posted By : Nagaraja AB
Source : The New Indian Express

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಂತೋಷದ ಹಾಗೂ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 12 ರಂದು ಹ್ಯಾಟ್ರಿಕ್ ಹಿರೋ ಹುಟ್ಟುಹಬ್ಬದ ಪ್ರಯುಕ್ತ ಭಜರಂಗಿ 2 ಚಿತ್ರದ ದೃಶ್ಯ ವಿಡಿಯೋವೊಂದನ್ನು ಬಿಡುಗಡೆ ಮಾಡಲು ನಿರ್ದೇಶಕ ಎ. ಹರ್ಷ ಎದುರು ನೋಡುತ್ತಿದ್ದಾರೆ.

ಟ್ರೈಲರ್ ಮತ್ತು ಟೀಸರ್ ಗೆ ಬದಲಾಗಿ ಹೊಸ ಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಒಂದೂವರೆ ನಿಮಿಷದ ವಿಡಿಯೋದಲ್ಲಿ ಶಿವಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದದಾರೆ. ಇದು ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡುವುದು ಖಾತ್ರಿಯಾಗಿದೆ ಎಂದು ಹರ್ಷ ಹೇಳಿದ್ದಾರೆ. 

ಶಿವಣ್ಣನನ್ನು ಹೊಸ ರೀತಿಯಲ್ಲಿ ನೋಡಲು ಬಯಸಿರುವ ಹರ್ಷ, ಈ ಚಿತ್ರ ಹೇಗೆ ಟ್ರೆಂಡಿಯಾಗಿ ಇರಲಿದೆ ಎಂಬುದನ್ನು ವೀಕ್ಷಕರಿಗೆ ವಿಡಿಯೋದಲ್ಲಿ ವಿವರಣೆ ನೀಡಲಾಗುವುದು, ಆದರೆ, ಕಥೆಯನ್ನು ಹೇಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. 

ಈ ಮಧ್ಯೆ 10 ದಿನಗಳ ಚಿತ್ರೀಕರಣದ ಬಾಕಿ ಉಳಿದಿದ್ದು, ಮರು ಚಿತ್ರೀಕರಣಕ್ಕೆ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಈಗ ಸೆಟ್ ಸಿದ್ಧತೆ ನಡೆಸಲಾಗುತ್ತಿದೆ. ಲಾಕ್ ಡೌನ್ ನಂತರ ಬೇರೆ ಕಡೆಗೆ ಹೋಗಿದ್ದ ತಂತ್ರಜ್ಞರಿಗೆ ಕಾಯಲಾಗುತ್ತಿದೆ. ಅವರು ಸದ್ಯದಲ್ಲಿಯೇ ಮರಳಲಿದ್ದು, ನಂತರ ಚಿತ್ರೀಕರಣ ಪುನರ್ ಆರಂಭಿಸಲಾಗುವುದು, ಮುಂದಿನ 15 ದಿನಗಳೊಳಗೆ ಚಿತ್ರೀಕರಣ ಆರಂಭಿಸಲಾಗುವುದು, ಹಾಡುಗಳು ಸಿದ್ಧವಾಗಿವೆ. ಅವುಗಳನ್ನು ಉತ್ತಮ ಹಿನ್ನೆಲೆ ಗಾಯಕರಿಂದ ಧ್ವನಿ ಮುದ್ರಿಸಲಾಗುವುದು ಎಂದು ಹರ್ಷ ತಿಳಿಸಿದ್ದಾರೆ. 

ಟಗರು ಚಿತ್ರದ ನಾಯಕಿ ಭಾವನಾ ಈ ಚಿತ್ರದಲ್ಲೂ ಕೂಡಾ ಶಿವಣ್ಣನಿಗೆ ನಾಯಕಿಯಾಗಿ ಅಭಿನಯಿಸಲಿದ್ದು, ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಅರ್ಜುನ ಜನ್ಯಾ ಸಂಗೀತ ಸಂಯೋಜಿಸಲಿದ್ದು, ಜೆ ಸ್ವಾಮಿ ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನವಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp