ಮಂಡ್ಯದ ಭಗೀರಥ ಕಾಮೇಗೌಡರ ಜೀವನ ಚರಿತ್ರೆ ಕುರಿತು ಸಾಕ್ಷ್ಯಚಿತ್ರ

84 ವರ್ಷದ ಕಾಮೇಗೌಡರು ಕುರಿಗಾಹಿಯಾಗಿದ್ದು, ಮಂಡ್ಯದಲ್ಲಿ ಕೆರೆಗಳ ಮನುಷ್ಯ ಎಂದೇ ಪ್ರಖ್ಯಾತರಾಗಿದ್ದಾರೆ. ಹಲವು ದಶಕಗಳಿಂದ ಕೆರೆ ನಿರ್ಮಾಣ ಮಾಡುವುದೇ ಇವರ ಕಾಯಕವಾಗಿದೆ.
ಕಾಮೇಗೌಡ
ಕಾಮೇಗೌಡ

ಮಂಡ್ಯದ ಭಗೀರಥ ಎಂದೇ ಖ್ಯಾತವಾಗಿರುವ ಕಾಮೇಗೌಡರ ಕುರಿತು ನಿರ್ದೇಶಕ ದಯಾಳ್ ಪದ್ಮನಾಭನ್ ಸಾಕ್ಷ್ಯಚಿತ್ರ ತಯಾರು ಮಾಡಲಿದ್ದಾರೆ. ಡಿ ಪಿಕ್ಚರ್ಸ್ ಬ್ಯಾನರ್ ಅಡಿ ಸಾಕ್ಷ್ಯಚಿತ್ರ ತಯಾರಾಗಲಿದೆ. ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ತಯಾರಾಗಲಿದ್ದು, ದಿ ಗುಡ್ ಶೆಫರ್ಡ್ ಎಂಬ ಟೈಟಲ್ ಇಡಲಾಗಿದೆ ಎಂದು ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

84 ವರ್ಷದ ಕಾಮೇಗೌಡರು ಕುರಿಗಾಹಿಯಾಗಿದ್ದು, ಮಂಡ್ಯದಲ್ಲಿ ಕೆರೆಗಳ ಮನುಷ್ಯ ಎಂದೇ ಪ್ರಖ್ಯಾತರಾಗಿದ್ದಾರೆ. ಹಲವು ದಶಕಗಳಿಂದ ಕೆರೆ ನಿರ್ಮಾಣ ಮಾಡುವುದೇ ಇವರ ಕಾಯಕವಾಗಿದೆ.

ಕಾಮೇಗೌಡರ ಈ ಕೆಲಸ ಕರಾಳ ರಾತ್ರಿ ನಿರ್ದೇಶಕ ದಯಾಳ್ ಪದ್ಮನಾಭನ್ ಅವರಿಗೆ ಸ್ಫೂರ್ತಿ ತುಂಬಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಕಾಮೇಗೌಡರ ಕೆಲಸವನ್ನು ಪ್ರಶಂಸಿದ್ದರು. ಜೊತೆಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಶ್ಲಾಘಿಸಿದ್ದರು.

ಕನ್ನಡ ನಟ ಯಶ್ ಅವರ ಯಶೋಮಾರ್ಗ ಟ್ರಸ್ಟ್ ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದ ಕಾಮೇಗೌಡರು ಅವರನ್ನು ಭೇಟಿ ಮಾಡಲು ಇಚ್ಚಿಸಿ ತಮ್ಮ ಹಳ್ಳಿಗೆ ಆಹ್ವಾನಿಸಿದ್ದರು.

ಕಾಮೇಗೌಡರ ಸಾಧನೆಯ ಬಗ್ಗೆ ಓದಿ ತುಂಬಾ ಖುಷಿಯಾಯ್ತು, ಅವರ ಜೊತೆ ಚರ್ಚಿಸಿ  ಅವರಿಂದ ಅನುಮತಿ ಪಡೆದುಕೊಂಡಿದ್ದೇನೆ ಎಂದು ದಯಾಳ್ ತಿಳಿಸಿದ್ದಾರೆ. ಈ ವಾರದಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಅವಿನಾಶ್ ಯು ಶೆಟ್ಟಿ ಮತ್ತು ದಯಾಳ್ ಪದ್ಮನಾಭನ್ ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಅಭಿಷೇಕ್ ಮತ್ತು ವೆಂಕಟ್ ದೇವ್ ಕಥೆ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡಲಿದ್ದಾರೆ. ವಿವಿಧ ಫ್ಲಾಟ್ ಫಾರ್ಮ್ ಗಳಲ್ಲಿ ಸಾಕ್ಷ್ಯಚಿತ್ರ ರಿಲೀಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿರುವ ದಯಾಳ್, ಈ ಸಾಕ್ಷ್ಯಚಿತ್ರವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com