ಮನಸ್ಸಿನ ಆರು ಬಯಕೆಗಳ ಅನ್ವೇಷಣೆಯೇ 'ಅರಿಷಡ್ವರ್ಗ': ನಿರ್ದೇಶಕ ಅರವಿಂದ್ ಕಾಮತ್

ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ  'ಅರಿಷಡ್ವರ್ಗ' ಚಿತ್ರ  ಮನಸ್ಸಿನ ಆರು ಬಯಕೆಗಳ ಅನ್ವೇಷಣೆಯಾಗಿದೆ ಎಂದು ಈ ಚಿತ್ರದ ನಿರ್ದೇಶಕ ಅರವಿಂದ್ ಕಾಮತ್ ಹೇಳಿದ್ದಾರೆ. 
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಬೆಂಗಳೂರು: ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ  'ಅರಿಷಡ್ವರ್ಗ' ಚಿತ್ರ  ಮನಸ್ಸಿನ ಆರು ಬಯಕೆಗಳ ಅನ್ವೇಷಣೆಯಾಗಿದೆ ಎಂದು ಈ ಚಿತ್ರದ ನಿರ್ದೇಶಕ ಅರವಿಂದ್ ಕಾಮತ್ ಹೇಳಿದ್ದಾರೆ. ಈ ಸಿನಿಮಾ ಕೊಲೆಯ ಪರಿಸ್ಥಿತಿಯಲ್ಲಿ ಸಿಲುಕಿರುವ ನೈಜ ವ್ಯಕ್ತಿಗಳ ಕುರಿತಾಗಿದ್ದು, ತನಿಖೆಯ ಮೂಲಕ ಅವರ ಪರಸ್ಪರ ಸಂಬಂಧವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಕಥೆಯಲ್ಲಿ ತೆರೆದುಕೊಳ್ಳುತ್ತದೆ ಎಂದಿದ್ದಾರೆ.

ಸುತ್ತಲೂ ನಡೆಯುವ ವಿವಿಧ ಸಂಗತಿಗಳು ಕೂಡಾ ಈ ಕಥೆಗೆ ಪ್ರೇರಣೆಯಾಗಿದ್ದು, ಕೊಲೆಯ ರಹಸ್ಯತೆಯ ಸುತ್ತ ಸಾಗುವ ಚಿತ್ರ ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ಅವರು ಭರವಸೆ ಹೊಂದಿದ್ದಾರೆ.

8-9 ವರ್ಷಗಳ ಕಾಲ ಐಟಿ ವಲಯದಲ್ಲಿ ಕೆಲಸ ಮಾಡಿರುವ ಅರವಿಂದ್ ಕಾಮತ್, 2010ರಲ್ಲಿ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದ್ದು, ಅಲ್ಲಿಂದ ಅವರು ಹಿಂತಿರುಗಿ ನೋಡೆ ಇಲ್ಲ. ಅವರೇ ಸ್ವತಂತ್ರವಾಗಿ ಮಾಡಿರುವ ಇನ್ವೆಂಡೊ ಚಿತ್ರ ಕೆಲ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ನಂತರ ಅವರು ಜಾಹಿರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಾ ಅರಿಷಡ್ವರ್ಗ ಚಿತ್ರ ಮಾಡಿದ್ದಾಗಿ ಅವರು ಹೇಳಿದ್ದಾರೆ.

2017ರಲ್ಲಿ ಈ ಚಿತ್ರದ ಕೆಲಸವನ್ನು ಆರಂಭಿಸಿರುವ ಅರವಿಂದ್ ಕಾಮತ್, ಈಗಲೂ ಹ್ಯಾಂಗ್ ಓವರ್ ನಲ್ಲಿದ್ದು, ಉತ್ತಮ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ. ನಿರ್ಮಾಪಕರು ತನ್ನ ಮೇಲೆ ನಂಬಿಕೆ ಇಟ್ಟು ಚಿತ್ರ ಮಾಡಿದ್ದು, ಅವರ ನಂಬಿಕೆ ಹುಸಿಯಾಗಲು ಬಿಡಲ್ಲ, ಪೋಸ್ಟ್ ಪ್ರೊಢಕ್ಷನ್ ಕಾರ್ಯಕ್ಕಾಗಿ ಒಂದು ವರ್ಷ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಕಳೆದ ವರ್ಷವೇ ತಯಾರಾಗಿದ್ದ ಈ ಚಿತ್ರವನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಸಾಂಕ್ರಾಮಿಕ ರೋಗದ ಕಾರಣ ವಿಳಂಬವಾಯಿತು. ಇದೊಂದು ಮುಖ್ಯವಾಹಿನಿಯ ವಿಚಾರವಾಗಿದ್ದು, ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಾಗ ವೀಕ್ಷಕರಿಂದ ಮೊದಲ ಪ್ರತಿಕ್ರಿಯೆ ಪಡೆದಿದ್ದೇವೆ. ಅದರಿಂದ ಚಿತ್ರದ ಬಗ್ಗೆ ಪ್ರಚಾರಕ್ಕೂ ನೆರವಾಗಿದೆ ಎಂದು ಅವರು ಹೇಳಿದ್ದಾರೆ.ಸಂಯುಕ್ತ ಹೊರನಾಡು, ಅವಿನಾಶ್, ನಂದಾ ಗೋಪಾಲ್, ಮತ್ತಿತರರು ಅಭಿನಯಿಸಿರುವ ಈ ಚಿತ್ರ ಲಂಡನ್, ಸಿಂಗಾಪುರ ಮತ್ತು ವ್ಯಾಂಕೋವರ್ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.

ಆಕ್ಟ್ 1978ರ ನಂತರ ಅರಿಷಡ್ವರ್ಗ ನಾಳೆ ಸುಮಾರು 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ರಾಜ್ಯಾದ್ಯಂತ 70 ಪ್ರದರ್ಶನ ವಿರಲಿದೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ಅರವಿಂದ್ ಕಾಮತ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com