ಕೊರೋನಾ ಸಾವು-ನೋವುಗಳು ನನ್ನನ್ನು ಘಾಸಿಗೊಳಿಸಿವೆ: ಡಾಲಿ ಧನಂಜಯ್

ಕಳೆದ ಆಗಸ್ಟ್ ತಿಂಗಳಿಂದ ಡಾಲಿ ಧನಂಜಯ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಭಾನುವಾರ ಸುಕುಮಾರ್ ಅವರ ಪುಷ್ಪಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾದರು.
ಧನಂಜಯ್
ಧನಂಜಯ್
Updated on: 

ಕಳೆದ ಆಗಸ್ಟ್ ತಿಂಗಳಿಂದ ಡಾಲಿ ಧನಂಜಯ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಭಾನುವಾರ ಸುಕುಮಾರ್ ಅವರ ಪುಷ್ಪಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾದರು. ಕಳೆದ ವರ್ಷದಂತೆಯೇ ಈ ಬಾರಿಯೂ ದೇಶ ಕೊರೋನಾದಿಂದ ಬಸವಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ, ತೆಲುಗು, ತಮಿಳು ಸಿನಿಮಾ ಶೂಟಿಂಗ್ ನಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಧನಂಜಯ ಪರಿಸ್ಥಿತಿ ಇನ್ನೂ ಸರಿಯಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ನನ್ನ ತಲೆಯಲ್ಲಿ ಸಿನಿಮಾ ಇಲ್ಲ, ಸಾಂಕ್ರಾಮಿಕದಿಂದಾಗಿ ಆಗುತ್ತಿರುವ ತೊಂದರೆಗಳು ನನ್ನನ್ನು ಘಾಸಿಗೊಳಿಸಿವೆ, ಕೋವಿಡ್ ಸಾವುಗಳು ನನಗೆ ಬೇಸರ ತರುತ್ತಿವೆ, ನನ್ನ ಅಸಹಾಯಕತೆ ನೋವುಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ತನ್ನ ಸಹಾಯವನ್ನು ಬಯಸುವ ಜನರಿಗೆ ಬೆಂಬಲ ನೀಡಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವ ಧನಂಜಯ್, ಪ್ರಸ್ತುತ ಪರಿಸ್ಥಿತಿ ಆದಷ್ಟು ಬೇಗ ಸಹಜ ಸ್ಥಿತಿಗೆ ಬರಲಿ ಎಂದು ಆಶಿಸಿದ್ದಾರೆ.

ಜನರಿಗೆ ವಿಶೇಷವಾಗಿ ಈಗ ವಿಜ್ಞಾನದ ಮಹತ್ವ ತಿಳಿಯುತ್ತಿದೆ, ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಜನ ತಮ್ಮ ಆರೋಗ್ಯದ ಜಬಾಬ್ದಾರಿಯನ್ನು ತಾವೇ ತೆಗೆದುಕೊಳ್ಳಬೇಕು ಹಾಗೂ ಲಸಿಕೆ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಬಡವ ರಾಸ್ಕಲ್, ರತ್ನನ್ ಪ್ರಪಂಚ, ಶಿವಪ್ಪ, ಹಾಗೂ ನರಸಿಂಹ ಅವರ ಇನ್ನೂ ಟೈಟಲ್ ಫಿಕ್ಸ್ ಮಾಡದ ಸಿನಿಮಾದಲ್ಲಿ ಧನಂಜಯ್ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com