ಕಲಾವಿದರಿಗೆ ಸೋಷಿಯಲ್ ಮೀಡಿಯಾ ಪ್ರೆಸೆನ್ಸ್ ಅನಿವಾರ್ಯ, ಆದರೆ ಅದೇ ಎಲ್ಲವೂ ಅಲ್ಲ: ನಿಕ್ಕಿ ಗಲ್ರಾನಿ 

ವರ್ಷಕ್ಕೆ ಎರಡೇ ಸಿನಿಮಾಗಳಲ್ಲಿ ನಟಿಸಿದರೂ ಅದು ಒಳ್ಳೆಯದಾಗಿದ್ದರೆ ಸಾಕು ಎನ್ನುವ ಪಾಠವನ್ನು ನಿಕ್ಕಿ ಚಿತ್ರರಂಗದಿಂದ ಕಲಿತಿದ್ದಾರೆ.
ನಿಕ್ಕಿ ಗಲ್ರಾನಿ
ನಿಕ್ಕಿ ಗಲ್ರಾನಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರ ಸಹೋದರಿ ನಿಕ್ಕಿ ಗಲ್ರಾನಿ ಅವರು ಮಲಯಾಳಂ ಚಿತ್ರ 1983 ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಅವರ ಹೊಸ ಸಿನಿಮಾ ರಾಜವಂಶಂ ಇತ್ತೀಚಿಗೆ ಬಿಡುಗಡೆ ಕಂಡಿದೆ. 

ಮೊದಲು ತಾವು ಒಬ್ಬ ಕಲಾವಿದೆಯಾಗಿ ಆದಷ್ಟೂ ಹೆಚ್ಚಿನ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದೆ. ಆದರೆ ನಿಧಾನವಾಗಿ ಆ ಅಭಿಪ್ರಾಯ ಬದಲಾಯಿತು. ಸಂಖ್ಯೆಯನ್ನು ಲೆಕ್ಕಿಸದೆ ಗುಣಮಟ್ಟದತ್ತ ಗಮನ ನೀಡತೊಡಗಿದೆ. ಎಂದು ನಿಕ್ಕಿ ಹೇಳಿದ್ದಾರೆ.

ವರ್ಷಕ್ಕೆ ಎರಡೇ ಸಿನಿಮಾಗಳಲ್ಲಿ ನಟಿಸಿದರೂ ಅದು ಒಳ್ಳೆಯದಾಗಿದ್ದರೆ ಸಾಕು ಎನ್ನುವ ಪಾಠವನ್ನು ನಿಕ್ಕಿ ಚಿತ್ರರಂಗದಿಂದ ಕಲಿತಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾತನಾಡಿರುವ ನಟಿ, ಇಂದು ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. 

ಅದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿನ ಪಾಪ್ಯುಲಾರಿಟಿ ಎಲ್ಲವೂ ಅಲ್ಲ ಎನ್ನ್ವುವುದನ್ನೂ ಹೇಳುತ್ತಾರೆ. ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರುವುದು ಮುಖ್ಯವಾದರೂ, ಅದಕ್ಕಿಂತ ಹೆಚ್ಚಾಗಿ ತಮ್ಮದೇ ಬದುಕನ್ನು ಎಂಜಾಯ್ ಮಾಡುವುದು ಅಷ್ಟೇ ಮುಖ್ಯ ಎನ್ನುವುದನ್ನೂ ನಿಕ್ಕಿ ಅರಿತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com