ಚೆನ್ನೈ: ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ತಮಿಳು ಚಿತ್ರರಂಗದ ಖ್ಯಾತ ನಟ ನಿತೀಶ್ ವೀರಾ ವಿಧಿವಶರಾಗಿದ್ದಾರೆ.
ನಟ ನಿತೀಶ್ ವೀರಾ (45) ಅವರಿಗೆ ಕೆಲವೇ ದಿನಗಳ ಹಿಂದೆಯಷ್ಟೇ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಚೆನ್ನೈ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಕಳೆದ 20 ವರ್ಷಗಳಿಂದ ಕಾಲಿವುಡ್‌ನಲ್ಲಿ ನಟ ನಿತೀಶ್ ವೀರಾ ಸಕ್ರಿಯರಾಗಿದ್ದಾರೆ. 'ವಲ್ಲರಸು', 'ಪುದುಪೇಟೈ', 'ಪೇರರಸು', 'ನೇಟ್ರು ಇಂಡ್ರು' ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ನಟ ನಿತೀಶ್ ವೀರಾ ನಿಭಾಯಿಸಿದ್ದರು.
ನಿತೀಶ್ ವೀರಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು 'ಕಾಲಾ' ಚಿತ್ರ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರದಲ್ಲಿ ಕಾತಿರಾವಣ್ ಪಾತ್ರದಿಂದ ನಿತೀಶ್ ವೀರಾ ಕಾಲಿವುಡ್‌ನಲ್ಲಿ ಗುರ್ತಿಸಿಕೊಂಡರು. ಬಳಿಕ 'ಅಸುರನ್' ಚಿತ್ರದಲ್ಲೂ 'ಪಾಂಡಿಯನ್' ಆಗಿ ಅಭಿನಯಿಸಿದ ನಿತೀಶ್ ವೀರಾ ಜನರ ಮನ ಗೆದ್ದರು.
ಸದ್ಯ 'ಲಾಭಂ' ಮತ್ತು 'ನೀರೋ' ಚಿತ್ರಗಳಲ್ಲಿ ನಿತೀಶ್ ವೀರಾ ಅಭಿನಯಿಸಬೇಕಿತ್ತು. ಆದರೆ, ಅಷ್ಟರಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ನಿತೀಶ್ ವೀರಾ ಕೊನೆಯುಸಿರೆಳೆದಿದ್ದಾರೆ.
Advertisement