ಸಿರಿಂಜ್ ಇಲ್ಲದೇ ಲಸಿಕೆ ಪಡೆದ ನಟಿ ನಯನತಾರಾ..?: ಸ್ಪಷ್ಟನೆ ಕೊಟ್ಟ ಟೀಂ

ದಕ್ಷಿಣ ಭಾರತ ಸಿನಿ ರಂಗದ ಮಹಿಳಾ ಸೂಪರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಅವರು ಕೋವಿಡ್ ಲಸಿಕೆ ಪಡೆದ ಫೋಟೋ ವ್ಯಾಪಕ ಟ್ರೋಲ್ ಗೆ ಗುರಿಯಾಗುತ್ತಿದೆ.
ಲಸಿಕೆ ಪಡೆದ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್
ಲಸಿಕೆ ಪಡೆದ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್
Updated on: 

ಚೆನ್ನೈ: ದಕ್ಷಿಣ ಭಾರತ ಸಿನಿ ರಂಗದ ಮಹಿಳಾ ಸೂಪರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಅವರು ಕೋವಿಡ್ ಲಸಿಕೆ ಪಡೆದ ಫೋಟೋ ವ್ಯಾಪಕ ಟ್ರೋಲ್ ಗೆ ಗುರಿಯಾಗುತ್ತಿದೆ.

ಹೌದು.. ನಟಿ ನಯನತಾರಾ ಇತ್ತೀಚೆಗಷ್ಟೇ ಕೊರೊನಾ ಲಸಿಕೆ ಪಡೆದಕೊಂಡಿದ್ದರು. ತಮ್ಮ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಲಸಿಕಾ ಕೇಂದ್ರ ತೆರಳಿದ್ದ ನಯನತಾರ ಲಸಿಕೆ ಹಾಕಿಸಿಕೊಂಡಿದ್ದರು. ಈ ಕುರಿತ ಕೆಲವು ಫೋಟೋವನ್ನು ವಿಘ್ನೇಶ್ ಶಿವನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆಯೇ ವಿಘ್ನೇಶ್ ಶಿವನ್ ಫೋಟೋದಲ್ಲಿ ಕಾಣಿಸುತ್ತಿರುವ ಸಿರಿಂಜ್, ನಯನತಾರಾ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ನಟಿ ನಯನತಾರಾ ಅವರಿಗೆ ಲಸಿಕೆ ನೀಡಿದ ದಾದಿ ಕೈಯಲ್ಲೇ ಸಿರಿಂಜೇ ಕಾಣುತ್ತಿರಲಿಲ್ಲ. ಇದು ನೆಟ್ಟಿಗರ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.

ಸ್ಪಷ್ಟನೆ ನೀಡಿದ ನಯನತಾರಾ ಟೀಂ
ಇನ್ನು ಲಸಿಕೆ ವಿಚಾರವಾಗಿ ವೈರಲ್ ಫೋಟೋ ಕುರಿತಂತೆ ನಯನತಾರಾ ಟೀಂ ಸ್ಪಷ್ಟನೆ ನೀಡಿದ್ದು, ನಯನತಾರಾ ಲಸಿಕೆ ಹಾಕಿಸಿಕೊಂಡಿದ್ದು, ದಾದಿ ಅವರ ಕೈಯಲ್ಲಿ ಸಿರಿಂಜ್ ಅವಿತಿದೆ. ಆ ಫೋಟೋವನ್ನು ಝೂಮ್ ಮಾಡಿ ನೋಡಿದರೆ ಸೂಜಿ ಕಾಣುತ್ತದೆ. ಅಂತೆಯೇ ವಿಘ್ನೇಶ್ ಶಿವನ್ ಫೋಟೋವನ್ನು ಮತ್ತೊಂದು ಬದಿಯಿಂದ ಕ್ಲಿಕ್ಕಿಸಿರುವ ಕಾರಣ ಸಿರಿಂಜ್ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com