ಬೆಂಗಳೂರು: ಸಿನಿಮೆಟೊಗಾಫರ್ ಹಾಗೂ ಎಡಿಟಿಂಗ್ ಎರಡೂ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿರುವ ಪ್ರವೀಣ್ ಶ್ರಿಯನ್ ಗರುಡ ಗಮನ ಋಷಭ ವಾಹನ (GGVV) ಸಿನಿಮಾದ ಬ್ಯಾಕ್ ಬೋನ್ ಎಂದು ನಿರ್ದೇಶಕ ಮತ್ತು ನಟ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಪ್ರವೀಣ್ ಮತ್ತು ರಾಜ್ ಬಿ. ಶೆಟ್ಟಿ ಅವರು ಸಿನಿಮಾರಂಗಕ್ಕೆ ಬರುವುದಕ್ಕೆ ಮುಂಚಿನಿಂದಲೂ ಪರಿಚಿತರು. ಜಾಹೀರಾತು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರವೀಣ್ ಅವರು ಅಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡುತ್ತಿದ್ದರೆ, ರಾಜ್ ಅವರು ಜಾಹಿರಾತಿನ ಕಾನ್ಸೆಪ್ಟನ್ನು ಬರೆದುಕೊಡುತ್ತಿದ್ದರು. ಮುಂದೆ ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಪ್ರವೀಣ್ ಮತ್ತು ರಾಜ್ ಬಿ. ಶೆಟ್ಟಿ ಇಬ್ಬರೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಒಂದೊಳ್ಳೆಯ ಕಥೆಯನ್ನು ಕ್ಯಾಮೆರಾ ಮೂಲಕ ಪ್ರಸ್ತುತ ಪಡಿಸುವುದೇ ನನಗೆ ಥ್ರಿಲ್ ಕೊಡುತ್ತದೆ ಎನ್ನುತ್ತಾರೆ ಪ್ರವೀಣ್. ಅವರು ಸಿನಿಮಾರಂಗ ಪ್ರವೇಶಿಸುವ ಆಸೆಯನ್ನೇ ಇಟ್ಟುಕೊಂಡಿರಲಿಲ್ಲ.
ಸಣ್ಣ ಕೆಲಸವೊಂದಕ್ಕೆ ರಾಜ್ ಶೆಟ್ಟಿಯವರು ಪ್ರವೀಣ್ ನೆರವು ಪಡೆದುಕೊಂಡಿದ್ದರು. ಅದು ಮುಂದೆ ಮೊಟ್ಟೆಯ ಕಥೆ ಸಿನಿಮಾಗೆ ಕ್ಯಾಮೆರಾ ಹಿಡಿಯುವಂತೆ ಪ್ರೇರೇಪಿಸಿತು. ಈಗ ಗರುಡ ಗಮನ ಋಷಭ ವಾಹನ ಸಿನಿಮಾದ ಕ್ಯಾಮೆರಾಮೆನ್ ಮತ್ತು ಸಂಕಲನ ವಿಭಾಗವನ್ನೂ ಅವರೇ ನಿರ್ವಹಿಸಿದ್ದಾರೆ. ಕೆ ಆರ್ ಜಿ ಸಂಸ್ಥೆ ನಿರ್ಮಿಸಿ, ರಕ್ಷಿತ್ ಶೆಟ್ಟಿ ಅವರ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಪ್ರಸ್ತುತ ಪಡಿಸಲಾಗುತ್ತಿರುವ ಈ ಸಿನಿಮಾ ನವೆಂಬರ್ 19ರಂದು ಬಿಡುಗಡೆಯಾಗುತ್ತಿದೆ.
ಫೋನ್ ನಿಮ್ಮ ಗೆಳೆಯನೂ ಹೌದು, ಶತ್ರುವೂ ಹೌದು, 100 ಸಿನಿಮಾದಲ್ಲಿ ಆ ಬಗ್ಗೆ ಸಾಮಾಜಿಕ ಸಂದೇಶವಿದೆ: ರಚಿತಾ ರಾಮ್
'ವೆಡ್ಡಿಂಗ್ ಗಿಫ್ಟ್' ಕೊಡಲು ಬರ್ತಿದ್ದಾರೆ ನಿಶಾನ್ ನಾಣಯ್ಯ-ಸೋನುಗೌಡ
ಪತ್ರ ಮೂಲಕ ಭಾವನೆ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್
ಬರೆದ ಹಣೆಬರಹ ತಿದ್ದಲಿಲ್ಲ ಬ್ರಹ್ಮ; ಪುನೀತ್ ಸರ್ ಇಂದಿಗೂ ನಮ್ಮ ಜೊತೆಯಲ್ಲೇ ಇದ್ದಾರೆ: ನಟ ದರ್ಶನ್
ರಮೇಶ್ ಅರವಿಂದ್ ಓರ್ವ ಪರ್ಫೆಕ್ಷನಿಸ್ಟ್ ಮತ್ತು ಪಾಸಿಟಿವ್ ವ್ಯಕ್ತಿ: '100' ಸಿನಿಮೆಟೊಗ್ರಾಫರ್ ಸತ್ಯ ಹೆಗ್ಡೆ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವಾಸೆ: ಮುಗಿಲ್ ಪೇಟೆಯಲ್ಲಿ ಕಯಾದು ಲೋಹರ್ ಮೊಹಬ್ಬತ್ ಮಿಂಚು
Advertisement