ಸಿನಿಮಾ ಪೋಸ್ಟರ್
ಸಿನಿಮಾ ಸುದ್ದಿ
1999ರ ಬ್ಲಾಕ್ ಬಸ್ಟರ್ ಸಿನಿಮಾ 'ಮ್ಯಾಟ್ರಿಕ್ಸ್' ಭಾರತದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ
ಮ್ಯಾಟ್ರಿಕ್ಸ್ ಚಿತ್ರಸರಣಿಯ ಮೂರೂ ಅವತರಣಿಕೆಗಳು ಜನಪ್ರಿಯಗೊಂಡಿದ್ದವು. ಅಷ್ಟು ಮಾತ್ರವಲ್ಲ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದ್ದವು.
ನವದೆಹಲಿ: ಸುಪ್ರಸಿದ್ಧ ಚಿತ್ರನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ 1999ರಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಆಗಿದ್ದ 'ಮ್ಯಾಟ್ರಿಕ್ಸ್' ಸಿನಿಮಾವನ್ನು ಭಾರತದ ಚಿತ್ರಮಂದಿರಗಳಲ್ಲಿ ಡಿಸೆಂಬರ್ 3ರಂದು ಮತ್ತೆ ಬಿಡುಗಡೆ ಮಾಡುತ್ತಿದೆ.
ಮ್ಯಾಟ್ರಿಕ್ ಚಿತ್ರಸರಣಿಯ ಮೂರೂ ಅವತರಣಿಕೆಗಳು ಜನಪ್ರಿಯಗೊಂಡಿದ್ದವು. ಅಷ್ಟು ಮಾತ್ರವಲ್ಲ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದ್ದವು.
ಇದೀಗ ಅದೇ ಸಿನಿಮಾದ ನಾಲ್ಕನೇ ಅವತರಣಿಕೆ 'ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್' ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಮುಂಚಿತವಾಗಿ ಹಳೆಕ ಅವತರಣಿಕೆಯನ್ನು ವಾರ್ನರ್ ಬ್ರದರ್ಸ್ ಬಿಡುಗಡೆಗೊಳಿಸುತ್ತಿದೆ. ಹೊಸ ಅವತರಣಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ ಎನ್ನುವುದು ವಿಶೇಷ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ