ಇನ್ ಸ್ಟಾಗ್ರಾಂನಲ್ಲಿ ಪತಿ ಜೋನಾಸ್ ಹೆಸರು ಕೈಬಿಟ್ಟ ಪ್ರಿಯಾಂಕಾ ಚೋಪ್ರಾ: ದಾಂಪತ್ಯದಲ್ಲಿ ಬಿರುಕು ಶಂಕೆ!
ಇತ್ತೀಚಿಗೆ ಪತಿ ನಾಗಚೈತನ್ಯರಿಂದ ಬೇರ್ಪಟ್ಟ ಟಾಲಿವುಡ್ ನಟಿ ಸಮಂತಾ ಕೂಡಾ ವಿಷಯ ಬಹಿರಂಗವಾಗುವುದಕ್ಕೂ ಮೊದಲು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿನ ಹೆಸರಿನಿಂದ ನಾಗಚತನ್ಯ ಅವರ ಹೆಸರನ್ನು ತೆಗೆದು ಹಾಕಿದ್ದರು ಎನ್ನುವುದು ಗಮನಾರ್ಹ.
Published: 22nd November 2021 06:41 PM | Last Updated: 22nd November 2021 06:53 PM | A+A A-

ಪತಿ ನಿಕ್ ಜೋನಾಸ್ ಜೊತೆ ಪ್ರಿಯಾಂಕಾ ಚೋಪ್ರಾ
ಹಾಲಿವುಡ್: ಗ್ಲೋಬಲ್ ಐಕಾನ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ. ಇದರೊಂದಿಗೆ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸ್ಟಾರ್ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಹರಡಿದೆ.
ಇದನ್ನೂ ಓದಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಶೂಟಿಂಗ್ ನಲ್ಲಿ ಗಾಯ!
ಬಾಲಿವುಡ್ ನಲ್ಲಿ ಹೆಸರು ಮಾಡಿದ್ದ ನಟಿ ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್1 ರಂದು ವಿವಾಹವಾಗಿದ್ದರು. ಅಲ್ಲದೆ ಹಾಲಿವುಡ್ ನ ಖ್ಯಾತನಾಮರೊಂದಿಗೆ ಪ್ರಿಯಾಂಕಾ ನಟಿಸಿದ್ದಲ್ಲದೆ ಚಿತ್ರ ನಿರ್ಮಾಪಕಿಯಾಗಿಯೂ ಹೆಸರು ಮಾಡಿದ್ದರು.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ಭಾರತೀಯ ನಟಿ ಫ್ರೀಡಾ ಪಿಂಟೊ: ಮಗುವಿನ ಹೆಸರು ಬಹಿರಂಗ
ಇತ್ತೀಚಿಗಷ್ಟೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದ ಪ್ರಿಯಾಂಕಾ ದೀಪಾವಳಿಯನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎನ್ನುವ ಸಂದೇಶ ಹಂಚಿಕೊಂಡಿದ್ದರು.
ಇದನ್ನೂ ಓದಿ: ನ.23ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ 'ಕೋಟಿಗೊಬ್ಬ 3' ಬಿಡುಗಡೆ
ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇಂದು ಜೋನಾಸ್ ಹೆಸರನ್ನು ತೆಗೆದುಹಾಕಿರುವುದು ತೀವ್ರ ಕುತೂಹಲಕ್ಕೆಡೆಮಾಡಿದೆ. ಅಲ್ಲದೆ ಪ್ರಿಯಾಂಕ ನಡೆ ಅಭಿಮಾನಿಗಳನ್ನು ಆತಂಕಕ್ಕೆ ನೂಕಿದೆ.
ಇದನ್ನೂ ಓದಿ: 'ಮನಿ ಹೈಸ್ಟ್' ನೆಟ್ ಫ್ಲಿಕ್ಸ್ ಥ್ರಿಲ್ಲರ್ ಧಾರಾವಾಹಿ ಸರಣಿ ಕಡೆಯ ಭಾಗದ ಪೋಸ್ಟರ್ ಬಿಡುಗಡೆ: ಪ್ರಸಾರ ದಿನಾಂಕ ನಿಗದಿ
ಇತ್ತೀಚಿಗೆ ಪತಿ ನಾಗಚೈತನ್ಯರಿಂದ ಬೇರ್ಪಟ್ಟ ಟಾಲಿವುಡ್ ನಟಿ ಸಮಂತಾ ಕೂಡಾ ವಿಷಯ ಬಹಿರಂಗವಾಗುವುದಕ್ಕೂ ಮೊದಲು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿನ ಹೆಸರಿನಿಂದ ನಾಗಚತನ್ಯ ಅವರ ಹೆಸರನ್ನು ತೆಗೆದು ಹಾಕಿದ್ದರು ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಜೊತೆ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ ಶೂಟಿಂಗ್ ಶುರು