ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಶೂಟಿಂಗ್‌ ನಲ್ಲಿ ಗಾಯ!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಶೂಟಿಂಗ್‌ನಲ್ಲಿ ಗಾಯಗೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಆತಂಕದಲ್ಲಿದ್ದಾರೆ.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Updated on

ಲಂಡನ್‌: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಶೂಟಿಂಗ್‌ನಲ್ಲಿ ಗಾಯಗೊಂಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಆತಂಕದಲ್ಲಿದ್ದಾರೆ.

ಶೂಟಿಂಗ್ ನಲ್ಲಿ ಪ್ರಿಯಾಂಕಾ ಚೋಪ್ರಾರ ಮುಖ, ಹಣೆ, ಕೆನ್ನೆಗೆ ಗಾಯಗಳಾಗಿದ್ದು ಈ ಫೋಟೋಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಶೂಟಿಂಗ್ ವೇಳೆ ಹೀರೋಗಳು ಗಾಯಗೊಳ್ಳುವುದು ಸಾಮಾನ್ಯ. ಫೈಟ್ಸ್, ಸ್ಟಂಟ್ ದೃಶ್ಯಗಳನ್ನು ಮಾಡುವಾಗ ಅವರು ಆಗಾಗ್ಗೆ ಅಪಘಾತಗಳಿಗೆ ಒಳಗಾಗುತ್ತಿರುತ್ತಾರೆ.

ಆದರೆ, ನಾಯಕಿಯರು ಗಾಯಗೊಳ್ಳುವುದು ಬಹಳ ಅಪರೂಪ. ಒಂದು ವೇಳೆ ಆದರೂ ಕಾಲು ಉಳುಕಿಸಿಕೊಳ್ಳುವುದು. ಸಣ್ಣಪುಟ್ಟ ಗಾಯಗಳು ಸಂಭವಿಸಬಹುದು. ಆದರೆ, ಪ್ರಿಯಾಂಕಾಗೆ ಆಗಿರುವ ಗಾಯಗಳು ಗಂಭೀರವಾಗಿರುವ ಕಾರಣ ಆಕೆಯ ಅಭಿಮಾನಿಗಳು ಕಳವಳಗೊಂಡಿದ್ದಾರೆ.

ಇದು ನಿಜವಾಗಿ ನಡೆದ ಅಪಘಾತವೊ ಅಥವಾ ಶೂಟಿಂಗ್‌ ಭಾಗವಾಗಿ ಮಾಡಿಸಿಕೊಂಡಿರುವ ಗಾಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಅಭಿಮಾನಿಗಳ ಆತಂಕ, ಕಳವಳ ನೋಡಿ. ಪ್ರಿಯಾಂಕಾ ಅನುಮಾನಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಒಂದು  ಫೋಟೋದಲ್ಲಿ ಪೂರ್ಣವಾಗಿ ಆಕೆಯ ಮುಖ ಮಣ್ಣಿ ಮೆತ್ತುಕೊಂಡಂತಿದೆ. ಇನ್ನೊಂದು ಕಡೆ ಆಕೆಯ ಹಣೆಯಿಂದ ಕೆನ್ನೆಯವರೆಗೆ ರಕ್ತ ಸೋರುತ್ತಿದೆ. ಹುಬ್ಬಿನ ಮೇಲೆ ಗಾಯದ ಕಲೆಯೂ ಇದೆ. ಅದನ್ನು ತೋರಿಸುತ್ತಾ ಕೆನ್ನೆಗಳ ಮೇಲಿನದು ನಿಜವಾದ ಗಾಯ ಅಲ್ಲ. ಹುಬ್ಬಿನ ಮೇಲಿರುವುದು ನಿಜವಾದ ಗಾಯ ಎಂದು ಪ್ರಿಯಾಂಕಾ ತಮ್ಮ ಇನ್‌ ಸ್ಟ್ರಾಗ್ರಾಮ್‌ ಪ್ರಿಯಾಂಕಾ ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com