Online Desk
ಕ್ಯಾಲಿಫೋರ್ನಿಯ: ಸ್ಪ್ಯಾನಿಷ್/ ಇಂಗ್ಲಿಷ್ ದ್ವಿಭಾಷಾ ಧಾರವಾಹಿ ಸರಣಿ ಮನಿ ಹೈಸ್ಟ್ ನ (ಸ್ಪ್ಯಾನಿಷ್ ಹೆಸರು- ಲಾ ಕಾಸ ಡಿ ಪಪೆಲ್) ಕಡೆಯ ಭಾಗದ ಪೋಸ್ಟರ್ ಅನ್ನು ನೆಟ್ ಫ್ಲಿಕ್ಸ್ ಬಿಡುಗಡೆಗೊಳಿಸಿದೆ. ಇದರೊಂದಿಗೆ ರಾಷ್ಟ್ರೀಯ ಬ್ಯಾಂಕಿಂದ ಸಾವಿರಾರು ಕೋಟಿ ರೂ. ಕಳವು ಮಾಡುವ ಮಹಾನ್ ಚಾಣಾಕ್ಷ ಮಿಸ್ಟರ್ ಪ್ರೊಫೆಸರ್ ಮತ್ತು ಆತನ ತಂಡದ ಕೃತ್ಯಕ್ಕೆ ತೆರೆ ಬೀಳಲಿದೆ.
ಇದನ್ನೂ ಓದಿ: ಕಿವಿಗೆ ಕಿಕ್ ನೀಡುವ ಮ್ಯೂಸಿಕ್ ವಿಡಿಯೊ 'ಭೇಟಿ': ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್ ದನಿಯ ಜಾದೂ
ಬ್ಯಾಂಕೊಳಗೆ ಸಿಲುಕಿಕೊಂಡಿರುವ ಪ್ರೊಫೆಸರ್ ತಂಡ ತನ್ನ ಕೃತ್ಯದಲ್ಲಿ ಸಫಲಗೊಳ್ಳುವುದೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಲಲು ಇಡೀ ಜಗತ್ತೇ ಕಾತರದಿಂದ ಕಾದಿದೆ. ಈ ಧಾರಾವಾಹಿ ಸರಣಿಯ ಕಡೆಯ ಭಾಗದ 5 ಸಂಚಿಕೆಗಳು ಈ ಹಿಂದೆ ತೆರೆಕಂಡಿದ್ದವು. ಇದೀಗ ಕಡೆಯ ಭಾಗದ ಇನ್ನುಳಿದ ಕಡೆಯ 5 ಸಂಚಿಕೆಗಳು ಡಿಸೆಂಬರ್ 3ರಂದು ನೆಟ್ ಫ್ಲಿಕ್ಸ್ ನಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಜೊತೆ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ ಶೂಟಿಂಗ್ ಶುರು
2017ರಲ್ಲಿ ಸ್ಪ್ಯಾನಿಷ್ ಭಾಷೆಯ ಈ ಧಾರಾವಾಹಿ ಸರಣಿ ಸ್ಪೇನ್ ನಲ್ಲಿ ತೆರೆಕಂಡಾಗ ಅದಕ್ಕೆ ಅಷ್ಟಾಗಿ ಯಶಸ್ಸು ಸಿಕ್ಕಿರಲಿಲ್ಲ. ನೆಟ್ ಫ್ಲಿಕ್ಸ್ ಈ ಧಾರಾವಾಹಿಯನ್ನು ಕೊಂಡು ಕೊಂಡುಕೊಂಡು ಇಂಗ್ಲೀಷಿಗೆ ಡಬ್ ಮಾಡಿ ತನ್ನ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದೇ ತಡ ಜಗತ್ತಿನಾದ್ಯಂತ ಏಕಾಏಕಿ ಹಿಟ್ ಆಯಿತು. ಜನರು ಹುಚ್ಚುಹಿಡಿದಂತೆ ಈ ಧಾರಾವಾಹಿ ಸರಣಿಯನ್ನು ವೀಕ್ಷಿಸಿದ್ದರು.
ಇದನ್ನೂ ಓದಿ: ಒಳ್ಳೆಯ ಕಥೆಯನ್ನು ತೆರೆ ಮೇಲೆ ಪ್ರಸ್ತುತ ಪಡಿಸುವುದು ಥ್ರಿಲ್ ಕೊಡುತ್ತದೆ: ಗರುಡ ಗಮನ ಋಷಭ ವಾಹನ ಸಿನಿಮೆಟೊಗ್ರಾಫರ್ ಪ್ರವೀಣ್ ಶ್ರಿಯನ್