ಸ್ಯಾಂಡಲ್ ವುಡ್ ಕಲಾವಿದರ ಕ್ರಿಕೆಟ್ ಪಂದ್ಯಾವಳಿ 'ಬಾಕ್ಸ್ ಕ್ರಿಕೆಟ್ ಲೀಗ್'ಗೆ ಚಾಲನೆ
ಬೆಂಗಳೂರು: ಕಮರ್ ಫಿಲಂ ಫ್ಯಾಕ್ಟರಿ ವತಿಯಿಂದ 'ಬಾಕ್ಸ್ ಕ್ರಿಕೆಟ್ ಲೀಗ್' ಸ್ಯಾಂಡಲ್ ವುಡ್ ನ ಎರಡನೇ ಆವೃತ್ತಿಗೆ ಚಾಲನೆ ದೊರೆತಿದೆ. ಸ್ಯಾಂಡಲ್ ವುಡ್ ನಲ್ಲಿ ಕಳೆದ 45 ವರ್ಷಗಳಿಂದ ನಿರ್ಮಾಪಕ, ವಿತರಕರಾಗಿ ಹೆಸರು ಮಾಡಿರುವ ಕೆ.ಬಿ. ಬಾಬು ಅವರ ಪುತ್ರ ಕಮರ್ ಈ ಪಂದ್ಯಾವಳಿಯ ಆಯೋಜಕರಾಗಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ 'ಕಬ್ಜ' ಐದನೇ ಹಂತದ ಚಿತ್ರೀಕರಣ" ಆರಂಭ
ಕಮರ್ ಅವರು ಸ್ಯಾಂಡಲ್ ವುಡ್ ಕಲಾವಿದರನ್ನು ಒಳಗೊಂಡ ಬಾಕ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಮೊದಲ ಆವೃತ್ತಿಯನ್ನು 2017ರಲ್ಲಿ ಆಯೋಜಿಸಿದ್ದರು. ಸುಮಾರು 150 ಮಂದಿ ಅದರಲ್ಲಿ ಪಾಲ್ಗೊಂಡಿದ್ದರು.
ಪಂದ್ಯಾವಳಿ ಚಾಲನಾ ಕಾರ್ಯಕ್ರಮದಲ್ಲಿ ಕಮರ್, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ತಂಡಗಳ ಮಾಲೀಕರು ಸೇರಿದಂತೆ ಹರ್ಷಿಕಾ ಪೂಣಚ್ಛ, ಹರ್ಷವರ್ಧನ, ತರುಣ್ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಬಾರಿಯ ವೈಶಿಷ್ಟ್ಯವೆಂದರೆ ಸ್ಯಾಂಡಲ್ ವುಡ್ ಕಲಾವಿದರ ತಂಡಗಳ ಜೊತೆಗೆ ಪತ್ರಕರ್ತರ ತಂಡವೂ ಸೇರ್ಪಡೆಯಾಗಿರುವುದು. ಕೊರೊನಾದಿಂದ ಮನೆಯಲ್ಲೇ ಉಳಿಯುವಂತಾಗಿ ಜಡ್ಡುಗಟ್ಟಿರುವ ಮನಸ್ಸುಗಳಿಗೆ ಈ ಪಂದ್ಯಾವಳಿಯಿಂದ ಮನರಂಜನೆ ಜೊತೆಗೆ ಚೈತನ್ಯ ದೊರೆಯುವ ವಿಶ್ವಾಸವನ್ನು ಕಮರ್ ವ್ಯಕ್ತಪಡಿಸಿದ್ದಾರೆ.
Related Article
ಪಿ.ಟಿ ಟೀಚರ್ ಶರಣ್ 'ಗುರು ಶಿಷ್ಯರು' ಸಿನಿಮಾದಲ್ಲಿ ಗಾಂಧಿ ತತ್ವ ಸಾರಲಿರುವ ಸುರೇಶ್ ಹೆಬ್ಳೀಕರ್
ವಿಜಯಲಕ್ಷ್ಮಿಗೆ ಕನ್ನಡಿಗರಿಂದ ಲಕ್ಷಾಂತರ ರೂ. ಸಹಾಯ; ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ ಎಂದ 'ನಾಗಮಂಡಲ' ನಟಿ
'ತೆಲುಗು ಸ್ಟಾರ್ ಹೀರೋಗಳು ಕನ್ನಡ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ರನ್ನು ನೋಡಿ ಕಲಿಯಬೇಕು'
ಇಕ್ಕಟ್ ನಾಗಭೂಷಣ್, ಪ್ರಿಯಾಂಕಾ ತಿಮ್ಮೇಶ್ ಜೋಡಿಗೆ ಪ್ರೀತಂ ತಗ್ಗಿನಮನೆ ಚೊಚ್ಚಲ ನಿರ್ದೇಶನ
ಪ್ರೀಮಿಯರ್ ಪದ್ಮಿನಿ ಭಾಗ 2 ಪ್ರೇಕ್ಷಕರಿಗೆ ಜಾಲಿ ರೈಡ್ ಅನುಭವ ನೀಡಲಿದೆ: ಜಗ್ಗೇಶ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ