ಬೆಂಗಳೂರು: ಕಿಸ್, ಭರಾಟೆ ಕನ್ನಡ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟಿ ಶ್ರೀಲೀಲಾ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ಅಭಿನಯಿಸಿರುವ ತೆಲುಗು ಸಿನಿಮಾ ಪೆಳ್ಳಿ ಸಂದಡಿ ಇವತ್ತು ಬಿಡುಗಡೆಯಾಗಿದೆ. ಗೌರಿ ರೋನಂಕಿ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಅರ್ಕ ಮೀಡಿಯ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿದೆ. ತಮ್ಮ ಮೊದಲ ತೆಲುಗು ಚಿತ್ರ ಇದಾಗಿರುವುದರಿಂದ ಶ್ರೀಲೀಲಾ ತಾವು ಕೊಂಚ ನರ್ವಸ್ ಆಗಿರುವುದಾಗಿ ಹೇಳಿದ್ದಾರೆ.
ಕನ್ನಡದಲ್ಲಿ ಹೆಸರು ಮಾಡಿದ್ದರೂ ತೆಲುಗಿನಲ್ಲಿ ಅವರು ಪರಿಚಿತರಾಗಿಲ್ಲದ ಕಾರಣ ಈ ಸಿನಿಮಾ ಬಗ್ಗೆ ಶ್ರೀಲೀಲಾ ಎಕ್ಸೈಟ್ ಆಗಿದ್ದಾರೆ. ಸಿನಿಮಾಗೆ ಕೀರವಾಣಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
Advertisement