ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ತಮಿಳುನಟರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಥಮ್, 'ಅಪ್ಪು ಸರ್ ಸತ್ತ 3ನೇ ದಿನ ಮಣ್ಣಾದ್ರು! ತಮಿಳಿನ ಕಲಾವಿದರು ಅಂತಿಮದರ್ಶನಕ್ಕೆ ಬಂದ್ರಾ? ರಜನಿಕಾಂತ್ ಗೆ ಹುಶಾರಿಲ್ಲ OK,ಮಿಕ್ಕವರು ಏನ್ ಕಿತ್ತಾಕ್ತಿದ್ರಿ? ನಮ್ಮವರಿಗೆ ಸ್ವಾಭಿಮಾನ ಇದ್ರೆ ಅವ್ರ ಸಿನಿಮಾ ನೋಡ್ಬೇಡಿ!ಹಾಗೇ ಕರ್ನಾಟಕದಲ್ಲಿ ರಿಲೀಸ್ ಮಾಡ್ಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಪುನೀತ್ ಅಂತ್ಯಕ್ರಿಯೆ ವೇಳೆ ಕರ್ತವ್ಯ ನಿರ್ವಹಿಸಿದ ಬೆಂಗಳೂರು ಪೊಲೀಸರ ಪರಿಶ್ರಮವನ್ನು ಶ್ಲಾಗಿಸಿರುವ ಪ್ರಥಮ್, 'ಹೆಲ್ಮೆಟ್ ವಿಚಾರಕ್ಕೆ, ಟ್ರಾಫಿಕ್ ಅಲ್ಲಿ 2 ನಿಮಿಷ ತಡವಾದ್ರೆ ಪೊಲೀಸರ ಜೊತೆ ಜಗಳಮಾಡಿ ಸಣ್ಣಪುಟ್ಟದ್ದನ್ನೂವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕ್ತಿದ್ರಲ್ಲಾ, ಸತತ 48 ಗಂಟೆಯಿಂದ ಒಬ್ಬ ಪೋಲೀಸ್ ಮಲಗಿಲ್ಲ. ಅಪ್ಪು ಸರ್ ಚಿರನಿದ್ರೆಗೆ ತೊಂದರೆಯಾಗದಂತೆ ಹಗಲಿರುಳು ದುಡಿದ ನಮ್ಮ ಪೊಲೀಸರಿಗೆ ಗೆ ಗೌರವನಮನ! ಇನ್ಮೇಲಾದ್ರೂ ನಮ್ಮ ಪೋಲೀಸರನ್ನ ಗೌರವಿಸೋಣ! ಎಂದು ಟ್ವೀಟ್ ಮಾಡಿದ್ದಾರೆ.
Advertisement