ಬಿಗ್ ಬಾಸ್ 8ನೇ ಆವೃತ್ತಿ: ಮನೆಯಿಂದ ಹೊರಬಂದ ಶಮಂತ್ ಬ್ರೋ ಗೌಡ
ಬಿಗ್ ಬಾಸ್ ಕನ್ನಡದ 8ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಒಂದು ವಾರ ಬಾಕಿ ಇರುವಾಗ, ಶಮಂತ್ ಬ್ರೋ ಗೌಡ ಮನೆಯಿಂದ ಹೊರಗೆ ಬಂದಿದ್ದಾರೆ. ನಿನ್ನೆಯಷ್ಟೇ ಶುಭಾ ಪೂಂಜಾ ಮನೆಯಿಂದ ಹೊರಗೆ ಬಂದಿದ್ದರು.
Published: 01st August 2021 11:47 PM | Last Updated: 02nd August 2021 12:16 AM | A+A A-

ಶಮಂತ್ ಬ್ರೋ ಗೌಡ (ಕೃಪೆ-ಕಲ್ಲರ್ಸ್ ಕನ್ನಡ)
ಬೆಂಗಳೂರು: ಬಿಗ್ ಬಾಸ್ ಕನ್ನಡದ 8ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಒಂದು ವಾರ ಬಾಕಿ ಇರುವಾಗ, ಶಮಂತ್ ಬ್ರೋ ಗೌಡ ಮನೆಯಿಂದ ಹೊರಗೆ ಬಂದಿದ್ದಾರೆ. ಶನಿವಾರ ಶುಭಾ ಪೂಂಜಾ ಮನೆಯಿಂದ ಹೊರಗೆ ಬಂದಿದ್ದರು.
ಈ ವಾರ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್ ಬ್ರೋ ಗೌಡ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್ ಎಲಿಮಿನೇಷನ್ ಲಿಸ್ಟ್ ನಲ್ಲಿದ್ದರು. ಆದರೆ, ಮಂಜು ಪಾವಗಡ, ಅರವಿಂದ್ ಕೆ.ಪಿ. ಪ್ರಶಾಂತ್ ಸಂಬರಗಿ, ವೈಷ್ಣವಿಗೌಡ, ದಿವ್ಯಾ ಸುರೇಶ್ ಬಚಾವ್ ಆದರು. ಶಮಂತ್ ಮನೆಯಿಂದ ಹೊರಗೆ ಬರಬೇಕಾಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಶಮಂತ್ ಅಷ್ಟೇನೂ ಚುರುಕಾಗಿ ಇರಲಿಲ್ಲ, ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಸಾಕಷ್ಟು ಹಾಡುಗಳನ್ನು ಬರೆದು ಹಾಡುವುದಲ್ಲದೇ, ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು.
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ವೈಜಯಂತಿ ಅಡಿಗ 42 ನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮೂಲಕ ಶಮಂತ್ ಅವರನ್ನು ಸೇವ್ ಮಾಡಿದ್ದರು. ಇದಾದ ನಂತರದಲ್ಲಿ ಶಮಂತ್ ಲಕ್ಕಿ ಬಾಯ್ ಎಂದೇ ಕರೆಯಲ್ಪಟ್ಟಿದ್ದರು. ಆದರೆ, ಈಗ ಅವರಿಗೆ ಅದೃಷ್ಟ ಕೈ ಕೊಟ್ಟಿದ್ದು, 113 ದಿನಗಳ ಬಳಿಕ ಮನೆಯಿಂದ ಹೊರಗೆ ಬಂದಿದ್ದಾರೆ.
ಮಂಗಳವಾರ ಮತ್ತೊಬ್ಬರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಲಿದ್ದು, ಗ್ರ್ಯಾಂಡ್ ಫಿನಾಲೆಯಲ್ಲಿ ಟಾಪ್ ಐದರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಉಳಿಯಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.