ದರ್ಶನ್ ಹಿಂಬಾಲಕರಿಂದ ನನಗೆ ಬೆದರಿಕೆ ಕರೆ: ಇಂದ್ರಜಿತ್ ಆರೋಪ
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚೋದನೆಯಿಂದಾಗಿ ಅವರ ಹಿಂಬಾಲಕರು, ಅವರ ರೌಡಿಗಳು ನನಗೆ ಮೊಬೈಲ್ ಕರೆ ಹಾಗೂ ವಾಟ್ಸ್ ಆ್ಯಪ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.
Published: 19th July 2021 04:57 PM | Last Updated: 19th July 2021 06:05 PM | A+A A-

ದರ್ಶನ್-ಇಂದ್ರಜಿತ್
ಬೆಂಗಳೂರು: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚೋದನೆಯಿಂದಾಗಿ ಅವರ ಹಿಂಬಾಲಕರು, ಅವರ ರೌಡಿಗಳು ನನಗೆ ಮೊಬೈಲ್ ಕರೆ ಹಾಗೂ ವಾಟ್ಸ್ ಆ್ಯಪ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊಚ್ಚೆಗೆ ಕಲ್ಲು ಎಸೆಯಲ್ಲ; ದರ್ಶನ್ ಗೆ ಚಿಕಿತ್ಸೆಯ ಅವಶ್ಯಕತೆ ಇದೆ: ನಿರ್ದೇಶಕ ಇಂದ್ರಜಿತ್ ಲಂಕೇಶ್
ಇಂದು ಮಾಧ್ಯಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಪ್ರಕರಣದ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಕಾನೂನಿನ ಮೂಲಕ ನಾನು ಹೋರಾಡುತ್ತೇನೆ. ದರ್ಶನ್ ಪ್ರಚೋದನೆ ಬಳಿಕ ಅವರ ಹಿಂಬಾಲಕರು, ಅವರು ರೌಡಿಗಳು ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದರು.
ಇದನ್ನೂ ಓದಿ: ದರ್ಶನ್ 'ಹೀರೋಯಿಸಂ' ಏನಿದ್ದರೂ ಸಿನಿಮಾಗಳಲ್ಲಿ ತೋರಿಸಲಿ: ಇಂದ್ರಜಿತ್ ಲಂಕೇಶ್
ಇನ್ನು ಕಳೆದ 24 ಗಂಟೆಯಲ್ಲಿ ಪ್ರತಿ 30 ಸೆಕೆಂಡ್ ಗೆ ಒಂದು ಕರೆ ಬರುತ್ತಿದೆ. ಅಶ್ಲೀಲ ಪದಗಳನ್ನು ಬಳಸಿ ಸಂದೇಶ ಹಾಗೂ ಚಿತ್ರಗಳನ್ನು ಕಳುಹಿಸುತ್ತಿದ್ದಾರೆ ಎಂದರು.
ಮೈಸೂರಿನ ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಈ ವಿಚಾರ ಇಬ್ಬರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.