ಕೋವಿಡ್-19: ತಮಿಳು ನಟ ಶಮನ್ ಮಿತ್ರು ಸಾವು

ಕೊರೋನಾ ಸೋಂಕಿಗೆ ತಮಿಳು ಚಿತ್ರರಂಗದ ನಟ, ಛಾಯಾಗ್ರಾಹಕ ಶಮನ್ ಮಿತ್ರು ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಇಂದು ಜೂನ್ 17ರ ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಮನ್ ಕೊನೆಯುಸಿರೆಳೆದಿದ್ದಾಗಿ ತಿಳಿದುಬಂದಿದೆ.
ತಮಿಳು ನಟ ಶಮನ್ ಮಿತ್ರು
ತಮಿಳು ನಟ ಶಮನ್ ಮಿತ್ರು

ಚೆನ್ನೈ:  ಕೊರೋನಾ ಸೋಂಕಿಗೆ ತಮಿಳು ಚಿತ್ರರಂಗದ ನಟ, ಛಾಯಾಗ್ರಾಹಕ ಶಮನ್ ಮಿತ್ರು ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಇಂದು ಜೂನ್ 17ರ ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಮನ್ ಕೊನೆಯುಸಿರೆಳೆದಿದ್ದಾಗಿ ತಿಳಿದುಬಂದಿದೆ.

ತಮಿಳು ಸಿನಿಮಾರಂಗದ ಹೆಸರಾಂತ ನಿರ್ದೇಶಕರಾಗಿದ್ದ ಕೆ.ವಿ.ಆನಂದ್ ಅವರ ಮಾಜಿ ಸಹಾಯಕರಾಗಿದ್ದ ಶಮನ್ ಮಿತ್ರು, 2019ರಲ್ಲಿ ತೊರತಿ ಚಿತ್ರದ ಮೂಲಕ ನಾಯಕ ನಟನಾಗಿ ಅಭಿನಯಿಸಿದ್ದರು. ಈ ಚಿತ್ರದ ನಿರ್ಮಾಪಕ ಕೂಡಾ ಅವರೇ ಆಗಿದ್ದರು.

ಶಮನ್ ಪತ್ನಿ ಶಕುಂತಲಾ ಅವರಿಗೆ ಕೋವಿಡ್ -19 ಸಾಂಕ್ರಾಮಿಕ ತಗುಲಿತ್ತು. ತದನಂತರ ಶಮನ್ ಅವರಿಗೂ ಸೋಂಕು ತಗುಲಿತ್ತು. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರಿಂದು ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಚನ್ನೈನ ಫಿಲ್ಮಂ ಇನ್ಸಿಟಿಟ್ಯೂಟ್ ನಿಂದ ಪದವಿ ಪಡೆದಿದ್ದ ಶಮನ್ ಮಿತ್ರು, ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಸಿನಿಮಾಟೋಗ್ರಪಿಯಲ್ಲಿ ಚಿನ್ನದ ಪದಕ ಗೆದ್ದಿದ್ದರು.ನಂತರ ನಿರ್ದೇಶಕರಾದ ಕೆ.ವಿ. ಆನಂದ್ ಮತ್ತು ರವಿ ಕೆ ಚಂದ್ರನ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು ಎಂಬುದಾಗಿ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com