'ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದರೆ ಕೋಟಿಗೊಬ್ಬ-3 ಸಿನಿಮಾ 100 ಕೋಟಿ ಬಾಚಲಿದೆ'

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೇ ಏಪ್ರಿಲ್ 29 ರಂದು ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಅನಿರ್ಧಿಷ್ಟಾವಧಿ ಸಮಯಕ್ಕೆ ಮುಂದೂಡಲಾಗಿದೆ.
ಸುದೀಪ್
ಸುದೀಪ್

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೇ ಏಪ್ರಿಲ್ 29 ರಂದು ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಆಗಬೇಕಿತ್ತು.

ಆದರೆ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಅನಿರ್ಧಿಷ್ಟಾವಧಿ ಸಮಯಕ್ಕೆ ಮುಂದೂಡಲಾಗಿದೆ. ಅದರ ಜೊತೆಗೆ ಪ್ರೀ ರಿಲೀಸ್ ಕಾರ್ಯಕ್ರಮ ಕೂಡ ಮುಂದೂಡಲಾಗಿದೆ.

ಶಿವ ಕಾರ್ತಿಕ್ ಚೊಚ್ಚಲ ನಿರ್ದೇಶನದ ಕೋಟಿಗೊಬ್ಬ-3 ಸಿನಿಮಾವನ್ನು ಒಟಿಟಿ ಯಲ್ಲಿ ರಿಲೀಸ್ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಸೂರಪ್ಪಬಾಬು, ಚಾನೆಲ್ ಒಂದು 35 ಕೋಟಿ ರು ಆಫರ್ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ಈ ಆಫರ್ ನಿರಾಕರಿಸಿರುವ ಅವರು ಕೋಟಿಗೊಬ್ಬ -3 ಸಿನಿಮಾಗಾಗಿ 70 ಕೋಟಿ ರು ಹಣ ಖರ್ಚು ಮಾಡಿದ್ದೇನೆ, ಒಟಿಟಿಗಾಗಿ ಏಕೆ 35 ಕೋಟಿಗೆ ನೀಡಲಿ ಎಂದು ಪ್ರಶ್ನಿಸಿದ್ದಾರೆ.

ಎಲ್ಲದಕ್ಕೂ ಮೊದಲಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ನಾನು ಆಲೋಚನೆ ಮಾಡಿಯೇ ಇಲ್ಲ, ಎರಡನೇಯದಾಗಿ ಅಷ್ಟು ಕಡಿಮೆ ಬೆಲೆಗೆ ಇಂಥಹ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಇದೊಂದು ಉತ್ತಮ ಕಥೆ ಹೊಂದಿರುವ ಸಿನಿಮಾವಾಗಿದ್ದು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಿದರೇ 100 ಕೋಟಿ ಗಳಿಸುತ್ತದೆ, ಹೀಗಿರುವಾಗ ಒಟಿಟಿಯಲ್ಲಿ ಏಕೆ ರಿಲೀಸ್ ಮಾಡಲಿ ಎಂದು ಪ್ರಶ್ನಿಸಿದ್ದಾರೆ.

ಸಿನಿಮಾದ ಮೊದಲ ಕಾಪಿ ರೆಡಿ ಮಾಡಿಟ್ಟುಕೊಂಡಿರುವ ಚಿತ್ರ ತಂಡ ಕೆಲಸ ಪುನಾರಂಭವಾದಾಗ ಸೆನ್ಸಾರ್ ಬೋರ್ಡ್ ಗೆ ನೀಡಲು ಯೋಜಿಸಿದ್ದಾರೆ.

ಕೋಟಿಗೊಬ್ಬ 3 2021 ರ ಬಹು ನಿರೀಕ್ಷಿತ ಸಿನಿಮಾವಾಗಿದೆ, ಸುದೀಪ್ ಕಥೆ ಬರೆದಿದ್ದು. ಮಡೋನಾ ಸೆಬಾಸ್ಟಿಯನ್ ಚೊಚ್ಚಲ ಕನ್ನಡ ಸಿನಿಮಾ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com