ಉದ್ಯಮಿ ನಿತಿನ್ ರಾಜು, ನಟಿ ಪ್ರಣಿತಾ ಸುಭಾಷ್ ಸರಳ ವಿವಾಹ
ಚಲನಚಿತ್ರ ನಟಿ ಪ್ರಣಿತಾ ಸುಭಾಷ್ ಕೊರೋನಾ ಸೋಂಕಿನ ಲಾಕ್ ಡೌನ್ ಮಧ್ಯೆ ಸರಳವಾಗಿ ಗೌಪ್ಯವಾಗಿ ವಿವಾಹವಾಗಿದ್ದಾರೆ. ನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿಯೇ ಅವರು ನಿನ್ನೆ ತಮ್ಮ ಬಹುಕಾಲದ ಗೆಳೆಯ ಉದ್ಯಮಿ ನಿತಿನ್ ರಾಜ್ ಅವರ ಕೈಹಿಡಿದಿದ್ದಾರೆ.
Published: 31st May 2021 01:21 PM | Last Updated: 31st May 2021 05:46 PM | A+A A-

ವಿವಾಹ ನಂತರ ನಟಿ ಪ್ರಣಿತಾ ಸುಭಾಷ್
ಬೆಂಗಳೂರು: ಚಲನಚಿತ್ರ ನಟಿ ಪ್ರಣಿತಾ ಸುಭಾಷ್ ಕೊರೋನಾ ಸೋಂಕಿನ ಲಾಕ್ ಡೌನ್ ಮಧ್ಯೆ ಸರಳವಾಗಿ ಗೌಪ್ಯವಾಗಿ ವಿವಾಹವಾಗಿದ್ದಾರೆ. ನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿಯೇ ಅವರು ನಿನ್ನೆ ತಮ್ಮ ಬಹುಕಾಲದ ಗೆಳೆಯ ಉದ್ಯಮಿ ನಿತಿನ್ ರಾಜ್ ಅವರ ಕೈಹಿಡಿದಿದ್ದಾರೆ.
ವಿವಾಹ ಸಮಾರಂಭದಲ್ಲಿ ಕೇವಲ ಆಪ್ತೇಷ್ಟರು ಮತ್ತು ನಿಕಟ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದಾರೆ.
ಹಲವು ವರ್ಷಗಳಿಂದ ನಾನು ಮತ್ತು ನಿತಿನ್ ರಾಜು ಪರಿಚಿತರಾಗಿದ್ದೆವು. ಪರಿಚಯ ಸ್ನೇಹವಾಗಿ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದೇವೆ. ಕೋವಿಡ್ ಶಿಷ್ಟಾಚಾರದ ಮಧ್ಯೆ ಸರಳವಾಗಿ ಮದುವೆಯಾಗಿದ್ದೇವೆ, ಮೊದಲಿನಿಂದಲೂ ನನಗೆ ಖಾಸಗಿಯಾಗಿ ಸರಳವಾಗಿ ವಿವಾಹವಾಗಬೇಕೆಂದೇ ಆಸೆಯಿತ್ತು, ಅದಕ್ಕೆ ತಕ್ಕಂತೆ ನೆರವೇರಿದೆ ಎಂದು ಪ್ರಣಿತಾ ಪ್ರತಿಕ್ರಿಯೆ ನೀಡಿದ್ದಾರೆ.