"ರಾಣ" ಚಿತ್ರದಲ್ಲಿ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ ಡ್ಯಾನ್ಸ್

ಶ್ರೇಯಸ್ಸ್ ಕೆ ಮಂಜು ಅಭಿನಯದ "ರಾಣ" ಚಿತ್ರದ ಹಾಡೊಂದಕ್ಕೆ "ಕಿರಿಕ್ ಪಾರ್ಟಿ" ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ. 
ರಾಣಾ ಚಿತ್ರದಲ್ಲಿ ಸಂಯುಕ್ತ ಹೆಗ್ಡೆ
ರಾಣಾ ಚಿತ್ರದಲ್ಲಿ ಸಂಯುಕ್ತ ಹೆಗ್ಡೆ

ಬೆಂಗಳೂರು: ಶ್ರೇಯಸ್ಸ್ ಕೆ ಮಂಜು ಅಭಿನಯದ "ರಾಣ" ಚಿತ್ರದ ಹಾಡೊಂದಕ್ಕೆ "ಕಿರಿಕ್ ಪಾರ್ಟಿ" ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ. 

ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವು ಕೆಜಿಎಫ್ ನಿರ್ಮಿಸಿರುವ ಭವ್ಯವಾದ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ‌ ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. 

ಶೇಖರ್ ಚಂದ್ರು ಛಾಯಾಗ್ರಹಣ ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ , ಶಿವು ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ "ರಾಣ" ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌. 

ಸಂಯುಕ್ತಾ ಹೆಗ್ಡೆಗೆ ಸಂಬಂಧಿಸಿದಂತೆ, ಇದು ಅವರ ಕನ್ನಡದ ಐದನೇ ಚಿತ್ರವಾಗಿದ್ದು, ಈ ಹಿಂದೆ 'ಕಿರಿಕ್ ಪಾರ್ಟಿ', 'ಕಾಲೇಜ್ ಕುಮಾರ್', 'ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ', ಮತ್ತು 'ತುರ್ತು ನಿರ್ಗಮನ' ನಂತರ ಅವರ ಐದನೇ ಕನ್ನಡ ಚಿತ್ರವಾಗಿದೆ. ಸಂಯುಕ್ತಾ ಕಿರಿಕ್ ಪಾರ್ಟಿಯ ತೆಲುಗು ರೀಮೇಕ್ 'ಕಿರ್ರಾಕ್ ಪಾರ್ಟಿ'ಯಲ್ಲೂ ಅದೇ ಪಾತ್ರವನ್ನು ಪುನರಾವರ್ತಿಸಿದ್ದರು. ನಂತರ 2019 ರಲ್ಲಿ 'ವಾಟ್ಮನ್' ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com