'ಸಖತ್' ಪ್ರೀ ರಿಲೀಸ್ ಇವೆಂಟ್, ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂಧಿ!
ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಬಹುನಿರೀಕ್ಷಿತ “ಸಖತ್” ತೆರೆಯಲ್ಲಿ ವಿಜೃಂಭಿಸಲು ಇನ್ನು ಮೂರೇ ದಿನ ಬಾಕಿಯಿದೆ. ಈಗಾಗಲೇ ಫಸ್ಟ್ ಲುಕ್, ಟೀಸರ್ ಹಾಗೂ ಹಾಡು ಮೂಲಕ ಕುತೂಹಲದ ಚಿಟ್ಟೆಯಾಗಿರುವ ಸಖತ್ ಸಿನಿಮಾ ಬಳಗ ನಿನ್ನೆ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು.
Published: 23rd November 2021 09:00 PM | Last Updated: 24th November 2021 01:25 PM | A+A A-

ಸಖತ್ ಪ್ರೀ ರಿಲೀಸ್ ಇವೆಂಟ್
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಬಹುನಿರೀಕ್ಷಿತ “ಸಖತ್” ತೆರೆಯಲ್ಲಿ ವಿಜೃಂಭಿಸಲು ಇನ್ನು ಮೂರೇ ದಿನ ಬಾಕಿಯಿದೆ. ಈಗಾಗಲೇ ಫಸ್ಟ್ ಲುಕ್, ಟೀಸರ್ ಹಾಗೂ ಹಾಡು ಮೂಲಕ ಕುತೂಹಲದ ಚಿಟ್ಟೆಯಾಗಿರುವ ಸಖತ್ ಸಿನಿಮಾ ಬಳಗ ನಿನ್ನೆ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು.
ಚಿತ್ರದ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್-ನಿಶಾ, ಹಿರಿಯ ಕಲಾವಿದ ರಂಗಾಯಣ ರಘು ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ತಾರಾಬಳಗ ಸಖತ್ ಪ್ರೀ-ರಿಲೀಸ್ ಇವೆಂಟ್ ಗೆ ಸಾಕ್ಷಿಯಾದರು.
ನಿರ್ದೇಶಕ ಕಮ್ ನಟ ಜೋಗಿ ಪ್ರೇಮ್, ಬೈ ಟು ಲವ್ ಬ್ಯೂಟಿ ಶ್ರೀಲೀಲಾ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಖತ್ ಸಿನಿಮಾಗೆ ಶುಭ ಹಾರೈಸಿದರು. ಒಟ್ಟಿಗೆ ವೇದಿಕೆ ಏರಿದ ಗಣೇಶ್ ಮತ್ತು ಪ್ರೇಮ್, ಎಕ್ಸ್ ಕ್ಯೂಸ್ ಮೀ ಸಿನಿಮಾದ ಬ್ರಹ್ಮ ವಿಷ್ಣು ಹಾಡು ಹಾಡಿದರು.
ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಸಕತ್ ಗೂ ಅಂಧಾಧುನ್ ಗೂ ಸಂಬಂಧವಿಲ್ಲ: ನಿರ್ದೇಶಕ ಸುನಿ
ಇದಕ್ಕೂ ಮೊದಲು ಮಾತಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಅಪ್ಪುಗೆ ನಮನ ಸಲ್ಲಿಸಿ, ಪವರ್ ಸ್ಟಾರ್ ಕನ್ನಡ ಚಿತ್ರರಂಗ ಇರುವವರೆಗೂ ನಂಬರ್-1 ಸ್ಟಾರ್ ಅಂತ ಮನದ ಮಾತು ಬಿಚ್ಚಿಟ್ಟರು. ಬಳಿಕ ತಮ್ಮ ಚಂದದ ಮಾತಿನ ಮೂಲಕ ಎಲ್ಲರನ್ನೂ ನಕ್ಕು ನಲಿಸಿ ಸಖತ್ ಸಿನಿಮಾ ಎಲ್ಲರೂ ನೋಡಿ ಅಂತಾ ಮನವಿ ಮಾಡಿಕೊಂಡರು.
ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಸ್ಯನಟ ಧರ್ಮಣ್ಣ ಕಡೂರು, ರಂಗಾಯಣ ರಘು ಸಖತ್ ಸಿನಿಮಾದಲ್ಲಿನ ಜರ್ನಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಟಿವಿ ರಿಯಾಲಿಟಿ ಶೋ ಸುತ್ತ ಎಣೆದಿರೋ ಸಖತ್ ಸಿನಿಮಾಕ್ಕೆ ಸುಪ್ರಿತ್ ಹಾಗೂ ನಿಶಾ ಬಂಡವಾಳ ಹೂಡಿದ್ದು, ಈಗಾಗ್ಲೇ ಸೆನ್ಸಾರ್ ಮುಗಿಸಿರೋ ಸಖತ್ ಸಿನಿಮಾ ಇದೇ 26ಕ್ಕೆ ಥಿಯೇಟರ್ ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ.