ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಸಕತ್ ಗೂ ಅಂಧಾಧುನ್ ಗೂ ಸಂಬಂಧವಿಲ್ಲ: ನಿರ್ದೇಶಕ ಸುನಿ

ನ್ಯಾಯಾಲಯದ ಯಾವುದೇ ವಿಚಾರಣೆಯಲ್ಲಿ ಐವಿಟ್ನೆಸ್ ಪ್ರಧಾನ ಪಾತ್ರ ವಹಿಸುತ್ತಾರೆ. ಆದರೆ ಒಬ್ಬ ಕಣ್ಣು ಕಾಣದ ಕುರುಡ ಐವಿಟ್ನೆಸ್ ಆದರೆ ಏನಾಗುತ್ತದೆ ಎನ್ನುವುದೇ 'ಸಕತ್' ಸ್ಕ್ರಿಪ್ಟ್ ಗೆ ಮೂಲ ಪ್ರೇರಣೆ. 'ಸಕತ್' ನವೆಂಬರ್ 26ರಂದು ತೆರೆಕಾಣುತ್ತಿದೆ. 
ಸಕತ್ ಚಿತ್ರೀಕರಣ ವೇಳೆ ನಿರ್ದೇಶಕ ಸುನಿ ಮತ್ತು ನಟ ಗಣೇಶ್
ಸಕತ್ ಚಿತ್ರೀಕರಣ ವೇಳೆ ನಿರ್ದೇಶಕ ಸುನಿ ಮತ್ತು ನಟ ಗಣೇಶ್

ಬೆಂಗಳೂರು: ನವಿರಾದ ಪ್ರೀತಿ, ತಮಾಷೆಭರಿತ ಸಿನಿಮಾಗಳಿಗೆ ಹೆಸರಾದ ಕನ್ನಡ ಚಿತ್ರ ನಿರ್ದೇಶಕ ಸುನಿ ಫ್ರೆಶ್ ಮತ್ತು ಪ್ರಯೋಗಾತ್ಮಕ ಸಿನಿಮಾಗಳಿಗೆ ತೆರೆದುಕೊಂಡವರು. ಅವರು ನಿರ್ದೇಶಿಸಿರುವ ಹೊಸ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಕತ್' ನವೆಂಬರ್ 26ರಂದು ತೆರೆಕಾಣುತ್ತಿದೆ. 

ಕಾಮಿಡಿ- ಕೋರ್ಟ್ ರೂಮ್ ಡ್ರಾಮ ಸಿನಿಮಾ ಆಗಿರುವ ಸಕತ್ ಸಿನಿಮಾ ಯಾವುದೇ ರೀತಿಯಲ್ಲೂ ಬಾಲಿವುಡ್ ನ ಅಂಧಾಧುನ್ ಸಿನಿಮಾಗೆ ಹೋಲುವುದಿಲ್ಲ ಎಂದು ಸುನಿ ಸ್ಪಷ್ಟ ಪಡಿಸಿದ್ದಾರೆ. 

ನ್ಯಾಯಾಲಯದ ಯಾವುದೇ ವಿಚಾರಣೆಯಲ್ಲಿ ಐವಿಟ್ನೆಸ್ ಪ್ರಧಾನ ಪಾತ್ರ ವಹಿಸುತ್ತಾರೆ. ಆದರೆ ಒಬ್ಬ ಕಣ್ಣು ಕಾಣದ ಕುರುಡ ಐವಿಟ್ನೆಸ್ ಆದರೆ ಏನಾಗುತ್ತದೆ ಎನ್ನುವುದೇ ನನ್ನ ಸ್ಕ್ರಿಪ್ಟ್ ಗೆ ಮೂಲ ಪ್ರೇರಣೆ.

ಹಾಲಿವುಡ್ ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಅಂಧಾಧುನ್ ಸಿನಿಮಾವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿ ಆಯುಷ್ಮಾನ್ ಖುರಾನ, ತಬು ಮತ್ತು ರಾಧಿಕಾ ಆಪ್ಟೆ ನಟಿಸಿದ್ದರು. ಅದರಲ್ಲಿ ಆಯುಷ್ಮಾನ್ ಕುರುಡನ ಪಾತ್ರದಲ್ಲಿ ಮಿಂಚಿದ್ದರು.

ಸಕತ್ ಸಿನಿಮಾದಲ್ಲಿ ಗಣೇಶ್ ಅವರ ಲುಕ್ ಅಂಧಾಧುನ್ ಸಿನಿಮಾದ ನಾಯಕನ ಪಾತ್ರವನ್ನು ಹೋಲುತ್ತಿದ್ದುದರಿಂದ ಇದು ಅಂಧಾಧುನ್ ಸಿನಿಮಾದಿಮ್ದ ಪ್ರೇರಣೆ ಪಡೆದುಕೊಂಡಿರಬಹುದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. 

ಆದರೆ ಸಕತ್ ಸಿನಿಮಾ ನೂರಕ್ಕೆ ನೂರು ಪ್ರತಿಶತ ಅಂಧಾಧುನ್ ಗಿಂತ ಭಿನ್ನವಾಗಿದೆ ಎಂದು ಸುನಿ ಗ್ರಾರಂಟಿ ಕೊಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com