1999ರ ಬ್ಲಾಕ್ ಬಸ್ಟರ್ ಸಿನಿಮಾ 'ಮ್ಯಾಟ್ರಿಕ್ಸ್' ಭಾರತದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ
ಮ್ಯಾಟ್ರಿಕ್ಸ್ ಚಿತ್ರಸರಣಿಯ ಮೂರೂ ಅವತರಣಿಕೆಗಳು ಜನಪ್ರಿಯಗೊಂಡಿದ್ದವು. ಅಷ್ಟು ಮಾತ್ರವಲ್ಲ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದ್ದವು.
Published: 23rd November 2021 12:13 PM | Last Updated: 23rd November 2021 12:59 PM | A+A A-

ಸಿನಿಮಾ ಪೋಸ್ಟರ್
ನವದೆಹಲಿ: ಸುಪ್ರಸಿದ್ಧ ಚಿತ್ರನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ 1999ರಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಆಗಿದ್ದ 'ಮ್ಯಾಟ್ರಿಕ್ಸ್' ಸಿನಿಮಾವನ್ನು ಭಾರತದ ಚಿತ್ರಮಂದಿರಗಳಲ್ಲಿ ಡಿಸೆಂಬರ್ 3ರಂದು ಮತ್ತೆ ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಎಮ್ಮೀ ಅವಾರ್ಡ್ 2021: ಮೂರೂ ವಿಭಾಗಗಳಲ್ಲಿ ಅವಾರ್ಡ್ ಮಿಸ್ ಆದರೂ ಬೀಗಿದ ಭಾರತ
ಮ್ಯಾಟ್ರಿಕ್ ಚಿತ್ರಸರಣಿಯ ಮೂರೂ ಅವತರಣಿಕೆಗಳು ಜನಪ್ರಿಯಗೊಂಡಿದ್ದವು. ಅಷ್ಟು ಮಾತ್ರವಲ್ಲ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದ್ದವು.
ಇದನ್ನೂ ಓದಿ: ಇನ್ ಸ್ಟಾಗ್ರಾಂನಲ್ಲಿ ಪತಿ ಜೋನಾಸ್ ಹೆಸರು ಕೈಬಿಟ್ಟ ಪ್ರಿಯಾಂಕಾ ಚೋಪ್ರಾ: ದಾಂಪತ್ಯದಲ್ಲಿ ಬಿರುಕು ಶಂಕೆ!
ಇದೀಗ ಅದೇ ಸಿನಿಮಾದ ನಾಲ್ಕನೇ ಅವತರಣಿಕೆ 'ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್' ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಮುಂಚಿತವಾಗಿ ಹಳೆಕ ಅವತರಣಿಕೆಯನ್ನು ವಾರ್ನರ್ ಬ್ರದರ್ಸ್ ಬಿಡುಗಡೆಗೊಳಿಸುತ್ತಿದೆ. ಹೊಸ ಅವತರಣಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: 'ಮನಿ ಹೈಸ್ಟ್' ನೆಟ್ ಫ್ಲಿಕ್ಸ್ ಥ್ರಿಲ್ಲರ್ ಧಾರಾವಾಹಿ ಸರಣಿ ಕಡೆಯ ಭಾಗದ ಪೋಸ್ಟರ್ ಬಿಡುಗಡೆ: ಪ್ರಸಾರ ದಿನಾಂಕ ನಿಗದಿ