ಲಿವಿನ್ ರಿಲೇಶನ್ ಶಿಪ್ ಗಳನ್ನು ಮದುವೆಯಂತೆಯೇ ನೋಡಬೇಕು: ಚಂದನವನಕ್ಕೆ ಗಂಧದಗುಡಿ ನಾಯಕನ ಮೊಮ್ಮಗಳು ಭರ್ಜರಿ ಎಂಟ್ರಿ

ಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಿನ್ನ ಸನಿಹಕೆ ಪ್ರೀಮಿಯರ್ ಶೋಗೆ ರಾಜ್ ಕುಟುಂಬಕ್ಕಾಗಿಯೇ 85 ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದೆ ಎನ್ನುವುದು ಅಚ್ಚರಿಯ ವಿಷಯ. ಈ ಸಂಗತಿಯನ್ನು ಧನ್ಯಾ ತುಂಬು ಹೃದಯದಿಂದ ಸ್ಮರಿಸುತ್ತಾರೆ. ಅಕ್ಟೋಬರ್ 8ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.
ಧನ್ಯಾ ರಾಮ್ ಕುಮಾರ್
ಧನ್ಯಾ ರಾಮ್ ಕುಮಾರ್
Updated on

ಬೆಂಗಳೂರು: ಕನ್ನಡ ಸಿನಿಮಾಗಳಲ್ಲಿ ಲಿವಿನ್ ರಿಲೇಶನ್ ಶಿಪ್ ಗಳ ಕುರಿತಾದ ಕಥೆಗಳು ಬಂದಿರುವುದು ಅತ್ಯಪರೂಪ. ನಟ ಸೂರಜ್ ಗೌಡ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ನಿನ್ನ ಸನಿಹಕೆ ಸಿನಿಮಾ ಲಿವಿನ್ ರಿಲೇಶನ್ ಶಿಪ್ ವಿಚಾರದ ಕುರಿತು ಬೆಳಕು ಚೆಲ್ಲುತ್ತಿದೆ. ಇದೇ ಸಿನಿಮಾ ಮೂಲಕ ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಚಂದನವಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಕ್ಟೋಬರ್ 8ರಂದು ನಿನ್ನ ಸನಿಹಕೆ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಲಿವಿನ್ ರಿಲೇಶನ್ ಶಿಪ್ ಗೆ ಹಲವು ಪ್ರಯೋಜನಗಳಿವೆ. ದುಷ್ಪರಿಣಾಮ ಇಲ್ಲ ಎಂದು ಹೇಳುತ್ತಿಲ್ಲ. ಆದರೆ ದುಷ್ಪರಿಣಾಮಗಳಿಗಿಂತ ಪ್ರಯೋಜನಗಳು ಹೆಚ್ಚು ಎಂದು ತಮ್ಮ ಅಭಿಪ್ರಾಯವನ್ನು ಧನ್ಯಾ ರಾಮ್ ಕುಮಾರ್ ಹಂಚಿಕೊಂಡಿದ್ದಾರೆ. 

ಯಾರನ್ನಾದರೂ ಡೇಟ್ ಮಾಡುವಾಗ ಸಂಗಾತಿಯ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗುವುದಿಲ್ಲ. ಆದರೆ ಲಿವಿನ್ ರಿಲೇಶನ್ ಶಿಪ್ ನಲ್ಲಿದ್ದಾಗ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ನಿಜವಾದ ಪ್ರೀತಿಯ ಪರೀಕ್ಷೆ ಆಗ ಆಗುತ್ತದೆ. ಸಿನಿಮಾದಲ್ಲಿ ಈ ಬಗ್ಗೆ ಹೆಚ್ಚಿನ ವಿಚಾರಗಳನ್ನು ಹೇಳಲಾಗಿದೆ ಎಂಡು ಧನ್ಯಾ ರಾಮ್ ಕುಮಾರ್ ಹೇಳಿದ್ದಾರೆ. 

'ನಿನ್ನ ಸನಿಹಕೆ' ಸಿನಿಮಾ ಲಿವಿನ್ ರಿಲೇಶನ್ ಶಿಪ್ ಗಳ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಹೋಗಲಾಡಿಸುವ ವಿಶ್ವಾಸವನ್ನು ಧನ್ಯಾ ವ್ಯಕ್ತಪಡಿಸುತ್ತಾರೆ. 

ರಾಜ್ ಮೊಮ್ಮಗಳ ಸಿನಿಮಾ ಬಿಡುಗಡೆಗೆ ಇಡೀ ರಾಜ್ ಪರಿವಾರವೇ ಎದುರು ನೋಡುತ್ತಿದೆ. ನಿನ್ನ ಸನಿಹಕೆ ಪ್ರೀಮಿಯರ್ ಶೋಗೆ ರಾಜ್ ಕುಟುಂಬಕ್ಕಾಗಿಯೇ 85 ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದೆ ಎನ್ನುವುದು ಅಚ್ಚರಿಯ ವಿಷಯ. ಈ ಸಂಗತಿಯನ್ನು ಧನ್ಯಾ ತುಂಬು ಹೃದಯದಿಂದ ಸ್ಮರಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com