ಶಿವಣ್ಣನ 'ಭಜರಂಗಿ-2 ರಾಜ್ಯಾದ್ಯಂತ ಬಿಡುಗಡೆ: ಮುಂಜಾನೆ 5 ಗಂಟೆಯಿಂದ ಫ್ಯಾನ್ ಶೋ ಆರಂಭ

 ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು 1 ಸಾವಿರ ಪರದೆಗಳಲ್ಲಿ  ಬಿಡುಗಡೆಯಾಗಿದ್ದು, ಮುಂಜಾನೆ 5 ಗಂಟೆಯಿಂದಲೇ ಫ್ಯಾನ್ ಶೋ ಆರಂಭವಾಗಿದೆ. ಚಿತ್ರ ಮಂದಿರಗಳು ಹೌಸ್ ಫುಲ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಭಜರಂಗಿ ಚಿತ್ರದಲ್ಲಿ ಡಾ. ಶಿವರಾಜ್ ಕುಮಾರ್
ಭಜರಂಗಿ ಚಿತ್ರದಲ್ಲಿ ಡಾ. ಶಿವರಾಜ್ ಕುಮಾರ್

ಬೆಂಗಳೂರು: ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು 1 ಸಾವಿರ ಪರದೆಗಳಲ್ಲಿ  ಬಿಡುಗಡೆಯಾಗಿದ್ದು, ಮುಂಜಾನೆ 5 ಗಂಟೆಯಿಂದಲೇ ಫ್ಯಾನ್ ಶೋ ಆರಂಭವಾಗಿದೆ. ಚಿತ್ರ ಮಂದಿರಗಳು ಹೌಸ್ ಫುಲ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.

ದೊಡ್ಮನೆ ಅಭಿಮಾನಿಗಳ ಅದ್ದೂರಿಯಿಂದ ಭಜರಂಗಿ-2 ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಗೌಡನಪಾಳ್ಯದ ಶ್ರೀನಿವಾಸ ಹಾಗೂ ಜೆಪಿ ನಗರದ ಸಿದ್ದೇಶ್ವರ ಚಿತ್ರ ಮಂದಿರದಲ್ಲಿ ಶೋ ಆರಂಭವಾಗಿದ್ದು, ಶಿವರಾಜ್ ಕುಮಾರ್, ಭಜರಂಗಿ ಲೋಕಿ, ವಸಿಷ್ಠ ಸಿಂಹ ಸೇರಿದಂತೆ ಅನೇಕರು ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸಿದರು. ಕೆಲ ಥಿಯೇಟರ್ ಗಳ ಮುಂದೆ ಭಾರೀ ಕಟೌಟ್ ಹಾಕಲಾಗಿದ್ದು, ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದರು.

ಮೈಸೂರು, ಮಂಡ್ಯ, ದಾವಣೆಗೆರೆ ಸೇರಿದಂತೆ ಹಲವೆಡೆ ಬೆಳಗ್ಗೆ 7 ಗಂಟೆಯಿಂದ ಶೋ ಆರಂಭವಾಗಿದೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಫಸ್ಟ್ ಹಾಫ್ ಚೆನ್ನಾಗಿರುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.

ಎ ಹರ್ಷ ನಿರ್ದೇಶಿಸಿರುವ ಈ ಚಿತ್ರಕ್ಕೆ ಜಯಣ್ಣ ಹಾಗೂ ಬೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಿದೆ. ಲೋಕಿ, ಶಿವರಾಜ್ ಕೆ ಆರ್ ಪೇಟೆ ಮತ್ತಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com