The New Indian Express
ಹಾಲಿವುಡ್: ಕಾಲೇಜು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಫ್ರೆಂಡ್ಸ್ ಧಾರಾವಾಹಿ ಸರಣಿಯಲ್ಲಿ ಜೋಡಿಗಳಾಗಿ ಕಾಣಿಸಿಕೊಂಡಿದ್ದ ಜೆನಿಫರ್ ಆನಿಸ್ಟನ್ ಮತ್ತು ದೇವಿಡ್ ಶ್ವಿಮ್ಮರ್ ಈಗ ನಿಜ ಜೀವನದಲ್ಲಿ ಪ್ರಣಯ ಪಕ್ಷಿಗಳಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಇದು ಫ್ರೆಂಡ್ಸ್ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿತ್ತು.
ಇದನ್ನೂ ಓದಿ: ಎರಡು ಸಿನಿಮಾಗಳಿಗೆ 744 ಕೋಟಿ ರೂ. ಸಂಭಾವನೆ ಪಡೆದ ಜೇಮ್ಸ್ ಬಾಂಡ್ ನಟ
ತಮ್ಮ ಸಂಬಂಧದ ಬಗ್ಗೆ ಸ್ಪಷ್ಟೀಕರಣ ನೀಡಿರುವ ನಟಿ ಜೆನಿಫರ್ ಆನಿಸ್ಟನ್ ಅದು ಸುಳ್ಳೆಂದು ತಿಳಿಸಿದ್ದಾರೆ. ಜನರು ಫ್ರೆಂಡ್ಸ್ ಧಾರಾವಾಹಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ
ಫ್ರೆಂಡ್ಸ್ ಧಾರಾವಾಹಿ ತೆರೆಕಂಡು ದಶಕಗಳೇ ಉರುಳಿದ್ದರೂ ಅಭಿಮಾನಿಗಳು ಅದರ ಗುಂಗಿನಿಂದ ಹೊರಬಂದಿಲ್ಲ. ಧಾರಾವಾಹಿಯ ಕಲ್ಪನಾಲೋಕದಲ್ಲೇ ವಿಹರಿಸುತ್ತಿದ್ದಾರೆ. ಹೀಗಾಗಿ ನಿಜಜೀವನದಲ್ಲಿ ತಾವು ಮತ್ತು ಡೇವಿಡ್ ಒಂದಾಗಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ. ಜೆನಿಫರ್ ಆನಿಸ್ಟನ್ ಅವರು ಹಾಲಿವುಡ್ ನಟ ಬ್ರಾಡ್ ಪಿಟ್ ಅವರ ಮಾಜಿ ಪತ್ನಿ.