ಸುದೀರ್ಘ ಸಿನಿ ಪಯಣವನ್ನು ಕೆಲವೇ ಪದಗಳಲ್ಲಿ ವರ್ಣಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ: ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಅಭಿನಯದ  ಬಹುನಿರೀಕ್ಷಿತ 'ವೇದ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದು ಅವರ 125 ನೇ ಚಿತ್ರವಾಗಿದೆ. ಈ ಸಾಧನೆ ಮಾಡಿದ ಭಾರತೀಯ ಸಿನಿಮಾ ರಂಗದ ಕೆಲವೇ ನಟರಲ್ಲಿ ಶಿವಣ್ಣ ಕೂಡಾ ಒಬ್ಬರಾಗಿದ್ದಾರೆ.
ವೇದ ಚಿತ್ರದಲ್ಲಿ ಶಿವಣ್ಣ
ವೇದ ಚಿತ್ರದಲ್ಲಿ ಶಿವಣ್ಣ

ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಅಭಿನಯದ  ಬಹುನಿರೀಕ್ಷಿತ 'ವೇದ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದು ಅವರ 125 ನೇ ಚಿತ್ರವಾಗಿದೆ. ಈ ಸಾಧನೆ ಮಾಡಿದ ಭಾರತೀಯ ಸಿನಿಮಾ ರಂಗದ ಕೆಲವೇ ನಟರಲ್ಲಿ ಶಿವಣ್ಣ ಕೂಡಾ ಒಬ್ಬರಾಗಿದ್ದಾರೆ. ನಟರು 100 ಚಿತ್ರಗಳನ್ನು ದಾಟಲು ಕಷ್ಟಪಡುತ್ತಿರುವ ಈ ಸಮಯದಲ್ಲಿ ಕನ್ನಡದ ದಿಗ್ಗಜರಾದ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶ್ರೀನಾಥ್ ಮತ್ತು ತಮ್ಮ ಸ್ವಂತ ಅಪ್ಪಾಜಿ ಡಾ ರಾಜ್‌ಕುಮಾರ್ ಅವರನ್ನು ಒಳಗೊಂಡಿರುವ ಸುಪ್ರಸಿದ್ಧ ನಟರ ಪಟ್ಟಿಗೆ ಸೇರಲು ಹ್ಯಾಟ್ರಿಕ್ ಹಿರೋ ಹರ್ಷ ವ್ಯಕ್ತಪಡಿಸಿದ್ದಾರೆ.

''1986ರಲ್ಲಿ ಆನಂದ್ ಚಿತ್ರರೊಂದಿಗೆ ನನ್ನ ವೃತ್ತಿ ಜೀವನ ಆರಂಭವಾಯಿತು. ಫೆಬ್ರವರಿಯಲ್ಲಿ ಇಂಡಸ್ಟ್ರಿಯಲ್ಲಿ 37 ವರ್ಷ ಮುಗಿಸುತಿದ್ದೇನೆ. ಹಿಂದಿರುಗಿ ನೋಡಿದರೆ, ಈ ಧೀರ್ಘ ಅವಧಿಯನ್ನು ಹೇಗೆ ವರ್ಣಿಸಬೇಕು ಎಂಬುದು ಗೊತ್ತಾಗುತ್ತಿಲ್ಲ. ಶಕ್ತಿ ಎಲ್ಲಿಂದ ಬರುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ. ಪ್ರತಿ ಚಿತ್ರವನ್ನು ನನ್ನ ಮೊದಲ ಚಿತ್ರವಾಗಿ ನೋಡುತ್ತೇನೆ ಮತ್ತು ಅದು ಹೊಸ ಆರಂಭ ಮಾಡಲು ನನಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳುತ್ತಾರೆ.

ಜಿ ಸ್ಟುಡಿಯೋಸ್ ಸಹಯೋಗದಲ್ಲಿ ತಮ್ಮದೇ ಸ್ವಂತ ಗೀತಾ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ವೇದ ಶಿವಣ್ಣನಿಗೆ ವಿಶೇಷವಾಗಿದೆ. ತನ್ನ ಚೊಚ್ಚಲ ಚಿತ್ರವನ್ನು ತನ್ನ ತಾಯಿ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಹೇಗೆ ಬೆಂಬಲಿಸಿದರು ಎಂಬುದನ್ನು ನೆನಪಿಸಿಕೊಳ್ಳುವ ಶಿವಣ್ಣ, ಈಗ ತನ್ನ ಪತ್ನಿ ಗೀತಾ 125ನೇ ಚಿತ್ರವನ್ನು ನಿರ್ಮಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಹೆಚ್ಚಿನ ಮಹಿಳಾ ಶಕ್ತಿಯಿದೆ, ಇದು ಅಪ್ಪಾಜಿಯವರ ಕಾಲದಿಂದಲೂ ಅಸ್ತಿತ್ವದಲ್ಲಿದೆ ಮತ್ತು ಸಂಪ್ರದಾಯವು ಈಗ ಮುಂದುವರೆದಿದೆ ಎಂದು ಅವರು ಪ್ರತಿಪಾದಿಸುತ್ತಾರೆ.

ತಾನು ವೃತ್ತಿಜೀವನದಲ್ಲಿ ಎಂದಿಗೂ ಗುರಿಯನ್ನು ಹೊಂದಿರಲಿಲ್ಲ,  ಬಂದ ಕೆಲಸವನ್ನು ಆನಂದಿಸುತ್ತೇನೆ ಎನ್ನುವ ಶಿವಣ್ಣ,ನನ್ನ ಚಿತ್ರಗಳು ವಿವಿಧ ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು, ನಟರೊಂದಿಗೆ ಸಹಕರಿಸುವಂತೆ ಮಾಡಿತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೇಗೆ ಕಲೆಕ್ಷನ್ ಮಾಡಿತು ಎಂಬುದುರ ಸೆಕೆಂಡರಿ ವಿಚಾರ, ಆದರೆ, ನನ್ನ ಚಿತ್ರಗಳು ನಿರ್ಮಾಪಕರನ್ನು ಸುರಕ್ಷಿತ ವಲಯದಲ್ಲಿ ಇಟ್ಟಿದ್ದರಿಂದ ನನ್ನ ಮೇಲೆ ಹೂಡಿಕೆ ಮಾಡಲು ನಿರ್ಮಾಪಕರು ಬಯಸುತ್ತಿರುವುದನ್ನು ತಿಳಿದು ಸಂತೋಷವಾಗುತ್ತದೆ ಎಂದರು.

<strong>ಶಿವರಾಜ್ ಕುಮಾರ್</strong>
ಶಿವರಾಜ್ ಕುಮಾರ್

"ಜೀವನವು ಅಮೂಲ್ಯವಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಒಂದು ಚಿತ್ರ 200 ದಿನಗಳನ್ನು ತೆಗೆದುಕೊಳ್ಳುವುದಾದರೆ, ಅದನ್ನು 3-4 ವರ್ಷಗಳ ನಡುವೆ ವಿತರಿಸಬಾರದು. ಆ ಚಿತ್ರ ಪೂರ್ಣಗೊಳ್ಳುವ ಹೊತ್ತಿಗೆ, ತಂಡ ಮತ್ತು ನಟನಿಗೆ ನಾಲ್ಕು ವರ್ಷ ಆಗುತ್ತದೆ ಅದನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.

ಆ ದಿನಗಳಲ್ಲಿ ನಿರ್ದೇಶಕ ಎಂಎಸ್ ರಾಜಶೇಖರ್ ಅವರೊಂದಿಗೆ  ಬ್ಯಾಕ್ ಟು ಬ್ಯಾಕ್  ಚಿತ್ರಗಳನ್ನು ಮಾಡುತ್ತಿದ್ದಂತೆ ಈಗ ಹರ್ಷರಂತಹ ನಿರ್ದೇಶಕರೊಂದಿಗೂ ಶಿವಣ್ಣ ಚಿತ್ರ ಮಾಡುತ್ತಿದ್ದಾರೆ. ಹರ್ಷ ಜೊತೆಗೆ ಇದು ಅವರ ನಾಲ್ಕನೇ ಚಿತ್ರವಾಗಿದೆ. ಹರ್ಷ ಪ್ರತಿಯೊಂದು ಚಿತ್ರದಲ್ಲೂ ಅಪಾರ ಕ್ರಿಯೇಟಿವಿಟಿ ತರುತ್ತಿದ್ದಾರೆ. ವೇದ ಕೂಡಾ ವಿಭಿನ್ನವಾಗಿದೆ. ಕಮರ್ಷಿಯಲ್,  ಸಸ್ಪೆನ್ಸ್ ಅಂಶ ಸೇರಿದಂತೆ ಎಲ್ಲವನ್ನು ಹದವಾಗಿ ಬೆರೆಸಿ ಉತ್ತಮ ಸಂದೇಶ ನೀಡಿರುವುದು ನನಗೆ ಇಷ್ಟವಾಯಿತು ಎಂದು ಶಿವಣ್ಣ ಹೇಳಿದರು. 

ಘೋಸ್ಟ್​’ಕರಟಕ ದಮನಕ'  ಸೇರಿದಂತೆ ಕನ್ನಡದ ಹಲವಾರು ಆಸಕ್ತಿದಾಯಕ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಶಿವಣ್ಣ, ಇತರ ಭಾಷೆಗಳ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ಹೆಸರನ್ನು ಬೇರೆ ಭಾಷೆಗಳಲ್ಲಿ ಗುರುತಿಸಲು ಪ್ರಯತ್ನಿಸುತ್ತಿಲ್ಲ.  ಹೊಸ ಪಾತ್ರಗಳು, ಚಿತ್ರಗಳನ್ನು ಕಂಡುಕೊಳ್ಳುತ್ತಿದ್ದೇನೆ. ಪ್ರಸಿದ್ಧಿಯಾಗಲು ಅಥವಾ ಇತರರೊಂದಿಗೆ ಸ್ಪರ್ಧಿಸಲು ಇತರ ಭಾಷೆಗಳಲ್ಲಿ ನಟಿಸುತ್ತಿಲ್ಲ ಎಂದರು.

ರಜನಿಕಾಂತ್ ಅವರೊಂದಿಗೆ ಜೈಲರ್ ಚಿತ್ರದಲ್ಲಿ ಸ್ಕ್ರೀನ್ ಶೇರಿಂಗ್ ನಿಂದ ವಿಭಿನ್ನ ಅನುಭವ ನೀಡಿತು. ಇನ್ನು ಕೆಲವೊಂದು ಭಾಗದ ಚಿತ್ರೀಕರಣವಿದೆ. ಧನುಷ್ ಬಗ್ಗೆ ಹೇಳುವುದಾದರೆ, ಅವರ ವೃತ್ತಿಜೀವನ ಪ್ರಾರಂಭಿಸಿದ ಸಮಯದಿಂದ ಅವರ ಕೆಲಸದ ಅಭಿಮಾನಿಯಾಗಿದ್ದೇನೆ ಮತ್ತು ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಪಾತ್ರ ಉತ್ತಮವಾಗಿತ್ತು. ಹಾಗಾಗೀ ಆ ಚಿತ್ರದಲ್ಲಿ ಅಭಿನಯಿಸಲು ಸಹಿ ಹಾಕಿದ್ದಾಗಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com