’ಕಾಳಿ’ ಮಾತೆ ಕೈಯಲ್ಲಿ ಸಿಗರೇಟು; ವಿವಾದಕ್ಕೀಡಾದ ನಿರ್ದೇಶಕಿ ಲೀನಾ, ಹಿಂದೂಪರ ಸಂಘಟನೆಗಳ ಆಕ್ರೋಶ

ಹಿಂದೂಗಳ ದೇವತೆ ಕಾಳಿಮಾತೆಯನ್ನು ವಿವಾದಾತ್ಮಕವಾಗಿ ಚಿತ್ರಿಸಿದ ಆರೋಪದ ಮೇರೆಗೆ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಕಾಳಿ ಸಾಕ್ಷ್ಯಚಿತ್ರದ ಪೋಸ್ಚರ್
ಕಾಳಿ ಸಾಕ್ಷ್ಯಚಿತ್ರದ ಪೋಸ್ಚರ್

ಚೆನ್ನೈ: ಹಿಂದೂಗಳ ದೇವತೆ ಕಾಳಿಮಾತೆಯನ್ನು ವಿವಾದಾತ್ಮಕವಾಗಿ ಚಿತ್ರಿಸಿದ ಆರೋಪದ ಮೇರೆಗೆ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ. 

ಹೌದು.. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ವಿರುದ್ಧ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನ ಲೀನಾ ಮಣಿಮೇಕಲೈ ಅವರು ‘ಕಾಳಿ‘ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದು, ಶನಿವಾರ ಅವರು ಈ ಸಾಕ್ಷ್ಯಚಿತ್ರದ ಪೋಸ್ಟರ್‌ ಅನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹಿಂದೂ ದೇವತೆ ಕಾಳಿ ಮಾತೆ ಸಿಗರೇಟ್ ಸೇದುತ್ತಿರುವುದು ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂb(LGBTQ) ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿದೆ. 

ಈ ಪೋಸ್ಟರ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಲೀನಾ ಮಣಿಮೇಕಲೈ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಟ್ವಿಟರ್‌ನಲ್ಲಿ ಅರೆಸ್ಟ್‌ ಲೀನಾ ಮಣಿಮೇಕಲೈ (#ArrestLeenaManimekalai) ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದ್ದು, ಸಾವಿರಾರು ಬಳಕೆದಾರರು ಲೀನಾ ಅವರನ್ನು ಬಂಧಿಸಬೇಕು ಎಂದು ಪ್ರಧಾನ ಮಂತ್ರಿ ಕಚೇರಿಗೆ ಮನವಿ ಮಾಡಿದ್ದಾರೆ. 

2021 ರಲ್ಲಿ, ಸೈಫ್ ಅಲಿ ಖಾನ್ ಅಭಿನಯದ ವೆಬ್ ಸರಣಿ 'ತಾಂಡವ್' ನಲ್ಲಿ ಹಿಂದೂ ದೇವರುಗಳನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಕಾರಣಕ್ಕಾಗಿ ಧಾರ್ಮಿಕ ಉದ್ವಿಗ್ನತೆಯ ಸಾಧ್ಯತೆಯನ್ನು ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com