ಬೆಲ್ ಬಾಟಂ ಚಿತ್ರದ ಕಥೆ ಬರೆದಿದ್ದ ಟಿ.ಕೆ.ದಯಾನಂದ ನಿರ್ದೇಶನದ 2ನೇ ಚಿತ್ರ 80ರ ದಶಕದ ನೈಜ ಮಾಫಿಯಾ ಕಥೆ

ದಯಾನಂದ್ ಈಗ ತಮ್ಮ ಎರಡನೇ ಚಿತ್ರದ ನಿರ್ದೇಶನದತ್ತ ಮರಳಲಿದ್ದಾರೆ. ನಿರ್ದೇಶಕರ ಮುಂದಿನ ಸಿನಿಮಾದಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರ ಇರುತ್ತದೆ ಮತ್ತು 1988 ರಲ್ಲಿ ಕೇರಳ ಮತ್ತು ಕರ್ನಾಟಕದ ಗಡಿಯ ನಡುವಿನ ಪಟ್ಟಣದಲ್ಲಿ ನಡೆದ ನೈಜ ಘಟನೆಯ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ.
ನಟ ವಸಿಷ್ಠ ಸಿಂಹ
ನಟ ವಸಿಷ್ಠ ಸಿಂಹ

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಬೆಂಕಿಪಟ್ಣ ಸಿನಿಮಾದ ನಿರ್ದೇಶಕ ಕೆ. ದಯಾನಂದ್ ಅವರು ಬೆಲ್ ಬಾಟಮ್ ಮತ್ತು ಆಕ್ಟ್ 1978 ಸಿನಿಮಾಗಳ ಕಥೆಗಾಗಿ ಖ್ಯಾತಿಯನ್ನು ಪಡೆದರು. ಇದೀಗ ಸತೀಶ್ ನೀನಾಸಂ ಅಭಿನಯದ ಇನ್ನೂ ಬಿಡುಗಡೆಯಾಗದ 'ಅಶೋಕ ಬ್ಲೇಡ್‌' ಮತ್ತು ಅಭಿಷೇಕ್ ಅಂಬರೀಶ್ ಅಭಿನಯದ ಹಾಗೂ ಮಹೇಶ್ ಕುಮಾರ್ ನಿರ್ದೇಶದನ ಇನ್ನೂ ಹೆಸರಿಡದ ಸಿನಿಮಾಗೆ ಚಿತ್ರಕಥೆಯನ್ನು ಸಹ ಬರೆಯುತ್ತಿದ್ದಾರೆ. ದಯಾನಂದ್ ಅವರು ಬೆಲ್ ಬಾಟಮ್ ಮತ್ತು ವೆಬ್ ಸರಣಿಗಳಿಗೆ ಕಥೆ ಬರೆದಿದ್ದಾರೆ.

ದಯಾನಂದ್ ಈಗ ತಮ್ಮ ಎರಡನೇ ಚಿತ್ರದ ನಿರ್ದೇಶನದತ್ತ ಮರಳಲಿದ್ದಾರೆ. ನಿರ್ದೇಶಕರ ಮುಂದಿನ ಸಿನಿಮಾದಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರ ಇರುತ್ತದೆ ಮತ್ತು 1988 ರಲ್ಲಿ ಕೇರಳ ಮತ್ತು ಕರ್ನಾಟಕದ ಗಡಿಯ ನಡುವಿನ ಪಟ್ಟಣದಲ್ಲಿ ನಡೆದ ನೈಜ ಘಟನೆಯ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ.

'ಇದೊಂದು ನಿಗೂಢ ಮಾಫಿಯಾ ಕಥೆ. ಈ ಬಗ್ಗೆ ಬೆಳ್ಳಿತೆರೆಯಲ್ಲಿ ಇದುವರೆಗೂ ಹೇಳಿಲ್ಲ' ಎಂದು ಸ್ಕ್ರಿಪ್ಟ್ ಪೂರ್ಣಗೊಳಿಸಿರುವ ದಯಾನಂದ್ ಹೇಳುತ್ತಾರೆ ಮತ್ತು ಚಿತ್ರಕ್ಕೆ ತಾರಾಗಣವನ್ನು ಅಂತಿಮಗೊಳಿಸುತ್ತಿದ್ದಾರೆ.

'ಈಗಾಗಲೇ ವಸಿಷ್ಠ ಸಿಂಹ ಅವರ ಹೆಸರು ಅಂತಿಮಗೊಂಡಿದ್ದು, ಶೀಘ್ರದಲ್ಲೇ ನಾನು ಧನಂಜಯ್ ಅವರನ್ನು ಸಂಪರ್ಕಿಸಲು ಯೋಜಿಸುತ್ತಿದ್ದೇನೆ. ಉಳಿದ ಪಾತ್ರವರ್ಗವನ್ನು ಅಂತಿಮಗೊಳಿಸಿದ ನಂತರ ಯೋಜನೆಯ ತಂತ್ರಜ್ಞರ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com