ಲೋಹಿತ್ ನಿರ್ದೇಶನದ ಮಾಫಿಯಾ 2023 ಜನವರಿಯಲ್ಲಿ ರಿಲೀಸ್!

ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ನಟನೆಯ 'ಮಾಫಿಯಾ' ಸಿನಿಮಾದ ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದು 2023ರ ಜನವರಿಯಲ್ಲಿ ರಿಲೀಸ್ ಆಗಲಿದೆ.
ಮಾಫಿಯಾ ಸಿನಿಮಾ ಸ್ಟಿಲ್
ಮಾಫಿಯಾ ಸಿನಿಮಾ ಸ್ಟಿಲ್

ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ನಟನೆಯ 'ಮಾಫಿಯಾ' ಸಿನಿಮಾದ ಕೊನೇ ಹಂತದ ಕೆಲಸಗಳು ನಡೆಯುತ್ತಿದ್ದು 2023ರ ಜನವರಿಯಲ್ಲಿ ರಿಲೀಸ್ ಆಗಲಿದೆ.

ಈಗಾಗಲೇ ಒಂದಷ್ಟು ಪೋಸ್ಟರ್‌ಗಳಿಂದ ಗಮನಸೆಳೆದಿರುವ ಈ ಸಿನಿಮಾ ಈಗ ಮತ್ತೊಂದು ಹೊಸ ಪೋಸ್ಟರ್‌ ರಿಲೀಸ್ ಮಾಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಈ ವಿಭಿನ್ನ ಪೋಸ್ಟರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರವನ್ನು ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ನಿರ್ಮಿಸುತ್ತಿದ್ದಾರೆ. 'ಮಮ್ಮಿ', 'ದೇವಕಿ' ಸಿನಿಮಾಗಳ ಖ್ಯಾತಿಯ ಲೋಹಿತ್ ನಿರ್ದೇಶನ ಮಾಡುತ್ತಿದ್ದಾರೆ.  ಇದು ಪ್ರಜ್ವಲ್ ದೇವರಾಜ್ ಅಭಿನಯದ 35ನೇ ಚಿತ್ರ. ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್‌ನಲ್ಲಿ ಪ್ರಜ್ವಲ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಸಹ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್‌ ಜೊತೆಗೆ ಅವರ ತಂದೆ ದೇವರಾಜ್ ಕೂಡ ಬಣ್ಣ ಹಚ್ಚಿದ್ದಾರೆ.

ಬೆಂಗಳೂರು ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕುಮಾರ್ ಬಿ ನಿರ್ಮಿಸಿದ, ಮಾಫಿಯಾ 2023 ರಲ್ಲಿ ಬಿಡುಗಡೆಯಾಗುವ ಮೊದಲ ಚಲನಚಿತ್ರಗಳಲ್ಲಿ ಒಂದಾಗಲಿದೆ ಏಕೆಂದರೆ ತಯಾರಕರು ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದಾರೆ.

ಎಸ್. ಪಾಂಡಿಕುಮಾರ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್‌ಗೆ ಅದಿತಿ ಪ್ರಭುದೇವ ನಾಯಕಿ. ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com