ಸಮಂತಾ
ಸಮಂತಾ

'ಯಶೋದಾ' ಸಿನಿಮಾ ಯಶಸ್ಸು: ನಾನು ಕ್ಲೌಡ್ ನೈನ್‌ನಲ್ಲಿ ಇದ್ದೇನೆ ಎಂದ ನಟಿ ಸಮಂತಾ

ತಮ್ಮ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾದ 'ಯಶೋದಾ' ಸಿನಿಮಾದ ಯಶಸ್ಸಿನಲ್ಲಿ ಮುಳುಗಿರುವ ನಟಿ ಸಮಂತಾ ರುತ್ ಪ್ರಭು ಅವರು ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ತಮ್ಮ ಚಿತ್ರಕ್ಕೆ ಲಭ್ಯವಾಗುತ್ತಿರುವ ಪ್ರೀತಿಯಿಂದಾಗಿ ಕ್ಲೌಡ್‌ ನೈನ್‌ನಲ್ಲಿರುವುದಾಗಿ ಹೇಳಿದ್ದಾರೆ.
Published on

ಮುಂಬೈ: ತಮ್ಮ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾದ 'ಯಶೋದಾ' ಸಿನಿಮಾದ ಯಶಸ್ಸಿನಲ್ಲಿ ಮುಳುಗಿರುವ ನಟಿ ಸಮಂತಾ ರುತ್ ಪ್ರಭು ಅವರು ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ತಮ್ಮ ಚಿತ್ರಕ್ಕೆ ಲಭ್ಯವಾಗುತ್ತಿರುವ ಪ್ರೀತಿಯಿಂದಾಗಿ ಕ್ಲೌಡ್‌ ನೈನ್‌ನಲ್ಲಿರುವುದಾಗಿ (ಅತ್ಯಂತ ಸಂತೋಷದಿಂದಿರುವುದಾಗಿ) ಹೇಳಿದ್ದಾರೆ.

ಆ ಪ್ರೇಕ್ಷಕರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲು ಸಮಂತಾ ಟ್ವೀಟ್ ಮಾಡಿದ್ದಾರೆ.

'ಆತ್ಮೀಯ ಪ್ರೇಕ್ಷಕರೇ, ಯಶೋದಾ ಮೇಲಿನ ನಿಮ್ಮ ಮೆಚ್ಚುಗೆ ಮತ್ತು ಪ್ರೀತಿಯು ನನಗೆ ನಾನು ಕೇಳದೇ ಸಿಕ್ಕಿರುವ ದೊಡ್ಡ ಉಡುಗೊರೆ ಮತ್ತು ಬೆಂಬಲವಾಗಿದೆ. ನಾನು ಸಂತೋಷ ಮತ್ತು ಕೃತಜ್ಞತೆಯಲ್ಲಿ ಮುಳುಗಿದ್ದೇನೆ. ಇಡೀ ಯಶೋದಾ ಚಿತ್ರತಂಡ ಪಟ್ಟ ಶ್ರಮ ಸಾರ್ಥಕವಾಯಿತು ಎಂಬುದಕ್ಕೆ ನಿಮ್ಮ ಸಿಳ್ಳೆಗಳು ಮತ್ತು ಥಿಯೇಟರ್‌ಗಳಲ್ಲಿ ನಡೆದ ಸಂಭ್ರಮವನ್ನು ನೋಡುವುದೇ ಸಾಕ್ಷಿ!' ಎಂದು ಟ್ವೀಟ್ ಮಾಡಿದ್ದಾರೆ.

<strong>ಯಶೋದಾ ಸಿನಿಮಾದ ಪೋಸ್ಟರ್</strong>
ಯಶೋದಾ ಸಿನಿಮಾದ ಪೋಸ್ಟರ್

'ನಾನು ಕ್ಲೌಡ್ ನೈನ್‌ನಲ್ಲಿದ್ದೇನೆ. ಮತ್ತು ಯಶೋದಾ ಸಿನಿಮಾ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಲ್ಲರಿಗೂ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಈ ಸಿನಿಮಾದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿರ್ಮಾಪಕ ಕೃಷ್ಣ ಪ್ರಸಾದ್ ಗಾರು ಅವರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಬರೆದಿದ್ದಾರೆ.

ಚಿತ್ರದ ನಿರ್ದೇಶಕರು ಮತ್ತು ಸಹ-ನಟರಿಗೆ ಸಹ ಕೃತಜ್ಞತೆ ಸಲ್ಲಿಸಿರುವ ಸಮಂತಾ, 'ಮತ್ತು ನಾನು ನಿರ್ದೇಶಕರಾದ ಹರಿ ಮತ್ತು ಹರೀಶ್ ಅವರಿಗೆ ಕೃತಜ್ಞಳಾಗಿದ್ದೇನೆ. ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಸಂತೋಷವಾಗಿದೆ. ನನ್ನ ಪ್ರೀತಿಯ ಸಹ ನಟಿಯಾದ ವರಲಕ್ಷ್ಮಿ ಶರತ್‌ಕುಮಾರ್‌ಗೆ, ಉನ್ನಿ ಮುಕುಂದನ್‌ ಗಾರು ಸೇರಿದಂತೆ ಸಿನಿಮಾದ ಉಳಿದ ಎಲ್ಲಾ ಅದ್ಭುತ ಪಾತ್ರವರ್ಗಕ್ಕೆ ಧನ್ಯವಾದಗಳು. ನಿಮ್ಮೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವವಾಗಿದೆ. ನಾನೆಂದಿಗೂ ಕೃತಜ್ಞಳಾಗಿರುತ್ತೇನೆ. ಪ್ರೀತಿಯಿಂದ ಸಮಂತಾ' ಎಂದು ಅವರು ಹೇಳಿದ್ದಾರೆ.

'ಯಶೋದಾ' ನವೆಂಬರ್ 11 ರಂದು ಬಿಡುಗಡೆಯಾಯಿತು. ಸಿನಿಮಾದಲ್ಲಿ ಸಮಂತಾ ಅವರು ವೈದ್ಯಕೀಯ ಹಗರಣದಲ್ಲಿ ಸಂತ್ರಸ್ಥೆಯಾಗಿರುವ ಬಾಡಿಗೆ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com