ಪ್ರಿಯಾ ಸಿದ್ದು ಮೂಲಿಮನಿ ನಿಶ್ಚಿತಾರ್ಥ
ಪ್ರಿಯಾ ಸಿದ್ದು ಮೂಲಿಮನಿ ನಿಶ್ಚಿತಾರ್ಥ

ಗಟ್ಟಿಮೇಳ ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪಾರು ಧಾರಾವಾಹಿ ನಟ ಸಿದ್ಧು ಮೂಲಿಮನಿ

ಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
Published on

`ಪಾರು’ ಸೀರಿಯಲ್ ನಟ ಸಿದ್ದು ಜೊತೆ ಪ್ರಿಯಾ ಜೆ ಆಚಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಈ ಜೋಡಿ ಆ ನಂತರ `ಧಮಾಕ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಆ ನಂತರದಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ಪ್ರಿಯಾ ಹುಟ್ಟೂರಾದ ದಾವಣಗೆರೆಯಲ್ಲಿ ನಿಶ್ಚಿತಾರ್ಥ ನಡೆದಿದೆ

ಸಿದ್ದು ಮೂಲಿಮನಿ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಧಮಾಕ, ವಿಕ್ರಾಂತ್‌ರೋಣ, ರಂಗಿತರಂಗ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಿಯಾ `ಗಟ್ಟಿಮೇಳ’ ಸೀರಿಯಲ್ ಜೊತೆ ಪರಭಾಷೆ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com