ನನ್ನಂತೆಯೇ ನನ್ನ ಸಿನಿಮಾಗಳು 'ಕ್ರೇಜಿ'; 'ರವಿ ಬೋಪಣ್ಣ'ದಲ್ಲಿ ನನ್ನ ಹಿರಿಯ ಮಗ ಸುದೀಪ್ ನಟಿಸಿರುವುದು ಸಂತಸದ ವಿಚಾರ: ರವಿಚಂದ್ರನ್

ರವಿ ಬೋಪಣ್ಣ ಸಿನಿಮಾ ನಿರ್ದೇಶನದ ಮೂಲಕ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಡೈರೆಕ್ಷನ್ ಗೆ ಮರಳಿದ್ದಾರೆ. ತಮ್ಮ ಹೋಮ್ ಬ್ಯಾನರ್ ಅಡಿ ಈ ಸಿನಿಮಾವನ್ನು ಪ್ರೊಡಕ್ಷನ್ ಮಾಡುತ್ತಿದ್ದಾರೆ. 
ರವಿ ಬೋಪಣ್ಣ ಸ್ಟಿಲ್
ರವಿ ಬೋಪಣ್ಣ ಸ್ಟಿಲ್

ರವಿ ಬೋಪಣ್ಣ ಸಿನಿಮಾ ನಿರ್ದೇಶನದ ಮೂಲಕ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಡೈರೆಕ್ಷನ್ ಗೆ ಮರಳಿದ್ದಾರೆ.  ತಮ್ಮ ಹೋಮ್ ಬ್ಯಾನರ್ ಅಡಿ ಈ ಸಿನಿಮಾವನ್ನು ಪ್ರೊಡಕ್ಷನ್ ಮಾಡುತ್ತಿದ್ದಾರೆ. ರವಿಚಂದ್ರನ್ ಅವರ ತಂದೆ ಎನ್ ವೀರಾಸ್ವಾಮಿ ಅವರು ಆರಂಭಿಸಿದ ಈಶ್ವರಿ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಗೆ 50 ವರ್ಷ ತುಂಬಿದ ಸಂಭ್ರಮ ಕೂಡ ಮನೆ ಮಾಡಿದೆ.

ತಮ್ಮ ಹೋಮ್ ಬ್ಯಾನರ್ ಈಶ್ವರಿ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ ಸಿನಿಮಾ ಇದಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿದೆ. ರವಿ ಬೋಪಣ್ಣ ಮಲಯಾಳಂ ಚಿತ್ರ ಜೋಸೆಫ್(2018) ಸಿನಿಮಾ ರಿಮೇಕ್ ಆಗಿದೆ. ಮಲಯಾಳಂ ಸಿನಿಮಾದಲ್ಲಿ ಜೋಜು ಜಾರ್ಜ್ ನಟಿಸಿದ್ದು ಎಂ ಪದ್ಮಕುಮಾರ್ ನಿರ್ದೇಶನ ಮಾಡಿದ್ದಾರೆ.

ಒರಿಜಿನಲ್‌ ಸಿನಿಮಾದ ಆತ್ಮವನ್ನು ಮಾತ್ರ ತೆಗೆದುಕೊಂಡಿದ್ದೇನೆ, ಅದನ್ನು ಹೊಸ ರೀತಿಯಲ್ಲಿ ಸಂಪೂರ್ಣವಾಗಿ ಮರುನಿರ್ಮಾಣ ಮಾಡಿದ್ದೇನೆ, ಎಲ್ಲ ಕೆಲಸವನ್ನು ಪುನ ಮಾಡಲು ನನಗೆ 11 ತಿಂಗಳ ಸಮಯ ಬೇಕಾಯಿತು. ಪರಿಣಾಮವಾಗಿ, ರವಿ ಬೋಪಣ್ಣ ಸಂಪೂರ್ಣವಾಗಿ ಹೊಸ ಭಾವನೆಯೊಂದಿಗೆ ಉತ್ತಮವಾಗಿ ನಿರ್ಮಿಸಲಾದ ಚಿತ್ರವಾಗಿದೆ. ಪ್ರೇಕ್ಷಕರು ರಿಮೇಕ್ ಸಿನಿಮಾ ನೋಡುವ ಮನಸ್ಸನೊಂದಿಗೆ ಬರುವುದು ನನಗೆ ಇಷ್ಟವಿಲ್ಲ. ನನ್ನೊಂದಿಗೆ ಪ್ರಯಾಣಿಸಿ, ಹೊಸ ಅನುಭವ ಪಡೆಯುತ್ತೀರಿ' ಎಂದು ರವಿಚಂದ್ರನ್ ಭರವಸೆ ನೀಡಿದ್ದಾರೆ.

ಕ್ರೇಜಿಸ್ಟಾರ್ ಇಮೇಜ್ ಹೊಂದಿರುವ ರವಿಚಂದ್ರನ್ ಅವರ ಸಿನಿಮಾದಲ್ಲಿ ಕ್ರೇಜಿನೆಸ್ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ. ನಿಮ್ಮೆಲ್ಲರ ಕಾರಣದಿಂದ ನಾನು ಕ್ರೇಜಿಯಾಗಿದ್ದೇನೆ, ನನ್ನ ಸಿನಿಮಾಗಳು ಕೂಡ ಹಾಗೆಯೇ ಇರುತ್ತವೆ, ನನ್ನ ಕೆಲಸದಲ್ಲಿ ನಾನು ಇನ್ನೂ ತೃಪ್ತನಾಗಿಲ್ಲ. ನನ್ನ ಪ್ರಯೋಗ ಸತತವಾಗಿ ಮುಂದುವರಿಯುತ್ತಲೇ ಇರುತ್ತದೆ. 60 ನೇ ವರ್ಷಕ್ಕೆ ಕಾಲಿಡುವುದು ಹೊಸ ಆರಂಭ ಎಂದು ನಾನು ಭಾವಿಸುತ್ತೇನೆ, ಇದೂ ಕೂಡ ನನಗೆ ಒಂದು ಕಲಿಕೆಯಾಗಿದೆ ಎಂದು ರವಿಚಂದ್ರನ್ ಹೇಳಿದ್ದಾರೆ.

ಹಾಗೆಂದ ಮಾತ್ರಕ್ಕೆ ನಾನು ಮಾಡಿದ ಕೆಲಸ ಕೆಟ್ಟದಾಗಿದೆ ಎಂದು  ಅರ್ಥವಲ್ಲ, ಆದರೆ ನಾನು ಯಾವಾಗಲೂ ಏನನ್ನಾದರೂ ಉತ್ತಮವಾಗಿ ಮಾಡಲು ನೋಡುತ್ತೇನೆ. ನಾನು ಜನರಿಗಾಗಿ ಸಿನಿಮಾ ಮಾಡುತ್ತೇನೆ, ಅವರಿಗೆ ಗರಿಷ್ಠ ಮನರಂಜನೆ ನೀಡಲು ಪ್ರಯತ್ನಿಸುತ್ತೇನೆ. ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಲು ಇಷ್ಟಪಡುವ ಚಿತ್ರ ನಿರ್ಮಾಪಕರಲ್ಲಿ ರವಿಚಂದ್ರನ್ ಒಬ್ಬರು.

ಯಾರನ್ನೂ ನಂಬದ ಕಾರಣ ಅಥವಾ ಸ್ವತಂತ್ರವಾಗಿ ಕೆಲಸ ಮಾಡುವ ಆಸಕ್ತಿಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ರವಿ, "ಜನರು ನನ್ನೊಂದಿಗೆ ಸೇರಲು ನಾನು ಇಷ್ಟಪಡುತ್ತೇನೆ, ನಿರ್ದೇಶನ ಮತ್ತು ನಟನೆಯನ್ನು ಹೊರತುಪಡಿಸಿ ಹೆಚ್ಚಿನ ಕೆಲಸವನ್ನು ನಾನು ಬಿಟ್ಟುಕೊಡುತ್ತೇನೆ. ಆದರೆ ನನಗೆ ಬೇಕಾದುದ್ದು ಸಿಗದಿದ್ದಾಗ, ನಾನು ಎಲ್ಲವನ್ನೂ ಏಕಾಂಗಿಯಾಗಿ ಪಡೆಯಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಚಲನಚಿತ್ರ ನಿರ್ಮಾಣವು 9 ರಿಂದ 5 ಕೆಲಸವಲ್ಲ. ಕಳೆದ ನಾಲ್ಕು ತಿಂಗಳುಗಳಲ್ಲಿ, ನಾನು ಈ ಚಿತ್ರದಲ್ಲಿ ಕೆಲಸ ಮಾಡಲು ಮಧ್ಯರಾತ್ರಿಯಲ್ಲಿಯೂ ಕೆಲಸ ಮಾಡಿದ್ದೇನೆ, ರವಿಚಂದ್ರನ್ ಪ್ರಕಾರ, ರವಿ ಬೋಪಣ್ಣ ಕಾಕ್‌ಟೈಲ್‌ನಂತಿದ್ದು ಅದರಲ್ಲಿ ಸಾಕಷ್ಟು ಭಾವನೆಗಳಿವೆ. ಸಿನಿಮಾದಲ್ಲಿ ಅವರು ಮೂರು ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರದಿಂದ ನಿರ್ಗಮಿಸಿದ ನಂತರವೂ ನನ್ನ ಪಾತ್ರ ಕಾಡುತ್ತದೆ. ರವಿ ಬೋಪಣ್ಣ ಅವರು ಖಂಡಿತವಾಗಿಯೂ ತಮ್ಮ ವೃತ್ತಿಜೀವನದಲ್ಲಿ ಪುನರುಜ್ಜೀವನಗೊಳಿಸುತ್ತದೆ ಎಂದು ರವಿಚಂದ್ರನ್ ನಂಬುತ್ತಾರೆ.

ರಾಧಿಕಾ ಕುಮಾರಸ್ವಾಮಿ ಮತ್ತು ಕಾವ್ಯಾ ಶೆಟ್ಟಿ ನಟಿಸಿದ್ದಾರೆ. ನಟ ಸುದೀಪ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಹಿರಿಯ ಮಗ ಸುದೀಪ್ ಈ ಸಿನಿಮಾದಲ್ಲಿ ನಟಿಸಿರುವುದು ನನಗೆ ಸಂತಸ ತಂದಿದೆ ಎಂದು ರವಿಚಂದ್ರನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com