ಸ್ಯಾಂಡಲ್‌ವುಡ್‌ಗೆ ನನ್ನ ಚೊಚ್ಚಲ ಪ್ರವೇಶ ಅರ್ಥಪೂರ್ಣವಾಗಿರಬೇಕೆಂದು ಬಯಸಿದ್ದೆ: ಸಾಗರ್ ಪುರಾಣಿಕ್

ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಜೊತೆಗೂಡಿ ನಿರ್ಮಾಣ ಮಾಡಿರುವ ಈ ಚಿತ್ರವು ರಾಜ್ಯದಾದ್ಯಂತ ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ.
ಸಾಗರ್ ಪುರಾಣಿಕ್
ಸಾಗರ್ ಪುರಾಣಿಕ್

ನಟ ಸಾಗರ್ ಪುರಾಣಿಕ್ ಅವರು ಪ್ರಶಸ್ತಿ ವಿಜೇತ ಚಿತ್ರಗಳನ್ನು ಮಾಡುವ ಒಲವು ಹೊಂದಿದ್ದಾರೆ. ಅವರ ಮೊದಲ ಕಿರುಚಿತ್ರ 'ಮಹಾನ್ ಹುತಾತ್ಮ' ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಅಷ್ಟೇ ಅಲ್ಲದೆ, ಸಾಮಾನ್ಯ ಪ್ರೇಕ್ಷಕರು ಕೂಡ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು. ಅವರ ಚೊಚ್ಚಲ ಚಲನಚಿತ್ರವಾದ ಡೊಳ್ಳು ಸಿನಿಮಾ ಕೂಡ ಇತ್ತೀಚೆಗೆ 'ಅತ್ಯುತ್ತಮ ಕನ್ನಡ ಚಲನಚಿತ್ರ' ಮತ್ತು 'ಅತ್ಯುತ್ತಮ ಆಡಿಯೋಗ್ರಫಿಯಲ್ಲಿ ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್' ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದೆ.

ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಜೊತೆಗೂಡಿ ನಿರ್ಮಾಣ ಮಾಡಿರುವ ಈ ಚಿತ್ರವು ರಾಜ್ಯದಾದ್ಯಂತ ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ.

'ನನ್ನ ಕಿರುಚಿತ್ರವು ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಸಂಪೂರ್ಣವಾಗಿ ಯಾವುದೋ ಹಬ್ಬ ಅಥವಾ ಪ್ರಶಸ್ತಿಗಳಿಗಾಗಿ ಮತ್ತೊಂದು ಚಲನಚಿತ್ರವನ್ನು ಮಾಡುವ ಉದ್ದೇಶ ನನಗೆ ಇರಲಿಲ್ಲ. ನಾನು ಹಿಂತಿರುಗಿ ನೋಡಿದರೆ ಯಾವುದೇ ಪಶ್ಚಾತಾಪ ಪಡದಂತಿರಲು ಅರ್ಥಪೂರ್ಣವಾದ ಏನನ್ನಾದರೂ ಮಾಡಬೇಕು ಎನ್ನುವ ಉದ್ದೇಶ ಮಾತ್ರ ನನ್ನದಾಗಿತ್ತು. ಸ್ಯಾಂಡಲ್‌ವುಡ್‌ಗೆ ನನ್ನ ಚೊಚ್ಚಲ ಪ್ರವೇಶ ಅರ್ಥಪೂರ್ಣವಾಗಿರಬೇಕು ಎಂದು ನಾನು ಬಯಸುತ್ತೇನೆ' ಎನ್ನುತ್ತಾರೆ ಸಾಗರ್.

<strong>ಡೊಳ್ಳು ಚಿತ್ರದಲ್ಲಿ ಕಾರ್ತಿಕ್ ಮಹೇಶ್</strong>
ಡೊಳ್ಳು ಚಿತ್ರದಲ್ಲಿ ಕಾರ್ತಿಕ್ ಮಹೇಶ್

ಸೂಕ್ಷ್ಮತೆಗಳು ಮತ್ತು ನನ್ನ ನಿರೂಪಣಾ ಶೈಲಿ ಬಹಳ ಸಾರ್ವತ್ರಿಕವಾಗಿವೆ. ನಟನೆಯು ಬರವಣಿಗೆ, ಫ್ರೇಮ್ಸ್ ಇತ್ಯಾದಿಯನ್ನು ಒಳಗೊಂಡಿರುತ್ತದೆ. ಬಹುಶಃ ಇದು ತೀರ್ಪುಗಾರರು ಮತ್ತು ಚಲನಚಿತ್ರ ವಿಮರ್ಶಕರಿಗೆ ಹತ್ತಿರವಾಗುತ್ತದೆ ಎನ್ನಿಸುತ್ತದೆ. ಹೀಗಾಗಿ ಡೊಳ್ಳು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಲು ಅಗತ್ಯವಿರುವ ಎಲ್ಲಾ ವಸ್ತುಗಳನ್ನು ತನ್ನಲ್ಲಿ ಒಳಗೊಂಡಿದೆ. ಅದೇ ರೀತಿ, ಚಲನಚಿತ್ರ ವಿಮರ್ಶಕರು, ತೀರ್ಪುಗಾರರು ಮತ್ತು ಚಲನಚಿತ್ರ ಪ್ರೇಮಿಗಳು ಡೊಳ್ಳುವನ್ನು ಆನಂದಿಸಿದಂತೆಯೇ ಸಾಮಾನ್ಯ ಪ್ರೇಕ್ಷಕರು ಕೂಡ ಡೊಳ್ಳು ಸಿನಿಮಾವನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ.

'ಡೊಳ್ಳು ಮೇಲೆ ಚಿತ್ರ ಮಾಡಬೇಕೆಂದು ನನಗೆ ತಿಳಿದ ಕ್ಷಣವೆಂದರೆ ನಾನೊಂದು ಸಮಾರಂಭದಲ್ಲಿದ್ದಾಗ ಕಲಾವಿದರು ಡೋಲು ಬಾರಿಸಲು ಪ್ರಾರಂಭಿಸಿದರು. ನಾನು ತುಂಬಾ ಮಂತ್ರಮುಗ್ಧನಾಗಿದ್ದೆ! ಆಗ ಈ ಥೀಮ್ ಅನ್ನು ಉತ್ತಮ ಚಲನಚಿತ್ರ ಮಾಡಬಹುದು ಎನಿಸಿತು. ಅದನ್ನೇ ನಾವು ಡೊಳ್ಳು ಸಿನಿಮಾ ಮಾಡಿದ್ದೇವೆ. ನಗರೀಕರಣ ಮತ್ತು ಸೈದ್ಧಾಂತಿಕ ಘರ್ಷಣೆಗಳನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಳ್ಳುವ ಮೂಲಕ ನಾನು ಈ ಚಿತ್ರಕ್ಕೆ ಹೆಚ್ಚಿನ ಪದರಗಳನ್ನು ಸೇರಿಸಿದ್ದೇನೆ' ಎಂದು ಅವರು ಸೇರಿಸಿದರು.

ಈ ಚಿತ್ರದ ಮೂಲಕ ನಿರ್ದೇಶಕ ಪವನ್ ಒಡೆಯರ್ ಮೊದಲ ಬಾರಿಗೆ ನಿರ್ಮಾಪಕರಾಗಿ ಹೊರಹೊಮ್ಮಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ಬಾಬು ಹಿರಣ್ಣಯ್ಯ ಮತ್ತು ಚಂದ್ರ ಮಯೂರ್ ನಟಿಸಿದ್ದಾರೆ.

'ಪವನ್ ಸರ್ ನನ್ನ ಕಿರುಚಿತ್ರವನ್ನು ನೋಡಿದ್ದರು ಮತ್ತು ಅದನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದರು. ಅವರು ನನಗೆ ಈ ಅವಕಾಶವನ್ನು ನೀಡಲು ಇದು ಕೂಡ ಪ್ರಮುಖ ಅಂಶವಾಗಿದೆ. ಅವರ ಮೊದಲ ನಿರ್ಮಾಣದ ಸಾಹಸದಲ್ಲಿ ಚಿತ್ರವನ್ನು ನಿರ್ದೇಶಿಸುವ ಅವಕಾಶವನ್ನು ಅವರು ನನಗೆ ನೀಡಿದಾಗ ಅವರ ಬಗ್ಗೆ ನನ್ನ ಗೌರವ ಮತ್ತು ಕೃತಜ್ಞತೆಯು ಹತ್ತು ಪಟ್ಟು ಹೆಚ್ಚಾಯಿತು. ಅವರು ನನಗೆ ಈ ಚಿತ್ರ ಮಾಡಲು ಹೆಚ್ಚಿನ ಸ್ವಾತಂತ್ರ್ಯ ನೀಡಿದರು ಮತ್ತು ಈ ಚಿತ್ರಕ್ಕೆ ಬೇಕಾದುದನ್ನು ನೀಡುವ ಮೂಲಕ ನನ್ನನ್ನು ಬೆಂಬಲಿಸಿದರು' ಸಾಗರ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com