ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ನಟ ರಿಷಬ್ ಶೆಟ್ಟಿ ಔಟ್!, ದಿಗಂತ್ ಹೇಳಿದ್ದೇನು?
ನಟ ರಕ್ಷಿತ್ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋಸ್‌ನಡಿ ನಿರ್ಮಾಪಕರಾಗಿ ಸಾಲು ಸಾಲು ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಘೋಷಿಸಿದ್ದ ಪರಂವಃ ಸ್ಟುಡಿಯೋಸ್‌ನಿಂದ ಹೊಸದೊಂದು ವಿಚಾರ ಕೇಳಿಬರುತ್ತಿದ್ದು, ಕಾಂತಾರ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಅವರು ಸ್ವತಃ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
Published: 20th December 2022 12:39 PM | Last Updated: 20th December 2022 12:39 PM | A+A A-

ರಿಷಬ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋಸ್‌ನಡಿ ನಿರ್ಮಾಪಕರಾಗಿ ಸಾಲು ಸಾಲು ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಘೋಷಿಸಿದ್ದ ಪರಂವಃ ಸ್ಟುಡಿಯೋಸ್‌ನಿಂದ ಹೊಸದೊಂದು ವಿಚಾರ ಕೇಳಿಬರುತ್ತಿದ್ದು, ಕಾಂತಾರ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಅವರು ಸ್ವತಃ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ನಟ ದಿಗಂತ್ ಅವರು ಮಾಧ್ಯಮ ಸಂವಾದದಲ್ಲಿ ರಿಷಬ್ ಶೆಟ್ಟಿ ಅವರು ಈ ಪ್ರಾಜೆಕ್ಟ್‌ನಿಂದ ನಿರ್ಗಮಿಸಿರುವುದನ್ನು ಬಹಿರಂಗಪಡಿಸಿದ್ದು, ಚಿತ್ರತಂಡವು ರಿಷಬ್ ಅವರ ಪಾತ್ರಕ್ಕೆ ಮತ್ತೋರ್ವ ನಟನನ್ನು ಹುಡುಕುತ್ತಿದೆ ಎಂದಿದ್ದಾರೆ. ಆದರೆ, ಈ ಬೆಳವಣಿಗೆಯ ಬಗ್ಗೆ ಪ್ರೊಡಕ್ಷನ್ ಹೌಸ್, ನಿರ್ದೇಶಕ ಅಥವಾ ನಟ ಸ್ವತಃ ಏನನ್ನೂ ಬಹಿರಂಗಪಡಿಸಿಲ್ಲ.
ಆದಾಗ್ಯೂ, ಈ ಕಾಮಿಡಿ ಎಂಟರ್‌ಟೈನರ್‌ನಲ್ಲಿ ರಿಷಬ್ ಶೆಟ್ಟಿ ಬದಲಿಗೆ ನಟ ಯೋಗೇಶ್ ಅಲಿಯಾಸ್ ಲೂಸ್ ಮಾದ ಯೋಗಿ ಇರಲಿದ್ದಾರೆ ಎಂದು ತಿಳಿದು ಬಂದಿದೆ. ಸಿನಿಮಾದಲ್ಲಿ, ದಿಗಂತ್ ಜೊತೆಗೆ ಅಚ್ಯುತ್ ಕುಮಾರ್ ಸಹ ನಾಯಕರಾಗಿ ನಟಿಸಿದ್ದಾರೆ. ಯೋಗಿ ಅವರು ಕೊನೆಯದಾಗಿ ಡಾಲಿ ಧನಂಜಯ್ ಅಭಿನಯದ ಹೆಡ್‌ಬುಷ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅಭಿಜಿತ್ ಅವರ ನಿರ್ದೇಶನದಲ್ಲಿ ಪ್ರಮುಖ ತಾರಾಗಣದೊಂದಿಗೆ ಸಿನಿಮಾ ಸೆಟ್ಟೇರಿರುವುದರಿಂದ, ಈ ಬೆಳವಣಿಗೆಯ ಬಗ್ಗೆ ಪ್ರೊಡಕ್ಷನ್ ಹೌಸ್‌ನಿಂದ ಅಧಿಕೃತ ದೃಢೀಕರಣವನ್ನು ಶೀಘ್ರದಲ್ಲೇ ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಅಭಿಜಿತ್ ಮಹೇಶ್ ಚೊಚ್ಚಲ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ'ಗೆ ರಕ್ಷಿತ್ ಶೆಟ್ಟಿ ಪ್ರೊಡ್ಯೂಸರ್
ಜಿ.ಎಸ್. ಗುಪ್ತಾ ಅವರೊಂದಿಗೆ ಚಿತ್ರವನ್ನು ನಿರ್ಮಿಸುತ್ತಿರುವ ನಟ ರಕ್ಷಿತ್ ಶೆಟ್ಟಿ, ಈ ಸಿನಿಮಾವು ಮದುವೆಗಳು ಮತ್ತು ಲವ್ ಲೈಫ್ ಅನ್ನು ಸ್ಟೈಲಿಶ್ ಮತ್ತು ವಿಡಂಬನಾತ್ಮಕವಾಗಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಬ್ಯಾಚುಲರ್ ಪಾರ್ಟಿಗೆ ಅರ್ಜುನ್ ರಾಮು ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಬ್ಯಾಚುಲರ್ ಪಾರ್ಟಿಯ ಇತರೆ ಪಾತ್ರಗಳಲ್ಲಿ ಪವನ್ ಕುಮಾರ್, ಸೌಮ್ಯ ಜಗನ್ಮೂರ್ತಿ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್, ರಘು ರಾಮನಕೊಪ್ಪ, ಶೋಭರಾಜ್ ಮತ್ತು ಗುರುಪ್ರಸಾದ್ ಇದ್ದಾರೆ.