ಫೀಲ್ ಗುಡ್ ಎನಿಸುವ ಚಿತ್ರಗಳನ್ನು ಆಯ್ಕೆ ಮಾಡಲು ಮುಂದಾಗುತ್ತೇನೆ: ಡಾರ್ಲಿಂಗ್ ಕೃಷ್ಣ

ನನ್ನ ವೃತ್ತಿಜೀವನದುದ್ದಕ್ಕೂ, ಆಯ್ಕೆ ಮಾಡಿಕೊಂಡ ಸಿನಿಮಾಗಳೆಲ್ಲ ಪ್ರಣಯ ಮತ್ತು ಕೌಟುಂಬಿಕ ಮನರಂಜನೆಗಳಾಗಿವೆ. ಇದು ಸಂಪೂರ್ಣ ಪ್ರಜ್ಞಾಪೂರ್ವಕ ನಿರ್ಧಾರ ಎನ್ನುತ್ತಾರೆ ನಟ ಡಾರ್ಲಿಂಗ್ ಕೃಷ್ಣ.
ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ

ನನ್ನ ವೃತ್ತಿಜೀವನದುದ್ದಕ್ಕೂ, ಆಯ್ಕೆ ಮಾಡಿಕೊಂಡ ಸಿನಿಮಾಗಳೆಲ್ಲ ಪ್ರಣಯ ಮತ್ತು ಕೌಟುಂಬಿಕ ಮನರಂಜನೆಗಳಾಗಿವೆ. ಇದು ಸಂಪೂರ್ಣ ಪ್ರಜ್ಞಾಪೂರ್ವಕ ನಿರ್ಧಾರ ಎನ್ನುತ್ತಾರೆ ನಟ ಡಾರ್ಲಿಂಗ್ ಕೃಷ್ಣ.

'ಇಂದು, ಪ್ರತಿಯೊಂದು ಭಾಷೆಯ ಹೆಚ್ಚಿನ ಚಲನಚಿತ್ರಗಳು ಅಥವಾ OTT ಯಲ್ಲಿ ಬರುವ ಸಿನಿಮಾಗಳು ಎಲ್ಲವೂ ಹೆಚ್ಚಾಗಿ ಆ್ಯಕ್ಷನ್ ಮತ್ತು ಥ್ರಿಲ್ಲರ್‌ಗಳಾಗಿವೆ. ಹೀಗಾಗಿಯೇ ನಾನು, ಉತ್ತಮ ಭಾವನೆಯನ್ನು ಮೂಡಿಸುವ ಚಿತ್ರಗಳನ್ನೇ ಆಯ್ಕೆಮಾಡಿಕೊಳ್ಳುತ್ತೇನೆ. ನಿರ್ದಿಷ್ಟವಾಗಿ ಕೌಟುಂಬಿಕ ಚಿತ್ರಕಥೆಗಳು. ನನ್ನ ಚೊಚ್ಚಲ ನಿರ್ದೇಶನದ ಲವ್ ಮಾಕ್‌ಟೇಲ್ ನಂತರ ಇದು ನನ್ನ ಮನಸ್ಸನ್ನು ತಟ್ಟಿತು. ಜನರು ಸಿನಿಮಾಗಳೊಂದಿಗೆ ಸಂಪರ್ಕ ಸಾಧಿಸುವುದು ಇಂತಹ ಸರಳ ಕಥೆಗಳು ಮತ್ತು ಪಾತ್ರಗಳು ಎಂದು ನಾನು ಭಾವಿಸಿದೆ. ಅದೃಷ್ಟವಶಾತ್, ನನ್ನ ಬಳಿ ಅಂತಹ ಬೆರಳೆಣಿಕೆಯಷ್ಟು ನಿರ್ದೇಶಕರು ಇದ್ದಾರೆ. ಅವರು ಉತ್ತಮ ರೋಮ್ಯಾಂಟಿಕ್ ಮತ್ತು ಕೌಟುಂಬಿಕ ಕಥೆಗಳೊಂದಿಗೆ ನನ್ನ ಬಳಿಗೆ ಬರುತ್ತಾರೆ. ಅಂತಹ ಒಂದು ಚಿತ್ರವೇ ದಿಲ್‌ಪಸಂದ್' ಎನ್ನುತ್ತಾರೆ ಕೃಷ್ಣ.

ಈ ವಾರ ಬಿಡುಗಡೆಯಾಗಲಿರುವ ದಿಲ್‌ಪಸಂದ್, ಭಾರವಾದ ಭಾವನೆಗಳ ಮೇಲೆ ಮನರಂಜನೆ ಎಂದು ಬಿಂಬಿಸಲಾಗಿದೆ. ಕೃಷ್ಣ ಅಂತರ್ಮುಖಿಯಾದ ಸಂತು ಪಾತ್ರವನ್ನು ನಿರ್ವಹಿಸುತ್ತಿದ್ದು, ಆತ ಹೆಚ್ಚಾಗಿ ಏನನ್ನೂ ವ್ಯಕ್ತಪಡಿಸುವುದಿಲ್ಲ ಮತ್ತು ತನ್ನ ಬಗ್ಗೆ ಕೀಳರಿಮೆ ಹೊಂದಿರುತ್ತಾನೆ. 'ನಾನು ಕಟ್ಟುನಿಟ್ಟಾದ ವಾತಾವರಣದಲ್ಲಿ ಬೆಳೆದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದೇನೆ ಮತ್ತು ನಿರ್ದಿಷ್ಟ ಸನ್ನಿವೇಶವು ಆತನ ಜೀವನಶೈಲಿಯನ್ನು ಬೇರೆಡೆಗೆ ತಿರುಗಿಸುತ್ತದೆ. ಈ ನಡವಳಿಕೆಗೆ ಸಮಾಜವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ದಿಲ್‌ಪಸಂದ್ ಚಿತ್ರದಲ್ಲಿ ತೋರಿಸಲಾಗಿದೆ' ಎಂದು ಹೇಳುತ್ತಾರೆ.

ನನ್ನ ಚಿತ್ರಗಳಲ್ಲಿ ಸಾಮಾನ್ಯವಾಗಿ ವಿಲನ್ ಇರುವುದಿಲ್ಲ ಎನ್ನುವ ಕೃಷ್ಣ, 'ವಿಲನ್‌ಗಳು ಸಾಮಾನ್ಯವಾಗಿ ನಾಯಕನ ಮುಖಾಮುಖಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ರಕ್ತಪಾತ ಮತ್ತು ಅಪರಾಧಗಳು ಇರುತ್ತವೆ. ಇದು ವಿರೋಧಿಯನ್ನು ಚಿತ್ರಿಸುವ ಪರಿಯಾಗಿದೆ. ಆದರೆ, ನನ್ನ ಸಿನಿಮಾಗಳಲ್ಲಿ ಪ್ರತಿ ಪಾತ್ರದಲ್ಲೂ ನೆಗೆಟಿವ್‌ ಮತ್ತು ಪಾಸಿಟಿವ್‌ ಇವೆರಡೂ ಇರುತ್ತವೆ ಮತ್ತು ಸನ್ನಿವೇಶಗಳೇ ಒಬ್ಬರನ್ನು ಹೀರೋ ಅಥವಾ ವಿಲನ್‌ ಆಗಿ ಮಾಡುತ್ತವೆ. ಸಾಮಾನ್ಯವಾಗಿ, ನನ್ನ ಸಿನಿಮಾಗಳಲ್ಲಿ ನಾನು ಹಲವಾರು ಚಲನಚಿತ್ರ ಸ್ಟೀರಿಯೊಟೈಪ್‌ಗಳನ್ನು ಇಷ್ಟಪಡುವುದಿಲ್ಲ. ಬದಲಿಗೆ ನನಗೆ ಮನರಂಜನೆ ನೀಡುವ ಅಥವಾ ಭಾವನಾತ್ಮಕವಾಗಿ ಹತ್ತಿರವಾಗಿಸುವ ಚಿತ್ರಗಳು ಬೇಕು ಮತ್ತು ಅದು ಯಾವಾಗಲೂ ನನ್ನ ಚಲನಚಿತ್ರಗಳ ವಿಷಯವಾಗಿರುತ್ತದೆ ಎಂದು ತಿಳಿಸಿದರು.

ಬ್ಯಾಚುಲರ್ ಕಮರ್ಷಿಯಲ್ ಸಿನಿಮಾವನ್ನು ಹೊರತುಪಡಿಸಿ, ಷುಗರ್ ಫ್ಯಾಕ್ಟರಿ, ಲವ್ ಬರ್ಡ್ಸ್, ಲವ್ ಮಿ ಅಥವಾ ಹೇಟ್ ಮಿ ಮತ್ತು ಕೌಸಲ್ಯ ಸುಪ್ರಜಾ ರಾಮ ಸೇರಿದಂತೆ ನನ್ನ ಇತರ ಚಿತ್ರಗಳು ಹೆಚ್ಚಾಗಿ ರೋಮ್ಯಾಂಟಿಕ್ ಮತ್ತು ಕೌಟುಂಬಿಕ ಆಧರಿತ ಚಿತ್ರಕಥೆಗಳಾಗಿವೆ. ನೀವು ಗಮನಿಸಿದರೆ, ನಾನು ನಟಿಸಿರುವ ಚಲನಚಿತ್ರಗಳು ಹೆಚ್ಚಾಗಿ ಪತಿ-ಪತ್ನಿಯ ಸಂಬಂಧಗಳೊಂದಿಗೆ ವ್ಯವಹರಿಸುತ್ತವೆ. ಇದು ಯಾವಾಗಲೂ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ' ಎನ್ನುತ್ತಾರೆ.

ದಿಲ್ ಪಸಂದ್ ಚಿತ್ರದಲ್ಲಿ ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಮತ್ತು ನಿಶ್ವಿಕಾ ನಾಯ್ಡು ಸಹ ನಟಿಸಿದ್ದಾರೆ. ದಿಲ್‌ ಪಸಂದ್ ನಿರ್ದೇಶಕ ಶಿವ ತೇಜಸ್ ಅವರೊಂದಿಗೆ ಕೃಷ್ಣ ಅವರ ಮೊದಲ ಸಿನಿಮಾವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com