'ಕಬ್ಜ' ಸಿನಿಮಾವನ್ನು 'ಕೆಜಿಎಫ್' ಗೆ ಹೋಲಿಸುತ್ತಿರುವುದು ಒಳ್ಳೆಯ ಲಕ್ಷಣ: ನಿರ್ದೇಶಕ ಆರ್.ಚಂದ್ರು

ಸೆಪ್ಟೆಂಬರ್ 17 ರಂದು ಬಿಡುಗಡೆಯಾಗಿ 4 ದಿನದಲ್ಲಿ 26 ಮಿಲಿಯನ್ ವೀಕ್ಷಣೆ ದಾಟಿರುವ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ನಿಂದ ನಿರ್ದೇಶಕ ಆರ್ ಚಂದ್ರು ಮತ್ತು ಟೀಮ್ ಕಬ್ಜ ಸಂತಸದಲ್ಲಿ ಮುಳುಗಿದೆ.
ಕಬ್ಜ ಸಿನಿಮಾ ಸ್ಟಿಲ್
ಕಬ್ಜ ಸಿನಿಮಾ ಸ್ಟಿಲ್

ಸೆಪ್ಟೆಂಬರ್ 17 ರಂದು ಬಿಡುಗಡೆಯಾಗಿ 4 ದಿನದಲ್ಲಿ 26 ಮಿಲಿಯನ್ ವೀಕ್ಷಣೆ ದಾಟಿರುವ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ನಿಂದ ನಿರ್ದೇಶಕ ಆರ್ ಚಂದ್ರು ಮತ್ತು ಟೀಮ್ ಕಬ್ಜ ಸಂತಸದಲ್ಲಿ ಮುಳುಗಿದೆ.

ಒಳ್ಳೆಯ ವಿಷಯವು ನಮಗೆ ಉತ್ತಮ ಫಲಿತಾಂಶಗಳನ್ನು ತರಬಹುದು. ಕಬ್ಜ ಸಿನಿಮಾವನ್ನು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಮಾಡುವ ನಮ್ಮ ಗುರಿಯು ಮೊದಲ ಟೀಸರ್‌ನಲ್ಲಿ ಯಶಸ್ವಿಯಾಗಿದೆ. ಎಲ್ಲಾ ಭಾಷೆಗಳಿಂದಲೂ ಜನರು ಟೀಸರ್ ವೀಕ್ಷಿಸಿದ್ದಾರೆ. ನಾವು ಶೀಘ್ರದಲ್ಲೇ 30 ಮಿಲಿಯನ್ ವೀಕ್ಷಣೆಗಳನ್ನು ತಲುಪುತ್ತೇವೆ" ಎಂದು ನಿರ್ದೇಶಕ ಆರ್.ಚಂದರು ತಿಳಿಸಿದ್ದಾರೆ.

1500 ಕೋಟಿ ರು ಕಲೆಕ್ಷನ್ ಮಾಡಿರುವ ಕೆಜಿಎಫ್ ಜೊತೆ  ಕಬ್ಜ ಸಿನಿಮಾ ಹೋಲಿಕೆ ಮಾಡುತ್ತಿರುುದು ಸಂತಸದ ವಿಷಯವಾಗಿದೆ, ಹಾಗಾಗಿ ಕಬ್ಜ ಚಿತ್ರದಲ್ಲೂ ಅಷ್ಟೇ ನಿರೀಕ್ಷೆ ಇದೆ,'' ಎನ್ನುವ ಚಂದ್ರು, ''ಕಬ್ಜಾ ಹಾಲಿವುಡ್ ಗುಣಮಟ್ಟದಲ್ಲಿ ತಯಾರಾದ ಚಿತ್ರವಾಗಿದ್ದು, ತನ್ನದೇ ಆದ ಹೆಗ್ಗುರುತು ಸೃಷ್ಟಿಸಲಿದೆ, ಜನರಲ್ಲಿ ಪ್ರತ್ಯೇಕ ಬ್ರಾಂಡ್ ಸೃಷ್ಟಿಸಲಿದೆ ಎಂದು ಚಂದ್ರ ತಿಳಿಸಿದ್ದಾರೆ.

ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕಬ್ಜ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಕಬ್ಜದ ಮೇಲೆ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ನಿರ್ದೇಶಕರು ಇನ್ನೂ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿಲ್ಲ.

ಚಿತ್ರವು ಸಾಕಷ್ಟು ವಿಎಫ್‌ಎಕ್ಸ್ ಕೆಲಸಗಳನ್ನು ಹೊಂದಿದೆ ಮತ್ತು ಅದನ್ನು 7 ಭಾಷೆಗಳಲ್ಲಿ ಡಬ್ ಮಾಡಬೇಕಾಗಿದೆ. ಅವುಗಳನ್ನು ಪೂರ್ಣಗೊಳಿಸಿದ ನಂತರವೇ ನಾನು ಬಿಡುಗಡೆಯ ದಿನಾಂಕ ಫಿಕ್ಸ್ ಮಾಡಲಾಗುವುದು ಎಂದು ಚಂದ್ರು ತಿಳಿಸಿದ್ದಾರೆ. ನಟ ಉಪೇಂದ್ರ ಜೊತೆಗೆ ಮುಂದಿನ ಪ್ರಚಾರಕ್ಕಾಗಿ ದುಬೈಗೆ ಹೋಗುತ್ತಿರುವ ಚಂದ್ರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com