ಆಯ್ದ ಕಥೆಗಳಿರುವ ಪೆಂಟಗನ್ ಸಿನಿಮಾದಲ್ಲಿ ಸಂಗೀತ ಸಂಯೋಜನೆ ನನ್ನ ಮೊದಲ ಪ್ರಯತ್ನ: ಮಣಿಕಾಂತ್ ಕದ್ರಿ

ಆಯ್ದ ಕೆಲವು ಕಥೆಗಳನ್ನು ಸಿನಿಮಾವನ್ನಾಗಿ ಮಾಡುವುದು ಖಂಡಿತವಾಗಿಯೂ ಒಂದು ಸವಾಲು. ಅದರಂತೆ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮುಂಬರುವ ಪೆಂಟಗನ್‌ನೊಂದಿಗೆ ಸಂಗೀತ ಸಂಯೋಜನೆಗಿಳಿದಿರುವುದು ಅಂತಹ ಒಂದು ಸವಾಲಾಗಿದೆ. 
ಮಣಿಕಾಂತ್ ಕದ್ರಿ - ಪಂಟಗನ್ ಸಿನಿಮಾ ಪೋಸ್ಟರ್
ಮಣಿಕಾಂತ್ ಕದ್ರಿ - ಪಂಟಗನ್ ಸಿನಿಮಾ ಪೋಸ್ಟರ್

ಆಯ್ದ ಕೆಲವು ಕಥೆಗಳನ್ನು ಸಿನಿಮಾವನ್ನಾಗಿ ಮಾಡುವುದು ಖಂಡಿತವಾಗಿಯೂ ಒಂದು ಸವಾಲು. ಅದರಂತೆ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮುಂಬರುವ ಪೆಂಟಗನ್‌ನೊಂದಿಗೆ ಸಂಗೀತ ಸಂಯೋಜನೆಗಿಳಿದಿರುವುದು ಅಂತಹ ಒಂದು ಸವಾಲಾಗಿದೆ. ಇದನ್ನು ಕಲಿಕೆಯ ಅನುಭವ ಎಂದು ಕರೆದ ಮಣಿಕಾಂತ್ ಅವರು, ಎಲ್ಲಾ ಐದು ಕಥೆಗಳಿಗೆ ಥೀಮ್ ಆಧಾರಿತ ಹಾಡನ್ನು ರಚಿಸಿರುವುದಾಗಿ ಬಹಿರಂಗಪಡಿಸುತ್ತಾರೆ. 

ರಘು ಶಿವಮೊಗ್ಗ ಬರೆದು ಅನನ್ಯ ಭಟ್ ಹಾಡಿರುವ ಥೀಮ್ ಸಾಂಗ್ ಶನಿವಾರ ಬಿಡುಗಡೆಯಾಗಿದೆ. ಪೆಂಟಗನ್‌ನಲ್ಲಿನ ಕಥೆಗಳು ಸಾವನ್ನು ಒತ್ತಿಹೇಳುತ್ತವೆ. ಆದ್ದರಿಂದ ಮಧುರವು ಗಾಢವಾಗಿದೆ ಮತ್ತು ಚಿಂತನೆಗೆ ಪ್ರೇರೇಪಿಸುತ್ತದೆ ಎನ್ನುವ ಮಣಿಕಾಂತ್, ತಮ್ಮ ವೃತ್ತಿಜೀವನದ ಇಪ್ಪತ್ತಕ್ಕೂ ಅಧಿಕ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಿನಿಮಾಗೆ ಸಂಗೀತ ಸಂಯೋಜಿಸುವ ಅವಕಾಶ ಲಭಿಸಿದೆ ಎನ್ನುತ್ತಾರೆ.

ಥೀಮ್ ಮ್ಯೂಸಿಕ್ ಮತ್ತು ಹಿನ್ನೆಲೆ ಸಂಗೀತದ ಹೊರತಾಗಿ, ಮಣಿಕಾಂತ್ ಪ್ರತಿ ಕಥೆಗೂ ಬಿಟ್ ಹಾಡುಗಳನ್ನು ಸಂಯೋಜಿಸಿದ್ದಾರೆ. 'ಐದು ಸಣ್ಣ ಕಥೆಗಳಿಗೆ ಬಿಟ್ ಹಾಡುಗಳನ್ನು ರಚಿಸುವಾಗ, ನಾನು ಸಂಗೀತವನ್ನು ಸಂಯೋಜಿಸುವ ಮುನ್ನ ಜನಾಂಗೀಯತೆ, ಪರಿಕಲ್ಪನೆ, ಭೌಗೋಳಿಕತೆ, ಪ್ರಕಾರ, ಪ್ರತಿ ವಿಷಯದ ಕಥಾವಸ್ತುವನ್ನು ನೋಡಬೇಕಾಗಿತ್ತು. ಏಕೆಂದರೆ, ಪ್ರತಿ ಕಥೆಯ ಪ್ರಭಾವವು ಸೆಟ್ಟಿಂಗ್ ಅನ್ನು ಅವಲಂಬಿಸಿರುತ್ತದೆ' ಎಂದು ಅವರು ಹೇಳುತ್ತಾರೆ.

ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ಪೆಂಟಗನ್‌ನಂತಹ ಚಿತ್ರಗಳು ಬಹಳಷ್ಟು ಯುವ ಚಲನಚಿತ್ರ ನಿರ್ದೇಶಕರಿಗೆ ಅಂತಹ ಪ್ರಕಾರಗಳನ್ನು ಪ್ರಯೋಗಿಸಲು ಸಹಾಯ ಮಾಡುತ್ತದೆ ಎಂದು ಮಣಿಕಾಂತ್ ಹೇಳುತ್ತಾರೆ.

ಗುರು ದೇಶಪಾಂಡೆಯವರ ಜಿ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ʻಪೆಂಟಗನ್’ ಸಿನಿಮಾದಲ್ಲಿ ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಬ್ರಹ್ಮಚಾರಿ’ ಖ್ಯಾತಿಯ ಚಂದ್ರ ಮೋಹನ್, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ಹೊಸ ಪ್ರತಿಭೆ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com