ಸಾಂಕ್ರಾಮಿಕ ರೋಗದ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಉತ್ಸವ್ ಗೊನ್ವಾರ್ ಅವರ 'ಫೋಟೋ'

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಚೊಚ್ಚಲ ನಿರ್ದೇಶಕ ಉತ್ಸವ್ ಗೊನ್ವಾರ್ ಅವರ 'ಫೋಟೋ' ಸಿನಿಮಾ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿದೆ. 
ಉತ್ಸವ್ ಗೋನ್ವಾರ್ ಅವರ ಫೋಟೋ ಸಿನಿಮಾದ ಸ್ಟಿಲ್
ಉತ್ಸವ್ ಗೋನ್ವಾರ್ ಅವರ ಫೋಟೋ ಸಿನಿಮಾದ ಸ್ಟಿಲ್
Updated on

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಚೊಚ್ಚಲ ನಿರ್ದೇಶಕ ಉತ್ಸವ್ ಗೊನ್ವಾರ್ ಅವರ 'ಫೋಟೋ' ಸಿನಿಮಾ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿದೆ. ರಾಯಚೂರು ಮೂಲದ ಉತ್ಸವ್ ಕಳೆದ ಏಳು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. ಕೋವಿಡ್-19 ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕಷ್ಟದ ಬಗ್ಗೆ ಲೇಖನವನ್ನು ಓದಿದ ನಂತರ ಈ ಕಥೆಯನ್ನು ಬರೆಯಲು ಮತ್ತು ಅದನ್ನು ಸಿನಿಮಾವನ್ನಾಗಿ ಮಾಡಲು ಸ್ಫೂರ್ತಿ ದೊರಕಿತು ಎನ್ನುತ್ತಾರೆ ಉತ್ಸವ್. 

ಫೋಟೋದ ಕಥೆಯು ಬೆಂಗಳೂರಿನಲ್ಲಿ ದಿನಗೂಲಿ ಮಾಡುವ ತಂದೆ ಮತ್ತು ಅವರ 10 ವರ್ಷದ ಮಗನ ಪ್ರಯಾಣವನ್ನು ಆಧರಿಸಿದೆ. ಸರ್ಕಾರದಿಂದ ಅನಿರೀಕ್ಷಿತ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿದ ನಂತರ ಅವರು ನಗರದಿಂದ 450 ಕಿಮೀ ದೂರದಲ್ಲಿರುವ ತಮ್ಮ ತವರು ರಾಯಚೂರಿಗೆ ಮರಳಲು ನಿರ್ಧರಿಸುತ್ತಾರೆ. ಅವರು ಸುಡುವ ಬಿಸಿಲಿನಲ್ಲಿ ನಡೆದುಕೊಂಡು ಹೋಗುವಾಗ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಈ ಪ್ರಯಾಣವು ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಥೆಯು ತೋರಿಸುತ್ತದೆ' ಎಂದು ಅವರು ಹೇಳುತ್ತಾರೆ.

ನಿರ್ದೇಶನದ ಹೊರತಾಗಿ ಉತ್ಸವ್ ಅವರು ಫಕೀರಪ್ಪ ಬಂಡಿವಾಡ್ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್, ಮತ್ತು ವೀರೇಶ್ ಗೊನ್ವಾರ್ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಅವರ ಛಾಯಾಗ್ರಹಣ ಮತ್ತು ರೈ ಹಿರೇಮಠ್ ಅವರ ಸಂಗೀತವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com