ಕರ್ನಾಟಕದಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಕಾಣಲಿದೆ ರಜಿನಿಕಾಂತ್-ಶಿವರಾಜ್‌ಕುಮಾರ್ ಅಭಿನಯದ ಜೈಲರ್!

ಕರ್ನಾಟಕದಾದ್ಯಂತ ಜಯಣ್ಣ ಫಿಲಂಸ್‌ ಜೈಲರ್ ಸಿನಿಮಾವನ್ನು ವಿತರಿಸಿದ್ದು, ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಬಹು ಭಾಷೆಗಳಲ್ಲಿ ಸರಿಸುಮಾರು 300 ಪರದೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 10ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ರಜಿನಿಕಾಂತ್ ನಟನೆಯ ಜೈಲರ್ ಸಿನಿಮಾ ಪೋಸ್ಟರ್
ರಜಿನಿಕಾಂತ್ ನಟನೆಯ ಜೈಲರ್ ಸಿನಿಮಾ ಪೋಸ್ಟರ್

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮುಂಬರುವ ಚಿತ್ರ ಜೈಲರ್ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 10ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟ ಶಿವರಾಜ್‌ಕುಮಾರ್ ನಟಿಸಿದ್ದು, ಇದು ಅವರ ಚೊಚ್ಚಲ ತಮಿಳು ಸಿನಿಮಾ ಆಗಿದೆ. ಹೀಗಾಗಿ, ಕರ್ನಾಟಕದಲ್ಲೂ ಚಿತ್ರದ ಬಗ್ಗೆ ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದೆ.

ಕರ್ನಾಟಕದಾದ್ಯಂತ ಜಯಣ್ಣ ಫಿಲಂಸ್‌ ಚಿತ್ರವನ್ನು ವಿತರಿಸಿದ್ದು, ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಬಹು ಭಾಷೆಗಳಲ್ಲಿ ಸರಿಸುಮಾರು 300 ಪರದೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಜೈಲರ್ ಅತಿಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕರ್ನಾಟಕದಾದ್ಯಂತ ಸಿಂಗಲ್ ಥಿಯೇಟರ್‌ಗಳಲ್ಲಿ 5 ರಿಂದ 6 ಪ್ರದರ್ಶನಗಳನ್ನು ಯೋಜಿಸಲಾಗಿದೆ. ಬೆಳಿಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಪ್ರಾರಂಭವಾಗಲಿದೆ ಎಂದು ಸ್ವತಃ ನಿರ್ಮಾಪಕ ಜಯಣ್ಣ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನಿಷ್ಠ 15 ರಿಂದ 20 ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಒಟ್ಟಾರೆಯಾಗಿ ಮೊದಲ ದಿನ ಜೈಲರ್ ಸಿನಿಮಾ 2500 ಪ್ರದರ್ಶನಗಳನ್ನು ಕಾಣಲಿದೆ. 'ಕರ್ನಾಟಕದಲ್ಲಿ ಜೈಲರ್‌ ಸಿನಿಮಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನ ಕಾಣುತ್ತಿರುವುದು ರಜಿನಿಕಾಂತ್ ಅವರ ವೃತ್ತಿಜೀವನದಲ್ಲಿಯೇ ಹೊಸ ಮೈಲಿಗಲ್ಲು' ಎಂದು ಜಯಣ್ಣ ಹೇಳುತ್ತಾರೆ. 

'ಚಿತ್ರದ ಸಾರವು ಭಾಷೆಯ ಅಡೆತಡೆಗಳನ್ನು ಮೀರಿದೆ. ರಜನಿಕಾಂತ್ ಅವರನ್ನು ಜಾಗತಿಕ ಸೂಪರ್‌ಸ್ಟಾರ್ ಆಗಿ ಮಾಡುತ್ತದೆ. ಇತರ ಗೌರವಾನ್ವಿತ ನಟರೊಂದಿಗೆ ಪ್ರಮುಖ ಪಾತ್ರದಲ್ಲಿ ಕನ್ನಡದ ನಟ ಶಿವರಾಜ್‌ಕುಮಾರ್ ನಟಿಸುತ್ತಿರುವುದು ದಾಖಲೆಗಳನ್ನು ಮುರಿಯುವ ಸಾಧನೆಗೆ ಹೆಚ್ಚುವರಿ ಬೋನಸ್ ನೀಡಿದಂತಾಗಿದೆ' ಎನ್ನುತ್ತಾರೆ ಜಯಣ್ಣ.

<strong>ರಜಿನಿಕಾಂತ್</strong>
ರಜಿನಿಕಾಂತ್

ಚಿತ್ರದಲ್ಲಿ ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ವಸಂತ್ ರವಿ, ಯೋಗಿ ಬಾಬು ಮತ್ತು ರೆಡಿಂಗ್ ಕಿಂಗ್ಸ್ಲಿ ಮುಂತಾದ ನಟರು ಇದ್ದಾರೆ. ಅನಿರುದ್ಧ್ ರವಿಚಂದರ್ ಸಂಯೋಜಿಸಿದ ನೀ ಕಾವಾಲಯ್ಯ ಎಂಬ ಆಕರ್ಷಕ ಗೀತೆಯು ತಮನ್ನಾ ಭಾಟಿಯಾರ ನೃತ್ಯದೊಂದಿಗೆ ಚಿತ್ರಕ್ಕೆ ಗ್ಲಾಮರ್ ಸ್ಪರ್ಶ ನೀಡಿದೆ.

ಜಯಣ್ಣ ಫಿಲಂಸ್‌ನ ವಿತರಣೆಯು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಸಿನಿಮಾ ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಕರ್ನಾಟಕದಾದ್ಯಂತ 2500+ ಪ್ರದರ್ಶನಗಳನ್ನು ಹೊಂದಿದೆ ಎಂದು ಖಚಿತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com