'ಗೊಂಬೆಗಳ ಲವ್' ಖ್ಯಾತಿಯ ನಟ ಅರುಣ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಪ್ರಮುಖ ಪಾತ್ರ!

ಗೊಂಬೆಗಳ ಲವ್ (2013) ಚಿತ್ರದ ಮೂಲಕ ಹೆಸರಾದ ನಟ ಅರುಣ್ ಕುಮಾರ್ ಇದೀಗ ನಿರ್ದೇಶನಕ್ಕಿಳಿದಿದ್ದಾರೆ. ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಆ್ಯಕ್ಷನ್ ಎಂಟರ್‌ಟೈನರ್‌ನೊಂದಿಗೆ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ. 
ವಿನೋದ್ ಪ್ರಭಾಕರ್ - ಅರುಣ್ ಕುಮಾರ್
ವಿನೋದ್ ಪ್ರಭಾಕರ್ - ಅರುಣ್ ಕುಮಾರ್

ಗೊಂಬೆಗಳ ಲವ್ (2013) ಚಿತ್ರದ ಮೂಲಕ ಹೆಸರಾದ ನಟ ಅರುಣ್ ಕುಮಾರ್ ಇದೀಗ ನಿರ್ದೇಶನಕ್ಕಿಳಿದಿದ್ದಾರೆ. ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಆ್ಯಕ್ಷನ್ ಎಂಟರ್‌ಟೈನರ್‌ನೊಂದಿಗೆ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮುಂಬರುವ ಚಿತ್ರವು ಚಾಮರಾಜನಗರದ ಹಿನ್ನಲೆಯಲ್ಲಿ ಮೂಡಿಬರಲಿರುವ ಗ್ಯಾಂಗ್‌ಸ್ಟರ್ ಸಿನಿಮಾ ಎಂದು ಹೇಳಲಾಗುತ್ತಿದೆ.

ಚಾಮರಾಜನಗರ ಎಂದ ಕೂಡಲೇ ಕಾಡುಗಳ್ಳ ವೀರಪ್ಪನ್ ಚಿತ್ರಣ ಕಣ್ಣಮುಂದೆ ಬರುತ್ತದೆ. ಆದರೆ, ಈ ಸಿನಿಮಾವು ಗ್ಯಾಗ್‌ಸ್ಟರ್‌ಗಳಾಗಿದ್ದುಕೊಂಡು ಕಡಿಮೆ ಪ್ರಭಾವ ಬೀರಿದ ಇತರ ಕಥೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಕಥೆಯು ಈವರೆಗೆ ಅನ್ವೇಷಿಸದ ಹೊಸ ಪ್ರದೇಶವನ್ನು ಅನ್ವೇಶಿಸುತ್ತದೆ ಎನ್ನುತ್ತಾರೆ ಅರುಣ್ ಕುಮಾರ್. ಈ ಸಿನಿಮಾದ ಅಧಿಕೃತ ಘೋಷಣೆ ಕಾರ್ಯಕ್ರಮವನ್ನು ಶುಕ್ರವಾರ ನಿಗದಿಪಡಿಸಲಾಗಿದೆ. ಈ ವೇಳೆ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಸಹ ಯೋಜಿಸಿದ್ದಾರೆ.

'ನಿರ್ದೇಶನಕ್ಕಿಳಿಯಲು ಸಜ್ಜಾಗುತ್ತಿರುವಾಗಲೇ ನಾನು ನಟನಾಗಿ ಗುರುತಿಸಿಕೊಂಡೆ. ಕಾಕತಾಳೀಯ ಎಂಬಂತೆ ನಾನು ಗೊಂಬೆಗಳ ಲವ್ ಚಿತ್ರದಲ್ಲಿ ನಟಿಸಿದ್ದೇನೆ. ಅದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು' ಎನ್ನುತ್ತಾರೆ ಅರುಣ್.

ಈ ಅನುಭವವು ಒಂದು ಪ್ರಮುಖ ಅಂಶವಾಯಿತು. ನಿರ್ದೇಶನದ ನನ್ನ ದಂಡಯಾತ್ರೆಯನ್ನು ಪ್ರಾರಂಭಿಸಲು ಸರಿಯಾದ ಅವಕಾಶ ಮತ್ತು ಬಲವಾದ ಕಂಟೆಂಟ್‌ಗಾಗಿ ಕಾಯಲು ನನ್ನನ್ನು ಪ್ರೇರೇಪಿಸಿತು. ಇದು ಗ್ಯಾಂಗ್‌ಸ್ಟರ್ ಸುತ್ತ ಸುತ್ತುವ ಕಥೆಯನ್ನು ಒಳಗೊಂಡಿದೆ. ಇದು ನನ್ನ ನಿರ್ದೇಶನದ ಆಕಾಂಕ್ಷೆಗಳಿಗೆ ಪರಿಪೂರ್ಣ ಲಾಂಚ್‌ಪ್ಯಾಡ್ ಎಂದು ನಾನು ನಂಬುತ್ತೇನೆ ಎಂದು ಹೇಳುತ್ತಾರೆ.

ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ಗೋಪಾಲ ಕೃಷ್ಣ ದೇಶಪಾಂಡೆ ಕೂಡ ನಟಿಸಲಿದ್ದಾರೆ. ಇನ್ನುಳಿದ ತಾರಾಗಣವನ್ನು ಅಂತಿಮಗೊಳಿಸಲು ಚಿತ್ರತಂಡ ಮುಂದಾಗಿದೆ. ತಾಜಾ, ಉದಯೋನ್ಮುಖ ಪ್ರತಿಭೆಗಳನ್ನು ಚಿತ್ರಕ್ಕೆ ಪರಿಗಣಿಸಲು ಯೋಜಿಸಲಾಗಿದೆ. ನಿರ್ಮಾಪಕ ಬಿಎಂ ಶ್ರೀರಾಮ್ (ಕೋಲಾರ) ಅವರ ಬೆಂಬಲದೊಂದಿಗೆ ಈ ಸಿನಿಮಾ ಪ್ರಮುಖ ತಂತ್ರಜ್ಞರನ್ನು ಹೊಂದಿದೆ.

ಚಿತ್ರಕ್ಕೆ ಪ್ರಜ್ವಲ್ ಗೌಡ ಅವರ ಛಾಯಾಗ್ರಹಣ ಮತ್ತು ಭರತ್ ಬಿಜಿ ಅವರ ಸಂಗೀತವಿದೆ. ಹರಿ ಮಹದೇವ್ ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗೆ ಬಾಲಿವುಡ್ ಚಿತ್ರ ಗದ್ದರ್ 2 ರ ಭಾಗವಾಗಿದ್ದ ಸ್ಟಂಟ್ ಮಾಸ್ಟರ್ ರವಿ ವರ್ಮಾ ಅವರು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಸಂಯೋಜನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com