Ardhambardha Premakathe: ಅವಕಾಶ ಸಿಕ್ಕರೆ ಮತ್ತೆ ಅರವಿಂದ್ ಕೆಪಿ ಜೊತೆಗೆ ನಟಿಸುವೆ; ದಿವ್ಯಾ ಉರುಡುಗ

ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಕೆಪಿ ಅರವಿಂದ್ ಅವರು ಅರವಿಂದ್ ಕೌಶಿಕ್ ನಿರ್ದೇಶನದ 'ಅರ್ಧಂಬರ್ಧ ಪ್ರೇಮಕಥೆ'ಯಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ದಿವ್ಯಾ ಉರುಡುಗ, ಅರವಿಂದ್ ಜೊತೆ ಸಿನಿಮಾದಲ್ಲಿ ನಟಿಸಬಹುದು ಎಂದು ಆಕೆ ಎಂದಾದರೂ ಭಾವಿಸಿದ್ದರೇ? ಎಂಬ ಪ್ರಶ್ನೆಗೆ, 'ಇಲ್ಲ. ಅವರ ನಟನಾ ಕೌಶಲ್ಯ
ಅರ್ಧಂಬರ್ದ ಪ್ರೇಮಕಥೆ ಚಿತ್ರದ ಸ್ಟಿಲ್
ಅರ್ಧಂಬರ್ದ ಪ್ರೇಮಕಥೆ ಚಿತ್ರದ ಸ್ಟಿಲ್

ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಕೆಪಿ ಅರವಿಂದ್ ಅವರು ಅರವಿಂದ್ ಕೌಶಿಕ್ ನಿರ್ದೇಶನದ 'ಅರ್ಧಂಬರ್ಧ ಪ್ರೇಮಕಥೆ'ಯಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ಎಕ್ಸ್‌ಪ್ರೆಸ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ದಿವ್ಯಾ ಉರುಡುಗ, ಅರವಿಂದ್ ಜೊತೆ ಸಿನಿಮಾದಲ್ಲಿ ನಟಿಸಬಹುದು ಎಂದು ಆಕೆ ಎಂದಾದರೂ ಭಾವಿಸಿದ್ದರೇ? ಎಂಬ ಪ್ರಶ್ನೆಗೆ ಉತ್ತರಿಸುವ ಅವರು, 'ಇಲ್ಲ. ಅವರ ನಟನಾ ಕೌಶಲ್ಯದ ಬಗ್ಗೆ ನನಗೆ ತಿಳಿದಿರಲಿಲ್ಲ' ಎನ್ನುತ್ತಾರೆ.

'ನಾವಿಬ್ಬರೂ ವಿಭಿನ್ನ ವೃತ್ತಿಗಳನ್ನು ಹೊಂದಿದ್ದೇವೆ ಮತ್ತು ಅವರು ಎಂದಿಗೂ ನಟನೆಯನ್ನು ಪರಿಗಣಿಸಿರಲಿಲ್ಲ. ನಿರ್ದೇಶಕ ಅರವಿಂದ್ ಕೌಶಿಕ್ ಅವರೊಂದಿಗಿನ ಮಾತುಕತೆ ನಂತರ ನಟನೆಗೆ ಒಪ್ಪಿಕೊಂಡರು. ಅವರ ಮತ್ತು ನನ್ನ ನಡುವಿನ ಕೆಮಿಸ್ಟ್ರಿಯನ್ನು ಗಮನಿಸಿದ ನಿರ್ದೇಶಕರು, ಅರವಿಂದ್ ಅವರನ್ನು ಆಯ್ಕೆಮಾಡಿದರು. ನಟನೆ ಬಗ್ಗೆ ನಿರ್ಧರಿಸಲು ಅರವಿಂದ್ ಒಂದೆರಡು ದಿನಗಳನ್ನು ತೆಗೆದುಕೊಂಡರು' ಎಂದು ದಿವ್ಯಾ ಹೇಳುತ್ತಾರೆ. 

'ಇದು ಸಂಪೂರ್ಣವಾಗಿ ಅರವಿಂದ್ ಅವರ ನಿರ್ಧಾರವಾಗಿದ್ದು, ನಾನು ಒತ್ತಾಯ ಮಾಡಿಲ್ಲ. ಅವರಿಗೆ ಪರಿಚಯವಿಲ್ಲದ ಕೆಲಸಕ್ಕೆ ಅವರನ್ನು ತಳ್ಳಲು ನಾನು ಬಯಸಲಿಲ್ಲ. ಈ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನನಗೆ ಅನಿಸಿತು. ಅವರು, ನಟನೆಗೆ ಒಪ್ಪುತ್ತಾರೆ ಎಂದು ನನಗನಿಸುತ್ತಿತ್ತು. ಆದರೆ, ಅವರು ಒಪ್ಪುವವರೆಗೂ ನಾನು ಅದನ್ನು ವ್ಯಕ್ತಪಡಿಸಿರಲಿಲ್ಲ. ನಂತರ ನಾನು ರೋಮಾಂಚನಗೊಂಡೆ' ಎನ್ನುತ್ತಾರೆ.

ಸ್ಕ್ರಿಪ್ಟಿಂಗ್ ಹಂತದ ಅರ್ಧದಲ್ಲೇ ನಿರ್ದೇಶಕರು ಚಿತ್ರದ ಶೀರ್ಷಿಕೆಯನ್ನು ಅರ್ಧಂಬರ್ದ ಪ್ರೇಮಕಥೆ ಎಂದು ಆಯ್ಕೆ ಮಾಡಿದ್ದರು. 'ವಾಸ್ತವವಾಗಿ, ಯಾವುದೇ ಪ್ರೇಮಕಥೆಯು ನಿಜವಾಗಿಯೂ ಮುಕ್ತಾಯಗೊಳ್ಳುವುದಿಲ್ಲ; ಇದು ಕೊನೆಯವರೆಗೂ ನಡೆಯುತ್ತಿರುವ ಕಲಿಕೆಯ ಅನುಭವವಾಗಿರುತ್ತದೆ. ಆದ್ದರಿಂದ, ಒಂದು ರೀತಿಯಲ್ಲಿ ಎಲ್ಲಾ ಪ್ರೇಮಕಥೆಗಳು ಅಪೂರ್ಣವಾಗಿಯೇ ಉಳಿದಿರುತ್ತವೆ. ನಮ್ಮ ಚಿತ್ರದ ಶೀರ್ಷಿಕೆಯ ಪ್ರಸ್ತುತತೆಯ ಹೇಳುವುದಾದರೆ, ಪ್ರೀತಿಯು ಮದುವೆಯ ನಂತರವೂ ಕಲಿಕೆಯ ಭಾಗವಾಗಿಯೇ ಇರುತ್ತದೆ. ಸಾಗಬೇಕಿರುವ ದಾರಿ ಬಹಳಷ್ಟಿದೆ. ಪ್ರೀತಿ ಎಂದರೆ ನಿಮಗಿಂತ ಮೊದಲು ಇನ್ನೊಬ್ಬರನ್ನು ನಿಮ್ಮ ಮುಂದಿಡುವುದಾಗಿದೆ' ಎಂದು ದಿವ್ಯಾ ವಿವರಿಸುತ್ತಾರೆ. 

'ತನ್ನ ಪಾತ್ರವು ಸಮಾಜದ ಲಕ್ಷಾಂತರ ಮಹಿಳೆಯರನ್ನು ಪ್ರತಿಬಿಂಬಿಸುತ್ತದೆ. ಸರಳವಾದ ಸಮಸ್ಯೆಗಳ ಬಗ್ಗೆಯೂ ಭಯಭೀತರಾಗುವ, ಅವುಗಳನ್ನು ಗಂಭೀರವಾಗಿ ಪರಿಗಣಿಸುವ ಮತ್ತು ಬೇಗ ಕೋಪಗೊಳ್ಳುವ ಮಹಿಳೆಯ ಪಾತ್ರ ಅದಾಗಿದೆ. ಆಕೆ ಒಂದು ಮಹತ್ವದ ಸನ್ನಿವೇಶವನ್ನು ಹೇಗೆ ಎದುರಿಸುತ್ತಾಳೆ ಎಂಬುದನ್ನು ಆಕೆಯ ಪಾತ್ರ ವಿವರಿಸುತ್ತದೆ. ಆ ಪಾತ್ರ ತುಂಬಾ ಉತ್ತಮವಾಗಿದೆ ಆದರೆ, ಇನ್ನೂ ಸ್ವಲ್ಪ ತಿಳುವಳಿಕೆಯ ಅಗತ್ಯವಿರುವ ಪಾತ್ರ ಎಂದು ನಾನು ನಂಬುತ್ತೇನೆ. ಇದು ಹೆಚ್ಚಿನ ಮಹಿಳೆಯರನ್ನು ಪ್ರತಿನಿಧಿಸುತ್ತದೆ. ನಿಜ ಜೀವನದಲ್ಲಿ, ನಾನು ಇದಕ್ಕೆ ತದ್ವಿರುದ್ಧ. ನಾನು ಸಮತೋಲನದಿಂದ ದೊಡ್ಡ ಸಮಸ್ಯೆಗಳನ್ನು ಸಹ ನಿರ್ವಹಿಸುತ್ತೇನೆ' ಎಂದು ಹೇಳಿದರು.

ಅರವಿಂದ್ ಅವರನ್ನು ಶ್ಲಾಘಿಸುತ್ತಾ, 'ಅರವಿಂದ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ನಿರ್ಧರಿಸಿದಾಗ, ಅವರು ವಿದ್ಯಾರ್ಥಿಯಾಗಿ ನಿರ್ದೇಶಕರನ್ನು ಸಂಪರ್ಕಿಸಿದರು. ಬಲವಾದ ಗ್ರಹಿಕೆ ಮತ್ತು ಸಮರ್ಪಣೆಯನ್ನು ಹೊಂದಿದ್ದರು. ತ್ವರಿತವಾಗಿ ಕಲಿಯುವ, ಅವರು ಯಾವಾಗಲೂ ಸೆಟ್‌ನಲ್ಲಿ ವಿಷಯಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದರು. ನಾನು ಅವರಿಗೆ ಕೇವಲ ಮೂಲಭೂತ ಅಂಶಗಳನ್ನು ಕಲಿಸಿದೆ' ಎನ್ನುತ್ತಾರೆ.

ದಿವ್ಯಾ ಅರವಿಂದ್‌ ಅವರೊಂದಿಗೆ ಮತ್ತೆ ನಟಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. 'ಈ ವೃತ್ತಿ ಜೀವನದಲ್ಲಿ ಒಟ್ಟಿಗೆ ಬೆಳೆಯೋಣ ಎಂದು ನಾನು ಅವರಿಗೆ ಹೇಳಿದ್ದೇನೆ. ಆದರೆ, ನಾವಿಬ್ಬರೂ ಪುನರಾವರ್ತಿತ ನಟನೆಯನ್ನು ಒತ್ತಾಯಿಸಲು ಬಯಸುವುದಿಲ್ಲ ಮತ್ತು ಇದರಿಂದ ಪರದೆಯ ಮೇಲೆ ಏಕತಾನತೆಯ ಅಪಾಯ ಎದುರಾಗುತ್ತದೆ ಎಂದು ದಿವ್ಯಾ ತಮ್ಮ ಮಾತನ್ನು ಮುಗಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com