Ardhambardha Premakathe: ಪ್ರೀತಿ ಎಂದರೆ ಪ್ರತಿಬಿಂಬ ಮತ್ತು ಬೆಳವಣಿಗೆ ಎನ್ನುತ್ತಾರೆ ರೇಸರ್ ಅರವಿಂದ ಕೆಪಿ

ರಾಷ್ಟ್ರಮಟ್ಟದ ರೇಸರ್ ಆಗಿರುವ ಅರವಿಂದ್ ಕೆಪಿ ಅವರಿಗೆ ನಟನೆ ಎನ್ನುವುದು ಹೊಸದು. ತಾನು ನಟಿಸುತ್ತೇನೆ ಎಂದು ಅವರೇ ಅಂದುಕೊಂಡಿರಲಿಲ್ಲ. ನಟಿ ದಿವ್ಯಾ ಉರುಡುಗ ಅವರ ಪರಿಚಯವಾದ ನಂತರ ಬೈಕಿಂಗ್ ಹೊರತಾಗಿ ವಿವಿಧ ಕಲಾತ್ಮಕ ಅಂಶಗಳನ್ನು ಅನ್ವೇಷಿಸಲು ಅವಕಾಶಗಳಿವೆ ಎಂಬುದು ತಿಳಿಯಿತು ಎಂದು ಅವರು ಒಪ್ಪಿಕೊಳ್ಳುತ್ತಾರೆ.
ಅರ್ಧಂಬರ್ದ ಪ್ರೇಮಕಥೆ ಚಿತ್ರದ ಪೋಸ್ಟರ್‌ಗಳು
ಅರ್ಧಂಬರ್ದ ಪ್ರೇಮಕಥೆ ಚಿತ್ರದ ಪೋಸ್ಟರ್‌ಗಳು
Updated on

ರಾಷ್ಟ್ರಮಟ್ಟದ ಬೈಕ್ ರೇಸರ್ ಆಗಿರುವ ಅರವಿಂದ್ ಕೆಪಿ ಅವರಿಗೆ ನಟನೆ ಎನ್ನುವುದು ಹೊಸದು. ತಾನು ನಟಿಸುತ್ತೇನೆ ಎಂದು ಅವರೇ ಅಂದುಕೊಂಡಿರಲಿಲ್ಲ. 'ನಾನು ಬೈಕರ್ ಆಗಬೇಕೆಂದು ನಿರ್ಧರಿಸಿದಾಗ ನನ್ನ ಪೋಷಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇ ನಾನು ಮಾಡಿದ ಏಕೈಕ ನಟನೆಯಾಗಿತ್ತು. ಉಳಿದಂತೆ, ಶಾಲೆಯಲ್ಲಿ ಕೆಲವು ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ನಾಟಕಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ಆದರೆ, ಎಂದಿಗೂ ನಟನೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ' ಎಂದು ಅರವಿಂದ್ ಹೇಳಿದರು. 

ನಟಿ ದಿವ್ಯಾ ಉರುಡುಗ ಅವರ ಪರಿಚಯವಾದ ನಂತರ ಬೈಕಿಂಗ್ ಹೊರತಾಗಿಯೂ ವಿವಿಧ ಕಲಾತ್ಮಕ ಅಂಶಗಳನ್ನು ಅನ್ವೇಷಿಸಲು ಅವಕಾಶಗಳಿವೆ ಎಂಬುದು ನನಗೆ ತಿಳಿಯಿತು ಎಂದು ಅವರು ಒಪ್ಪಿಕೊಂಡರು.

ತನ್ನನ್ನು ಪ್ರಮುಖ ಪಾತ್ರಕ್ಕೆ ಪರಿಗಣಿಸುವ ನಿರ್ದೇಶಕರ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅರವಿಂದ್, 'ನಾನು ಮಲಯಾಳಂ ಚಿತ್ರ ಬೆಂಗಳೂರು ಡೇಸ್ ಮತ್ತು ಪ್ರೀತಂ ಗುಬ್ಬಿ ಅವರ ನಾನು ಮತ್ತು ವರಲಕ್ಷ್ಮಿಯಲ್ಲಿ ಕೆಪಿ ಅರವಿಂದ್ ಎಂಬ ಬೈಕರ್ ಆಗಿ ನಟಿಸಿದ್ದೇನೆ. ನಾನು ಆರಂಭದಲ್ಲಿ ಸಂದೇಹ ಹೊಂದಿದ್ದೆ, ಆದರೆ ಆಲೋಚನೆಯು ನನ್ನೊಂದಿಗೆ ಅಂಟಿಕೊಂಡಿತು. ಅನೇಕ ಜನರು ಅಂತಹ ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತಾರೆ ಮತ್ತು ಇದು ನನಗೆ ತುಂಬಾ ಸುಲಭವಾಗಿ ಸಿಕ್ಕ ಅವಕಾಶ. ಸವಾಲುಗಳನ್ನು ಎದುರಿಸುವವನಾಗಿದ್ದ ನಾನು, ‘ಅದನ್ನು ಏಕೆ ಸ್ವೀಕರಿಸಬಾರದು ಮತ್ತು ನಾನು ಏನು ಮಾಡಬಲ್ಲೆ ಎಂದು ಏಕೆ ನೋಡಬಾರದು? ಎಂದುಕೊಂಡೆ. ವಿಶೇಷವಾಗಿ ದಿವ್ಯಾ ಮತ್ತು ನನ್ನ ಅಭಿಮಾನಿಗಳಿಗೆ ನಾವು ಒಟ್ಟಾಗಿ ನಟಿಸುವುದು ವಿಶೇಷ ಕೊಡುಗೆಯಾಗಿದೆ' ಎಂದು ತಿಳಿಸಿದರು.

ತನ್ನ ಶೂಟಿಂಗ್ ಅನುಭವವನ್ನು ಹಂಚಿಕೊಳ್ಳುತ್ತಾ, 'ಶೂಟಿಂಗ್ ಪ್ರಾರಂಭಿಸುವ ಮೊದಲು ನಾನು ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಆದರೆ, ಸೆಟ್‌ನಲ್ಲಿ ಅವರು 'ಆಕ್ಷನ್' ಎಂದು ಹೇಳಿದಾಗ, ನಾನು ಬ್ಲಾಂಕ್ ಆಗುತ್ತಿದ್ದೆ. ನಾಚಿಕೆ ಮತ್ತು ಕಡಿಮೆ ಅಭಿವ್ಯಕ್ತಿಶೀಲ ವ್ಯಕ್ತಿಯಾಗಿದ್ದ ನನಗೆ, ಆರಂಭದಲ್ಲಿ ತುಂಬಾ ಕಷ್ಟವಾಗಿತ್ತು. ಆದರೆ, ನಾನು ಅದನ್ನು ಕ್ರಮೇಣ ಜಯಿಸಲು ಕಾರ್ಯನಿರ್ವಹಿಸುತ್ತಿದ್ದೆ. ಅದೃಷ್ಟವಶಾತ್, ಅರವಿಂದ್ ಕೌಶಿಕ್ ಮತ್ತು ದಿವ್ಯಾ ಉರುಡುಗ ಅವರಂತಹ ಮಾರ್ಗದರ್ಶಕರನ್ನು ಹೊಂದಿದ್ದು ನನಗೆ ನೆರವಾಯಿತು. ಪ್ರತಿದಿನವು ಕಾರ್ಯಾಗಾರದಂತೆ ಭಾಸವಾಗುತ್ತಿತ್ತು ಮತ್ತು ಕಲಿಯಲು ಉತ್ತಮ ಸ್ಥಳವಾಗಿದೆ ಎನಿಸುತ್ತಿತ್ತು. ರೇಸಿಂಗ್ ನಮಗೆ ಭಾವನಾತ್ಮಕವಾಗಿಲ್ಲದಿರಲು ಕಲಿಸಿತು ಮತ್ತು ನಟನೆಯು ಭಾವನಾತ್ಮಕವಾಗಿರುವುದನ್ನು ಕಲಿಸುತ್ತದೆ. ಪ್ರತಿ ಪ್ರಕ್ರಿಯೆಯೂ ನನ್ನನ್ನು ಆಕರ್ಷಿಸಿತು. ನಾನು ನಟನೆಯಲ್ಲಿ ಭಾವನಾತ್ಮಕವಾಗಿ ಓಡುವುದನ್ನು ಕಲಿತಿದ್ದೇನೆ' ಎಂದು ಹೇಳಿದರು.

ಅರ್ಧಂಬರ್ದ ಪ್ರೇಮಕಥೆ ಕುರಿತು ಮಾತನಾಡುವ ಅರವಿಂದ್, 'ಈ ಕ್ಷಣದಲ್ಲಿ ಬದುಕಿ, ಭೂತಕಾಲದಲ್ಲಿ ಸಿಲುಕಬೇಡಿ ಅಥವಾ ಭವಿಷ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸಬೇಡಿ. ನಿನ್ನೆ ಬಂದ ಜನರು ಹತ್ತು ವರ್ಷಗಳಿಂದ ಜೊತೆ ಇರುವವರಿಗಿಂತ ಉತ್ತಮ ಉದ್ದೇಶಗಳನ್ನು ಹೊಂದಿರಬಹುದು. ಸಾಕಷ್ಟು ಗೊಂದಲಗಳು ಎದುರಾಗಬಹುದು, ಆದರೆ ನೀವು ನಿಮ್ಮ ಸಂಬಂಧಗಳಿಗೆ ಅಂಟಿಕೊಳ್ಳಬೇಕು ಮತ್ತು ಅವುಗಳನ್ನು ಗೌರವಿಸಬೇಕು' ಎಂದರು.

'ಪ್ರೀತಿ ಎನ್ನುವುದು ಪ್ರತಿಬಿಂಬ ಮತ್ತು ಬೆಳವಣಿಗೆಯಾಗಿದೆ. ಯಾವುದೇ ವ್ಯಕ್ತಿಯ ಬಗ್ಗೆ ತಿಳಿದುಕೊಂಡ ನಂತರ ಸ್ವೀಕಾರ ಬರುತ್ತದೆ. ನೀವಿಬ್ಬರೂ ಒಬ್ಬರಿಗೊಬ್ಬರು ಬೆಳೆಯಲು ಸಹಾಯ ಮಾಡುತ್ತೀರಿ. ನಾವಿಬ್ಬರೂ ಮುಂದಿನ ವರ್ಷದ ಆರಂಭದಲ್ಲಿ ಅರವಿಂದ್ ಕೌಶಿಕ್ ಅವರ ಎಪಿಕೆ 2 (ಅರ್ಧಂಬರ್ದ ಪ್ರೇಮಕಥೆ ಭಾಗ 2) ಅನ್ನು ಪ್ರಾರಂಭಿಸುತ್ತೇವೆ' ಎಂದು ಅವರು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com