ರವಿಕೆ ಪ್ರಸಂಗ ಚಿತ್ರದ ಮೆಲೋಡಿ ಹಾಡು 'ಮನಸಲ್ಲಿ ಜೋರು ಕಲರವ' ಬಿಡುಗಡೆ

ಚಿತ್ರದ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿರುವ ರವಿಕೆ ಪ್ರಸಂಗ ಚಿತ್ರದ 'ಮನಸಲಿ ಜೋರು ಕಲರವ' ಎಂಬ ರೊಮ್ಯಾಂಟಿಕ್ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅನಾವರಣಗೊಳಿಸಿದ್ದಾರೆ. 
ರವಿಕೆ ಪ್ರಸಂಗ ಚಿತ್ರದ ಸ್ಟಿಲ್
ರವಿಕೆ ಪ್ರಸಂಗ ಚಿತ್ರದ ಸ್ಟಿಲ್
Updated on

ಚಿತ್ರದ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿರುವ ರವಿಕೆ ಪ್ರಸಂಗ ಚಿತ್ರದ 'ಮನಸಲಿ ಜೋರು ಕಲರವ' ಎಂಬ ರೊಮ್ಯಾಂಟಿಕ್ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅನಾವರಣಗೊಳಿಸಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಕಿರಣ್ ಕಾವೇರಪ್ಪ ಬರೆದಿದ್ದು, ಮಾನಸ್ ಹೊಳಲು ಧ್ವನಿ ನೀಡಿದ್ದು, ವಿನಯ್ ಶರ್ಮಾ ಅವರು ಸಂಗೀತ ಸಂಯೋಜಿಸಿದ್ದಾರೆ.

ರವಿಕೆ ಪ್ರಸಂಗ ಚಿತ್ರದ ಕಥೆಯನ್ನು ಪವನ ಸಂತೋಷ್ ಬರೆದಿದ್ದು, ಸಂಭಾಷಣೆಯನ್ನೂ ಬರೆದಿದ್ದಾರೆ. ಚಿತ್ರಕಥೆ ಮತ್ತು ನಿರ್ದೇಶನವನ್ನು ಸಂತೋಷ್ ಕೊಡಂಕೇರಿ ನಿರ್ವಹಿಸಿದ್ದಾರೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. 

'ಮೆಲೋಡಿ ಹಾಡುಗಳು ಯಾವಾಗಲೂ ಜನರ ಜೀವನದ ಅವಿಭಾಜ್ಯ ಅಂಗವಾಗಿ ಉಳಿಯುತ್ತವೆ. ಈ ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ, ಮನಸಲಿ ಜೋರು ಕಲರವ ಕನ್ನಡದ ಎವರ್‌ಗ್ರೀನ್ ಸೂಪರ್-ಹಿಟ್ ಮೆಲೋಡಿಗಳಲ್ಲಿ ಒಂದಾಗಲಿದೆ ಎಂದು ಹೇಳುತ್ತಾರೆ ನಿರ್ದೇಶಕ ಸಂತೋಷ್. ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಅವರು ಹೊಂದಿದ್ದಾರೆ.

<strong>ಸಂತೋಷ ಕೊಡೆಂಕೇರಿ, ಗುರುಕಿರಣ್ ಮತ್ತು ಪಾವನ</strong>
ಸಂತೋಷ ಕೊಡೆಂಕೇರಿ, ಗುರುಕಿರಣ್ ಮತ್ತು ಪಾವನ

ದಕ್ಷಿಣ ಕನ್ನಡದ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಚಿತ್ರವು ನಾಯಕಿ ಸಾನ್ವಿಯ ಸುತ್ತ ಸುತ್ತುತ್ತದೆ. ಗೀತಾ ಭಾರತಿ ಭಟ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವರನನ್ನು ಹುಡುಕುತ್ತಿರುತ್ತಾರೆ ಮತ್ತು ಮದುವೆಗೆ ಎನ್ಆರ್‌ಐ ಪ್ರಸ್ತಾಪವೊಂದನ್ನು ಸ್ವೀಕರಿಸುತ್ತಾರೆ. ಆದಾಗ್ಯೂ, ರವಿಕೆಯನ್ನು ಹೊಲಿಸಲು ಟೈಲರ್‌ ಬಳಿ ತೆರಳಿದಾಗ ಉಂಟಾಗುವ ತಿರುವುಗಳ ಬಗ್ಗೆ ಚಿತ್ರವು ಹೇಳುತ್ತದೆ. ಈ ಘಟನೆಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ.

ಚಿತ್ರದಲ್ಲಿ ಸುಮನ್ ರಂಗನಾಥ್ ನ್ಯಾಯಾಧೀಶೆಯಾಗಿ, ರಾಕೇಶ್ ಮೈಯ್ಯ ವಕೀಲರಾಗಿ, ಸಂಪತ್ ಮೈತ್ರಿಯಾ ಟೈಲರ್ ಆಗಿ, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕಾಟಾರ್, ಪ್ರವೀಣ್ ಅಥರ್ವ, ರಘು ಪಾದೇಶ್ವರ್, ಕುಶಿ ಆಚಾರ್ ಮತ್ತು ರಾಹು ಪಾದೇಶ್ವರ್ ಸಹ ನಟಿಸಿದ್ದಾರೆ. ರವಿಕೆ ಪ್ರಸಂಗ ಚಿತ್ರಕ್ಕೆ ಮುರಳೀಧರ್ ಎನ್. ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com